
ಮೈಸೂರು; ಇಲ್ಲಿನ ಕೆ ಆರ್ ಕ್ಷೇತ್ರದಲ್ಲಿ 45 ಕೋಟಿ ರೂಗಳ ವೆಚ್ಚದ ಬಾಕ್ಸ್ ಡ್ರೆöÊನ್ ಹಾಗೂ ರಸ್ತೆ ಕಾಮಗಾರಿಗೆ ಶಾಸಕ ಟಿ.ಎಸ್. ಶ್ರೀವತ್ಸ ಅವರು ಶುಕ್ರವಾರ ಚಾಲನೆ ನೀಡಿದರು.
ಮಹಾತ್ಮ ಗಾಂಧಿ ನಗರ ವಿಕಾಸ್ ಯೋಜನೆ ಅಡಿ ಕೆ.ಆರ್. ಕ್ಷೇತ್ರದ ವಲಯ ಕಚೇರಿ ಎರಡು ಹಾಗೂ ಮೂರರ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 57.59. 60. 62. 64. 65 ರಲ್ಲಿ ಬಾಕ್ಸ್ ಟ್ರೆöÊನ್ ಮತ್ತು ರಸ್ತೆ ಡಾಂಬರೀಕರಣ ಸುಮಾರು 20 ಕೋಟಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದರು.
ಈ ಸಂದರ್ಭದಲ್ಲಿ ನಗರ ಪಾಲಿಕೆಯ ಮಾಜಿಸದಸ್ಯರಾದ ಶಾರದಮ್ಮ ಈಶ್ವರ್, ರಮೇಶ್, ಜಯರಾಮ್, ಮುಖಂಡರಾದ ವಿಶ್ವೇಶ್ವರಯ್ಯ ,ನಾಗರಾಜ್, ಬಿಲ್ಲಯ್ಯ, ಪಿ.ಟಿ.ಕೃಷ್ಣ, ರವಿ, ಪ್ರದೀಪ್ ಕುಮಾರ್, ಮಧುಸೂದನ್, ದೀಪಕ್, ದೇವರಾಜೇಗೌಡ, ರಾಘವೇಂದ್ರ, ಅಕ್ಷಯ್, ಚಂದ್ರು, ಹೇಮಂತ್, ರಾಜೇಶ್, ರವಿ, ಮಂಜು, ಸತೀಶ, ಮನೋಜ್, ರೂಪ, ರೇಣುಕಾ ಹಾಗೂ ವಲಯ ಕಚೇರಿ 2 ಮತ್ತು 3 ರ ಸಹಾಯಕ ಆಯುಕ್ತರಾದ ಗಿರೀಶ್ ಮತ್ತು ಸಂದೀಪ್ ಅಭಿವೃದ್ಧಿ ಅಧಿಕಾರಿಗಳಾದ ಚೇತನ್ ಬಾಬು, ಸತ್ಯಮೂರ್ತಿ ಇಂಜಿನಿಯರ್‌ಗಳು ಇದ್ದರು