3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪಿಎಂ ಸೂರ್ಯ ಘರ್ ಯೋಜನೆಯ ಪ್ರಚಾರ ವಾಹನಕ್ಕೆ ಚಾಲನೆ


ಮೈಸೂರು :
ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಗೃಹಬಳಕೆದಾರರ ಮನೆಯ ಛಾವಣಿಯಲ್ಲಿ ಸೌರಫಲಕಗಳನ್ನು ಸ್ಥಾಪಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಚಾರ ವಾಹನಕ್ಕೆ ಶುಕ್ರವಾರ ನಗರದಲ್ಲಿ ಚಾಲನೆ ನೀಡಲಾಯಿತು.
ಇಲ್ಲಿನ ವಿಜಯನಗರ 2ನೇ ಹಂತದಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ) ಪ್ರದಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್‌ಇಡಿ ಪರದೆ ಅಳವಡಿಸಿರುವ ವಾಹನದ ಮೂಲಕ ಪ್ರಚಾರ ಕಾರ್ಯಕ್ಕೆ ಚಾವಿಸನಿನಿ ತಾಂತ್ರಿಕ ನಿರ್ದೇಶಕರಾದ ಶರಣಮ್ಮ ಎಸ್. ಜಂಗಿನ ಹಾಗೂ ಚಾವಿಸನಿನಿ ಮೈಸೂರು ವೃತ್ತದ ಮುಖ್ಯ ಇಂಜಿನಿಯರ್ ಎಲ್. ಲೋಕೇಶ್ ಹಸಿರು ನಿಶಾನೆ ತೋರಿಸಿದರು.
ನಗರದ ಹಲವೆಡೆಗಳಲ್ಲಿ ಸಂಚಾರ :
ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚಾಲನೆ ನೀಡಲಾಗಿರುವ ಈ ಪ್ರಚಾರ ವಾಹನ ಮೂರು ದಿನಗಳು ಬೆಳಗ್ಗಿನಿಂದ ರಾತ್ರಿಯವರೆಗೂ ನಗರದೆಲ್ಲೆಡೆ ಸಂಚರಿಸಲಿದೆ. ಮೇ 30ರಂದು ಕುವೆಂಪುನಗರ, ವಿವೇಕಾನಂದನಗರ, ಆಂದೋಲನ ವೃತ್ತ, ದಟ್ಟಗಳ್ಳಿ ವೃತ್ತ, ಆರ್ .ಆರ್ ನಗರ, ಶಾರದಾದೇವಿನಗರ, ಬೋಗಾದಿ, ವಿಜಯನಗರ, ಅರಮನೆ ಸುತ್ತಮುತ್ತ, ಅಗ್ರಹಾರ ವೃತ್ತ, ಪಾಠಶಾಲಾ ವೃತ್ತ, ಕೆ.ಆರ್ ವೃತ್ತ, ಆಯುರ್ವೇದ ಆಸ್ಪತ್ರೆ ವೃತ್ತ, ಮಂಡಿ ಮೊಹಲ್ಲಾ, ಬನ್ನಿಮಂಟಪ, ಎಲ್.ಐ.ಸಿ ವೃತ್ತ, ಫೌಂಟೆನ್ ವೃತ್ತ, ಸೆಂಟ್ ಫಿಲೋಮಿನಾ ಚರ್ಚ್ ಸುತ್ತಲಿನ ಪ್ರದೇಶಗಳಲ್ಲಿ ಸಂಚರಿಸಲಿದೆ.
ಮೇ 31ರಂದು ನಗರ ಬಸ್ ನಿಲ್ದಾಣ, ಮೆಟ್ರೋಪೋಲ್ ವೃತ್ತ, ಕಲಾಮಂದಿರ, ಮಹಾರಾಣಿ ಕಾಲೇಜ್ ಜಂಕ್ಷನ್, ಪಡುವರಳ್ಳಿ ವೃತ್ತ, ಐಶ್ವರ್ಯ ಪೆಟ್ರೋಲ್ ಬಂಕ್ ಜಂಕ್ಷನ್, ಹಿನಕಲ್ ವೃತ್ತ, ಹೂಟಗಳ್ಳಿ, ಬೆಳವಾಡಿ, ಇಲವಾಲ, ಮೈಸೂರು ಅರಮನೆ ಸುತ್ತಮುತ್ತ, ಗ್ರಾಮಾಂತರ ಬಸ್ ನಿಲ್ದಾಣ, ಹಾರ್ಡಿಂಗ್ ವೃತ್ತ, ಗೋಪಾಲಗೌಡ ಆಸ್ಪತ್ರೆ ವೃತ್ತ, ಮಿಲ್ಕ್ ಡೈರಿ ವೃತ್ತ, ಸಿದ್ದಾರ್ಥ ಬಡಾವಣೆ, ಟೆರಿಷಿಯನ್ ಕಾಲೇಜ್ ವೃತ್ತ, ದೇವೇಗೌಡ ವೃತ್ತ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸಂಚರಿಸಲಿದೆ.
ಆದಾಯ, ಉಳಿತಾಯದ ಮೂಲ :
ಪಿಎಂ ಸೂರ್ಯ ಘರ್ ಯೋಜನೆಯು ಆದಾಯ ಮತ್ತು ಉಳಿತಾಯದ ಮೂಲವಾಗಿದೆ. ಗ್ರಾಹಕರು ತಮ್ಮ ಮನೆಯ ಮೇಲೆ ಸೌರಘಟಕ ಸ್ಥಾಪಿಸಲು, ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಮೂಲಕ ಆಕರ್ಷಕ ಸಬ್ಸಿಡಿ ಸೌಲಭ್ಯ ಪಡೆಯಬಹುದಾಗಿದೆ. ಇದರಿಂದ ವಿದ್ಯುತ್ ಬಿಲ್ ಉಳಿತಾಯವಾಗಲಿದ್ದು, ಇದು ಪರಿಸರ ಸ್ನೇಹಿ ಯೋಜನೆಯು ಆಗಿದೆ. ಸೌರಶಕ್ತಿಯಿಂದ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್ ಅನ್ನು ಸೆಸ್ಕ್ ಗೆ ಮಾರಾಟ ಮಾಡುವ ಮೂಲಕ ಆದಾಯವನ್ನೂ ಪಡೆಯಬಹುದು.
ಈ ಸಂದರ್ಭದಲ್ಲಿ ಚಾವಿಸನಿನಿ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಲಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕ ಆರ್. ರಾಮಸ್ವಾಮಿ, ಎಚ್.ಆರ್. ದಿನೇಶ್, ಬಿ.ಆರ್. ರೂಪ ಸೇರಿದಂತೆ ಪ್ರಮುಖ ಅಧಿಕಾರಿಗಳು, ಸಿಬ್ಬಂದಿ ಇದ್ದರು.

==================