3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯರಿಗೆ ಡಿಸಿಎಂ ಸ್ಥಾನ ನೀಡಲು ಸಂಘಟನೆಗಳ ಆಗ್ರಹ


ಮೈಸೂರು: ನಿರ್ಗಮಿತ ಸಿಎಂ ಸಿದ್ದರಾಮಯ್ಯನವರ ಪುತ್ರರಾದ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮತ್ತು ಅಹಿಂದ ಮೈಸೂರು ಸಂಘಟನೆಗಳು ಕಾಂಗ್ರೆಸ್ ನಾಯಕರನ್ನು ಒತ್ತಾಯಿಸಿದರು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಕೆಪಿಸಿಸಿ ಹಾಗೂ ಎಐಸಿಸಿಗೆ ರವಾನಿಸಲು ತೀರ್ಮಾನಿಸಲಾಯಿತು.
ಶನಿವಾರ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಸಭೆಯಲ್ಲಿ, ‘ಅಹಿಂದ ಸಮಯದಾಯದ ಹಿತರಕಕ್ಷಣೆಗೆ, ಪಕ್ಷದ ಹಿತದೃಷ್ಟಿಯಿಂದ ಯತೀಂದ್ರ ಅವರಿಗೆ ಡಿಸಿಎಂ ಸ್ಥಾನ ಕೊಡಬೇಕು. ಸೂಕ್ಷ÷್ಮ ಸಂವೇದನೆಯುಳ್ಳ ವಿದ್ಯಾವಂತ, ಪ್ರಜ್ಞಾವಂತ ಹಾಗೂ ಸಾಮಾಜಿಕ ಕಳಕಳಿಯ ನಾಯಕ ಅವರು. ಮೈಸೂರಿನಲ್ಲಿ ಹೊಸ ಹಾಗೂ ಯುವ ನಾಯಕತ್ವಕ್ಕೆ ನೀರೆರೆಯಬೇಕು’ ಎಂದು ಸಭೆಯಲ್ಲಿ ಮುಖಂಡರು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಗಳ ನಂಬಿಕೆ ಉಳಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
ಸಭೆಯಲ್ಲಿ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮು,
‘ಹೊಸ ಮುಖ್ಯಮಂತ್ರಿಯು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವರದಿಯನ್ನು ತ್ವರಿತವಾಗಿ ಒಪ್ಪಬೇಕು. ಅದರ ಆಧಾರದ ಮೇಲೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಸಚಿವ ಸಂಪುಟದಲ್ಲಿ ಅಹಿಂದ ವರ್ಗದವರಿಗೆ ಸಮಾನ ಸ್ಥಾನ ಕೊಡಬೇಕು’ ಎಂದು ಒತ್ತಾಯಿಸಿದರು.
‘ಸಿದ್ದರಾಮಯ್ಯ ಅವರ ರಾಜೀನಾಮೆಯಿಂದಾಗಿ ಇಡೀ ಅಹಿಂದ ಸಮುದಾಯ ಆತಂಕ ಮತ್ತು ಆಘಾತಕ್ಕೆ ಒಳಗಾಗಿದೆ. ಈ ದುಗುಡ ಹೋಗಲಾಡಿಸಲು ಡಾ.ಯತೀಂದ್ರಸಿದ್ದರಾಮಯ್ಯ ಅವರಿಗೆ ಸ್ಥಾನಮಾನ ಕೊಡಲೇಬೇಕು. ಈ ಸಮುದಾಯಗಳು ಕಾಂಗ್ರೆಸ್ ಬೆಂಬಲಿಸಿವೆ. ಹೀಗಾಗಿ, ಸಮಾನ ಅವಕಾಶ-ಅಧಿಕಾರವನ್ನು ಕೊಡಬೇಕು. ಈ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಪತ್ರವನ್ನೂ ಬರೆದಿದ್ದೇವೆ’ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ನಿರ್ಗಮಿಸಿದಾಗ ನಾವು ದೊಡ್ಡಮಟ್ಟದ ವಿರೋಧ ವ್ಯಕ್ತಪಡಿಸುತ್ತಿದ್ದೆವು. ಆದರೆ, ಅವರ ದೊಡ್ಡತನದ ಕಾರಣದಿಂದ, ಬದ್ದತೆ ಉಳಿಸಿಕೊಂಡಿದ್ದರಿAದ ನಾವು ಬೀದಿಗಿಳಿಯಲಿಲ್ಲ. ಮುಂದೆಯೂ ಅವರನ್ನು ಹೈಕಮಾಂಡ್ ಗೌರವದಿಂದ ನಡೆಸಿಕೊಳ್ಳಬೇಕು. ಅಹಿಂದ ಸಮುದಾಯಗಳ ನಂಬಿಕೆ ಹುಸಿಗೊಳಿಸಬಾರದು’ ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಅವರ ಹೆಸರಿಗೆ ಕಳಂಕ ತರಬಾರದೆಂಬ ಕಾರಣಕ್ಕೆ ನಾವು ಹೋರಾಟಕ್ಕೆ ಇಳಿಯಲಿಲ್ಲ. ಮುಂದೆಯೂ ಪಕ್ಷ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು’ ಎಂದರು.
ವಿವಿಧ ಸಮುದಾಯಗಳ ಮುಖಂಡರಾದ ಶಿವಣ್ಣ, ರವಿನಂದನ್, ಯೋಗೇಶ್ ಉಪ್ಪಾರ್, ಪ್ರಕಾಶ್, ರಾಜೇಶ್, ಛಾಯಾ, ಹರೀಶ್ ಮೊಗಣ್ಣಾಚಾರ್, ಕೆಂಡಗಣ್ಣ, ಮಹದೇವ್, ನಾಗರಾಜ್, ಚನ್ನಪ್ಪ, ಸಂತೋಷ್, ಮಂಜು ಶೆಟ್ಟಿ, ಮಂಜುನಾಥ್, ಹೇಮಂತ್, ಕಾಗಿನೆಲೆ ಮಹೇಂದ್ರ, ಯೋಗೇಶ್, ರಹೀಂಖಾನ್, ರೇವಣ್ಣ, ಪ್ರಭು, ಶೇಖರ್, ಮದನ್, ರಮೇಶ್ ಹಾಗೂ ಶಂಕರ್ ಪಾಲ್ಗೊಂಡಿದ್ದರು.