Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕೊನೆಗೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ

*ಆರು ತಿಂಗಳಿAದ ನಡೆಯುತ್ತಿದ್ದ ಕುರ್ಚಿ ಕದನಕ್ಕೆ ಬಿತ್ತು ಬ್ರೇಕ್*ರಾಷ್ಟç ರಾಜಕಾರಣಕ್ಕೆ ಹೋಗಲ್ಲ ಎಂದ ಸಿದ್ದರಾಮಯ್ಯ*ಸಹಕಾರ ಕೋಡಿ ಎಂದು ಸಿದ್ದರಾಮಯ್ಯ ಕಾಲಿಗೆ ಬಿದ್ದ ಡಿ.ಕೆ.ಶಿವಕುಮಾರ್*ಸಿದ್ದರಾಮಯ್ಯ ರಾಜೀನಾಮೆ ವಿರೋಧಿಸಿ ಅಭಿಮಾನಿಗಳಿಂದ ಪ್ರತಿಭಟನೆ

ಬೆಂಗಳೂರು: ಕೊನೆಗೂ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಸಿಎಂ ಪಟ್ಟಕ್ಕಾಗಿ ಕಳೆದ ಆರು ತಿಂಗಳಿAದ ನಡೆಯುತ್ತಿದ್ದ ಕುರ್ಚಿ ಕದನಕ್ಕೆ ಬ್ರೇಕ್ ಬಿದ್ದಿದೆ. ಅಧಿಕಾರ ತ್ಯಾಗ ಮಾಡಿದರೂ ರಾಷ್ಟç ರಾಜಕಾರಣಕ್ಕೆ ಹೋಗುವುದಿಲ್ಲ, ರಾಜ್ಯ ರಾಜಕಾರಣದಲ್ಲಿಯೇ ಸq್ರÃಯವಾಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳುವ ಮೂಲಕ ತಮ್ಮ ಸ್ಪಷ್ಟವಾದ ಸಂದೇಶವನ್ನು ಪಕ್ಷದ ಹೈಕಮಾಂqಗೆ ರವಾನಿಸಿದ್ದಾರೆ. ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ತವಕದಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯನವರ ಕಾಲಿಗೆ ಬಿದ್ದು ಸಹಕಾರ ಕೊಡುವಂತೆ ಕೋರಿದ್ದಾರೆ.
ಮತ್ತೊಂದೆಡೆ ಸಿದ್ದರಾಮಯ್ಯನವರ ರಾಜೀನಾಮೆ ವಿರೋಧಿಸಿ ಅವರ ಅಭಿಮಾನಿಗಳು ರಾಜ್ಯದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಸಿದ್ದರಾಮಯ್ಯ ಹೇಳಿದಿಷ್ಟು;
ನನ್ನ ಪಾಲಿಗೆ ಮತದಾರರು ದೇವರು. ಅವರು ತಾನು ಅಧಿಕಾರ, ಹಣದ ಹಿಂದೆ ಹೋಗಿಲ್ಲ.ಆಸ್ತಿ ಪಾಸ್ತಿ ಮಾಡುವ ಯೋಚನೆ ಮಾಡಿಲ್ಲ ಸಂವಿಧಾನ ಬದ್ದವಾಗಿ ನಡೆದುಕೊಂಡಿದ್ದು, ಮುಂದೆಯೂ ಕೋಮುವಾದದ ವಿರುದ್ಧ ಹೋರಾಟ ನಡೆಸುತ್ತೇನೆ ಎಂದರು.
ರಾಜ್ಯಸಭೆಗೆ ಹೋಗಲ್ಲ. ರಾಜ್ಯ ರಾಜಕಾರಣದಲ್ಲಿಯೇ ಇರುತ್ತೇನೆ. ಚುನಾವಣಾ ರಾಜಕಾರಣದಿಂದ ಹಿಂದೆ ಸರಿದರೂ ಪಕ್ಷಕ್ಕೂ ಸಹಕಾರ ನೀಡುವೆ. ಚುನಾವಣಾ ರಾಜಕಾರಣಕ್ಕೆ ಮಾತ್ರ ವಿದಾಯ ರಾಜ್ಯಸಭೆಗೆ ಹೋಗಲ್ಲ. ರಾಜಕಾರಣಿಗೆ ನಿವೃತ್ತಿ ಇಲ್ಲ. ನಾನು ಚುನಾವಣಾ ರಾಜಕಾರಣದಿಂದ ದೂರ ಸರಿಯಬಹುದೇ ಹೊರತು ರಾಜಕೀಯ ಕ್ಷೇತ್ರದಲ್ಲೇ ಇರುತ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಇಲ್ಲವೇ ಪಕ್ಷ ನೀಡುವ ಕರೆಗೆ ಓಗೊಟ್ಟು ಸಹಕಾರ ನೀಡುತ್ತೇನೆ ಎಂದು ಹೇಳಿದರು.
ರಾಜ್ಯದ ಜನತೆ, ಹೈಕಮಾಂಡ್ ಹಾಗೂ ತಮ್ಮ ರಾಜಕೀಯ ಗುರುಗಳನ್ನು ಸ್ಮರಿಸಿದರು. ತಮ್ಮ ನಾಲ್ಕುವರೆ ದಶಕಗಳ ರಾಜಕೀಯ ಪಯಣ, ಎದುರಿಸಿದ ಸವಾಲುಗಳು ಹಾಗೂ ಮುಂದಿನ ನಡೆಗಳ ಬಗ್ಗೆ ಅವರು ಹಂಚಿಕೊAಡಿದ್ದಾರೆ.
ಯಾವುದೇ ಒತ್ತಡವಿಲ್ಲದೆ ರಾಜ್ಯಪಾಲರಿಗೆ ನನ್ನ ರಾಜೀನಾಮೆ ಪತ್ರ ನೀಡಿದ್ದೇನೆ. ಶೀಘ್ರವೇ ರಾಜ್ಯದ ಜನತೆ ನೂತನ ಮುಖ್ಯಮಂತ್ರಿಯನ್ನು ಕಾಣಲಿದ್ದಾರೆ. ಈ ಬಗ್ಗೆ ಹೈಕಮಾಂಡ್ ಹಾಗೂ ಸಿಎಲ್‌ಪಿ ನಿರ್ಧಾರ ಮಾಡುತ್ತೆ. ನಾನು ಪ್ರೀತಿ-ವಿಶ್ವಾಸಕ್ಕೆ ತಲೆಬಾಗುವವನೇ ಹೊರತು, ಒತ್ತಡಕ್ಕೆ ಮಣಿಯುವವನಲ್ಲ. ಈ ರಾಜೀನಾಮೆಯನ್ನು ಅತ್ಯಂತ ಸಂತೋಷದಿAದ ಮನಃಪೂರ್ವಕವಾಗಿ ನೀಡಿದ್ದೇನೆ.”
ಚಿತ್ರ ನಟ ಡಾ.ರಾಜ್‌ಕುಮಾರ್ ಅವರಿಗೆ ಅಭಿಮಾನಿಗಳೇ ದೇವರಾಗಿದ್ದಂತೆ, ಸಂವಿಧಾನವನ್ನೇ ಧರ್ಮ ಎಂದು ನಂಬಿರುವ ನನಗೆ ‘ಮತದಾರರೇ ದೇವರು’. ನನ್ನ ತಲೆ ಮೇಲೆ ಎರಡು ಬಾರಿ ಮುಖ್ಯಮಂತ್ರಿ ಕಿರೀಟ ಇಟ್ಟ ಆ ದೇವರುಗಳಿಗೆ ನಾನು ಸದಾ ಆಭಾರಿ ಎಂದರು.
ಹಳ್ಳಿಗಾಡಿನಿಂದ ಬಂದ ನನಗೆ ಮುಖ್ಯಮಂತ್ರಿಯಾಗುವ ಕನಸನ್ನು ನನಸು ಮಾಡಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನ. ಆ ಸಂವಿಧಾನದ ಬಲವಿಲ್ಲದಿದ್ದರೆ ನಾನು ಎಲ್ಲೋ ಕುರಿ ಮೇಯಿಸಿಕೊಂಡು ಇರುತ್ತಿದ್ದೆ. ಹೀಗಾಗಿ ಅಂಬೇಡ್ಕರ್ ಅವರಿಗೆ ಮೊದಲು ತಲೆಬಾಗುತ್ತೇನೆ.”
“ನನ್ನ ಸೈದ್ಧಾಂತಿಕ ಬದ್ಧತೆಯನ್ನು ಗುರುತಿಸಿ, ಪಕ್ಷಕ್ಕೆ ಬರಮಾಡಿಕೊಂಡು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ ಹಾಗೂ ವಿಪಕ್ಷ ನಾಯಕನಾಗಿ ಕೆಲಸ ಮಾಡಲು ಅವಕಾಶ ನೀಡಿದ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ನಾನು ಸದಾ ಚಿರಋಣಿ ಎಂದು ನುಡಿದರು.
ಹಣದ ಹಿಂದೆ ಹೋಗಿಲ್ಲ; ಆಸ್ತಿ ಮಾಡಿಲ್ಲ
“ನಾನು ಎಂದೂ ರಾಜಕಾರಣವನ್ನು ಅಧಿಕಾರದ ದಂಡ ಅಥವಾ ವ್ಯಾಪಾರದ ಗಲ್ಲಾಪೆಟ್ಟಿಗೆ ಎಂದು ಭಾವಿಸಿಲ್ಲ. ಬದಲಾಗಿ, ಬಡವರು, ಶೋಷಿತರು ಹಾಗೂ ನೊಂದವರಿಗೆ ನೆರವಾಗುವ ಒಂದು ಅವಕಾಶ ಎಂದು ನಂಬಿ ರಾಜಕಾರಣಕ್ಕೆ ಬಂದವನು. ಅಧಿಕಾರ, ಹಣದ ಹಿಂದೆ ಹೋಗಿಲ್ಲ.ಆಸ್ತಿ ಪಾಸ್ತಿ ಮಾಡುವ ಯೋಚನೆ ಮಾಡಿಲ್ಲ”.
“ನನಗೆ ಅಕ್ಷರ ಕಲಿಸಿ ಶಾಲೆಗೆ ಕರೆದೊಯ್ದ ರಾಜಪ್ಪ ಮಾಸ್ತರ್, ಸಮಾಜವಾದ ಹಾಗೂ ಹೋರಾಟದ ಗುಣ ಕಲಿಸಿದ ರೈತ ನಾಯಕ ಎಂ.ಡಿ. ನಂಜುAಡಸ್ವಾಮಿ ಹಾಗೂ ನನ್ನನ್ನು ಶಾಸಕ, ಸಚಿವನನ್ನಾಗಿ ಬೆಳೆಸಿದ ದಿವಂಗತ ರಾಮಕೃಷ್ಣ ಹೆಗಡೆ ಅವರ ನೆರವು ಇಲ್ಲದಿದ್ದರೆ ನಾನು ಈ ಎತ್ತರಕ್ಕೆ ಬೆಳೆಯುತ್ತಿರಲಿಲ್ಲ ಎಂದು ಸ್ಮರಿಸಿದರು.
“ರಾಜಕೀಯ ದ್ವೇಷಕ್ಕಾಗಿ ನನ್ನ ಹೆಂಡತಿಯ ಮೇಲೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು. ಆಗ ರಾಜಕೀಯ ಸನ್ಯಾಸ ಪಡೆಯುವಷ್ಟು ಮನಸ್ಸು ನೊಂದಿತ್ತು. ಆದರೆ, ಶತ್ರುಗಳ ದಾಳಿಗೆ ಹೆದರಿ ಪಲಾಯನವಾದಿಯಾಗದೆ ಅನ್ಯಾಯದ ವಿರುದ್ಧ ಹೋರಾಡಿ ಕಳಂಕ ಮುಕ್ತನಾದೆ.” ನುಡಿದಂತೆ ನಡೆದಿದ್ದೇನೆಂಬ ತೃಪ್ತಿ ಇದೆ. “ಜನರಿಗೆ ನೀಡಿದ ವಚನ ಪಾಲನೆಯೇ ನಿಜವಾದ ‘ರಾಜಧರ್ಮ’. ನಾನು ನುಡಿದಂತೆ ನಡೆದಿದ್ದೇನೆ. 17 ಬಜೆಟ್ ಮಂಡಿಸಿ, ಗ್ಯಾರಂಟಿ ಯೋಜನೆಗಳ ಮೂಲಕ ಹಸಿವುಮುಕ್ತ ಕರ್ನಾಟಕ ನಿರ್ಮಾಣ ಮಾಡಿರುವ ತೃಪ್ತಿ ನನಗಿದೆ. ರಾಜ್ಯ ಇಂದು ತಲಾದಾಯದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದರು”
“ಜಾತಿ, ದುಡ್ಡು, ತೋಳ್ಬಲದ ಈ ಕಾಲದಲ್ಲಿ ಸಾಮಾಜಿಕ ನ್ಯಾಯ, ಜಾತ್ಯತೀತತೆ ಉಳಿಸಿಕೊಂಡು ರಾಜಕಾರಣ ಮಾಡುವುದು ಕಷ್ಟ. ಇತಿಹಾಸದಲ್ಲಿ ಹೆಚ್ಚು ಕಾಲ ಸಿಎಂ ಆಗಿದ್ದೆ ಎನ್ನುವುದಕ್ಕಿಂತ, ದೀನದಲಿತರು, ದಮನಿತರು, ಹಿಂದುಳಿದವರ ದನಿಯಾಗಿ, ಮಹತ್ವದ ಯೋಜನೆಗಳನ್ನು ನೀಡಿದ ಮುಖ್ಯಮಂತ್ರಿ ಎನಿಸಿಕೊಳ್ಳುವ ಹಂಬಲದಿAದ ಕೆಲಸ ಮಾಡಿದ್ದೇನೆ. ಇನ್ನೂ ಸಾಲ ಮಾಡಿದ್ದೇನೆ ಎಂಬ ಆರೋಪ ರಾಜಕೀಯವಾಗಿ ಕೂಡಿದ್ದು, ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಅಡಿ ಶೇ. 3 ರ ಮಾನದಂಡ ಮೀರಿಲ್ಲ ಎಂದು ತಿಳಿಸಿದರು.