3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಎಸ್.ಸಿ.ಬಸವರಾಜುಗೆ ವಿಧಾನ ಪರಿಷತ್ ಸ್ಥಾನ ಮತ್ತು ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡಲು ದೇವರಾಜ್ ಟಿ.ಕಾಟೂರು ಒತ್ತಾಯ


ಮೈಸೂರು; ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಸಿ.ಬಸವರಾಜು ಅವರಿಗೆ ವಿಧಾನಪರಿಷತ್ ಸ್ಥಾನ ನೀಡಬೇಕೆಂದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆಯ ರಾಜ್ಯಾಧ್ಯಕ್ಷ ದೇವರಾಜ್ ಟಿ.ಕಾಟೂರು ಒತ್ತಾಯಿಸಿದರು.
ಮಂಗಳವವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವಿಭಾಗದ ನಾಯಕ ಸಮಾಜದವರಿಗೆ ಸ್ವಾತಂತ್ರ ನಂತರದಿAದಲ್ಲೂ ಕಾಂಗ್ರೇಸ್ ಪಕ್ಷದಿಂದ ವಿಧಾನ ಪರಿಷತ್ ಸ್ಥಾನ ನೀಡದೆ, ರಾಜಕೀಯ ಅನ್ಯಾಯ ಮಾಡಿರುವ ಕಾಂಗ್ರೇಸ್ ಹೈಕಮಾಂಡ್, ಈ ಅನ್ಯಾಯವನ್ನು ಈಗಲಾದರೂ ಸರಿಪಡಿಸಲು ನಾಯಕ ಸಮಾಜದ ಹಿರಿಯ ಮುಖಂಡರಾದ ಎಸ್.ಸಿ.ಬಸವರಾಜು ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಾಮಾಜಿಕ ನ್ಯಾಯವನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಎಸ್.ಸಿ.ಬಸವರಾಜು ಅವರು ಮೈಸೂರು ವಿಭಾಗದಲ್ಲಿ 40 ವರ್ಷಗಳ ರಾಜಕೀಯ ಜೀವನದಲ್ಲಿ , ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, ಉತ್ತಮ ಆಡಳಿತ ನೀಡಿ ಜನಮನ್ನಣೆ ಗಳಿಸಿದ್ದಾರೆ. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯಾದ್ಯಂತ ನಿಷ್ಠೆಯಿಂದ ಪಕ್ಷ ಸಂಘಟಿಸಿದ್ದಲ್ಲದೆ , ಉಡುಪಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚು ಆಯ್ಕೆ ಆಗಲು ಕಾರಣರಾಗಿದ್ದಾರೆ. ಇದಲ್ಲದೆ ಚಾಮರಾಜನಗರ ಲೋಕಸಭೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಗೆಲ್ಲುವುದಕ್ಕೆ ನಮ್ಮ ನಾಯಕ ಸಮಾಜದವರನ್ನು ಸಂಘಟಿಸಿರುವ ಎಸ್.ಸಿ.ಬಸವರಾಜು ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲೇಬೇಕು. ಇದರಿಂದ ಮುಂದಿನ ಸ್ಥಳಿಯ ಚುನಾವಣೆ ಮತ್ತು 2028ರ ಸಾರ್ವತ್ರಿಕ ಚುನಾವಣೆಗೆ ಸಂಘಟನೆ ಮಾಡುವುದಕ್ಕೆ ಇವರ ನಾಯಕತ್ವ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಳೆದ 15 ವರ್ಷಗಳಿಂದ ವಿಧಾನ ಪರಿಷತ್ ಸ್ಥಾನ ನೀಡುತ್ತೇವೆ ಎಂದು ಕಾಂಗ್ರೇಸ್ ರಾಜ್ಯ ನಾಯಕರುಗಳು ಭರವಸೆ ನೀಡುತ್ತಾ ಬರುತ್ತಿದ್ದು, ಕಳೆದ ಎರಡು ವರ್ಷಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸಮಾಜದವರ ಮುಂದೆ ಮುಂದಿನ ದಿನಗಳಲ್ಲಿ ಎಸ್.ಸಿ.ಬಸವರಾಜು ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದರು. ಅದನ್ನು ಉಳಿಸಿ ಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಹೆಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರು ಮೈಸೂರು ಭಾಗದಲ್ಲಿ ನಾಯಕ ಸಮಾಜದ ಏಕೈಕ ಶಾಸಕರಾಗಿದ್ದಾರೆ. ಇವರ ತಂದೆ ದಿ ಚಿಕ್ಕಮಾದು ಅವರು ಬದುಕಿರುವವರೆಗೆ ನಮ್ಮ ಸಮಜಾಕ್ಕಾಗಿ. ಹೋರಾಟ ಮತ್ತು ಸಂಘಟನೆ ಮಾಡಿ, ನಮ್ಮ ನಾಯಕ ಸಮಾಜಕ್ಕೆ ಒಂದು ಶಕ್ತಿಯಾಗಿದ್ದರು. ಇವರ ಮರಣದ ನಂತರ ಮೈಸೂರು ಭಾಗದಲ್ಲಿ ನಾಯಕತ್ವದ ಕೊರತೆ ಇದೆ. ಅನಿಲ್ ಚಿಕ್ಕಮಾದು ಅವರು ಯುವಕರಾಗಿದ್ದು ಅವರ ತಂದೆಯ ಹಾದಿಯಲ್ಲಿ ಸಮಾಜವನ್ನು ಸಂಘಟಿಸುತ್ತಾ, ಕಾಂಗ್ರೇಸ್ ಪಕ್ಷದ ಗೆಲುವಿಗಾಗಿ ನೆರವಾಗಿದ್ದಾರೆ. ಅದರಿಂದ ಎರಡು ಬಾರಿ ಶಾಸಕಾರಾಗಿ ಜನಪ್ರಿಯಗಳಿಸಿರುವ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಿದರೆ, ನಮ್ಮ ಸಮಾಜಕ್ಕೆ ಈ ಭಾಗದಲ್ಲಿ ನಾಯಕತ್ವ ಮತ್ತು ಸಂಘಟನೆಗೆ ಶಕ್ತಿ ಬರುತ್ತದೆ. ಇದರಿಂದ 2028ರ ವಿಧಾನ ಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಲು ಅನುಕೂಲ ಆಗುತ್ತದೆ. ಆದರಿಂದ ಕಾಂಗ್ರೇಸ್ ಹೈಕಮಂಡ್ ಮತ್ತು ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಸಿದ್ದರಾಜು, ಉಪಾಧ್ಯಕ್ಷ ಶಿವಕುಮಾರಸ್ವಾಮಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ್, ದಿ. ಮೈಸೂರು ಕೋ-ಅಪರೇಟಿವ್ ಬ್ಯಾಂಕ್ ಮಾಜಿ ನಿರ್ದೇಶಕ
ಎಸ್.ಆರ್.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.