Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಗಣಪತಿ ಶ್ರೀಗಳ 84ನೇ ಜನ್ಮದಿನೋತ್ಸವ ಪ್ರಯುಕ್ತ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗೆ ವಿವಿಧ ನೆರವು ವಿತರಣೆ


ಮೈಸೂರು: ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ¥ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 84ನೇ ಜನ್ಮದಿನೋತ್ಸವವನ್ನು ಭಾಗವಾಗಿ ಶನಿವಾರ ಆಶ್ರಮದ ವತಿಯಿಂದ ಸಮಾಜದ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರಿಗೆ ವಿವಿಧ ನೆರವು ನೀಡುವುದರ ಜತೆಗೆ ವೈದ್ಯಕೀಯ ಉಪಕರಣಗಳನ್ನು ಶ್ರೀಗಳು ವಿತರಿಸಿದರು.
ಮೈಸೂರು ವಿಭಾಗದ ವಿಶೇಷಚೇತನರು ಮತ್ತು ಹಿರಿಯ ನಾಗರಿಕರ ಇಲಾಖೆ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಗಳ ಜಂಟಿ ಸಲಹೆ ಮತ್ತು ಸಹಯೋಗದೊಂದಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಈ ಕೊಡುಗೆಗಳನ್ನು ಹಸ್ತಾಂತರಿಸಲಾಯಿತು.
ಒಟ್ಟು 89 ವೈದ್ಯಕೀಯ ಉಪಕರಣಗಳ ವಿತರಣೆ:
ಆಶ್ರಮದ ವತಿಯಿಂದ ವಿತರಿಸಲಾದ ಒಟ್ಟು 89 ಅತ್ಯಾಧುನಿಕ ಹಾಗೂ ಅಗತ್ಯ ಉಪಕರಣಗಳ ವಿವರ:
ವೀಲ್ ಚೇರ್ (ಚಕ್ರದ ಕುರ್ಚಿ) 21
ಕಮೋಡ್ ವೀಲ್ ಚೇರ್ 02
ವಾಕರ್ಸ್ 09
ಕ್ರಚಸ್ (ಬಗಲುಗೋಲು) 09
ಎಲ್ಬೊ ಕ್ರಚಸ್ 01
ವಾಕಿಂಗ್ ಸ್ಟಿಕ್ (ಊರುಗೋಲು) 05
ವೈಟ್ ಕೇನ್ (ಅಂಧರ ಊರುಗೋಲು) 08
ವಿಶೇಷ ಸಿ.ಪಿ. ಚೇರ್ (ಮೈಸೂರು ವಿಭಾಗದ ವಿಕಲಚೇತನರ ಇಲಾಖೆ ನೆರವಿನಡಿ) 18
ವಿಶೇಷ ಸಿ.ಪಿ. ಚೇರ್ (ವಾಕ್ ಮತ್ತು ಶ್ರವಣ ಸಂಸ್ಥೆಯ ನೆರವಿನಡಿ) 16 ಹಾಗೂ
ಶ್ರೀರಾಮ ಮಂದಿರ ಪುನರ್ ನಿರ್ಮಾಣಕ್ಕೆ 10 ಲಕ್ಷ ಧನಸಹಾಯ ವಿತರಿಸಲಾಯಿತು.
ಇದೇ ಪಾವನ ಸಂದರ್ಭದಲ್ಲಿ, ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಪ್ರಸಿದ್ದ ಶ್ರೀರಾಮ ಮಂದಿರದ ಪುನರ್ ನಿರ್ಮಾಣ ಕಾರ್ಯಕ್ಕಾಗಿ ಆಶ್ರಮದ ವತಿಯಿಂದ 10 ಲಕ್ಷ ರೂ ಆರ್ಥಿಕ ಸಹಾಯದ ಚೆಕ್ಕನ್ನು ದೇವಸ್ಥಾನದ ಸಮಿತಿಗೆ ಹಸ್ತಾಂತರಿಸಿ, ಸಾಂಸ್ಕöÈತಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಆಶ್ರಮದ ಬೆಂಬಲವನ್ನು ಘೋಷಿಸಲಾಯಿತು.
ಆಶ್ರಮದ ಭವ್ಯ ‘ನಾದ ಮಂಟಪ’ದಲ್ಲಿ ಜರುಗಿದ ಈ ಸಮಾರಂಭವು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಹಾಗೂ ಪೂಜ್ಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಯಶಸ್ವಿಯಾಗಿ ನೆರವೇರಿತು. ನೂರಾರು ಭಕ್ತಾದಿಗಳು ಈ ಮಾನವೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.