
ಮೈಸೂರು: ಮೈಸೂರು ಯೋಗ ಫೆಡರೇಷನ್ ವತಿಯಿಂದ 12ನೇ ಅಂತಾರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಮೇ 31ರಂದು ನಗರದ ಅರಮನೆ ಆವರಣದಲ್ಲಿ ಯೋಗಾಭ್ಯಾಸ ಹಾಗೂ ಮಹಾ ಸಂಕಲ್ಪ ದಿವಸ್ ಆಯೋಜಿಸಲಾಗಿದೆ ಎಂದು ಜಿಎಸ್‌ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಿ.ಶ್ರೀಹರಿ ದ್ವಾರಕನಾಥ್ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಅಂದು ಬೆಳಗ್ಗೆ 5.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಸುಮಾರು ಸಾವಿರ ಮಂದಿ ಯೋಗಾಸಕ್ತರು ಪಾಲ್ಗೊಳ್ಳುವರು. ಇದೇ ವೇಳೆ ನಗರದ ವಿವಿಧ ಅಪಾರ್ಟ್ಮೆಂಟ್, ಶಾಲಾ ಕಾಲೇಜು, ಉದ್ಯಾನಗಳು ಸೇರಿದಂತೆ 120 ಕೇಂದ್ರಗಳಲ್ಲಿ ಸುಮಾರು 1.20 ಲಕ್ಷ ಮಂದಿ ಯೋಗಾಸನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಯೋಗದ ಮೂಲಕ ಆರೋಗ್ಯಕರ, ಶಾಂತಿಯುತ, ಶಿಸ್ತುಬದ್ಧ ಸಮಾಜ ನಿರ್ಮಾಣದ ಸಂಕಲ್ಪದೊAದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರೊಡನೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಯೋಗದ ಪ್ರಚಾರ ಮತ್ತು ಪ್ರಸಾರ ಮಾಡಲು ಇದೇ ರೀತಿಯ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು. ಇದೇ ವೇಳೆ ಯೋಗ ಮಹಾಸಂಕಲ್ಪದ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಯೋಗ ಸಂಸ್ಥೆಗಳ ಪ್ರಮುಖರಾದ ದೇವರಾಜ್, ಯೋಗಾಚಾರ್ಯ ಡಾ.ಗಣೇಶ್ ಕುಮಾರ್, ಪಶುಪತಿ, ಶಶಿಕುಮಾರ್, ಜಿ.ನಂಜುAಡಸ್ವಾಮಿ, ಅನಂತ್ ಹಾಗೂ ರಂಗನಾಥ್ ಉಪಸ್ಥಿತರಿದ್ದರು.