Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಳುವಾಗಿದ್ದ 35 ಲಕ್ಷರೂ ಮೌಲ್ಯದ ಮೊಬೈಲ್‌ಗಳ ಪತ್ತೆ; ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ


ಮೈಸೂರು: ಜಿಲ್ಲೆಯ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಈವರೆಗೆ ಬೇರೆ ಬೇರೆ ಕಂಪನಿಯ ಸುಮಾರು 35,00,000 ರೂ ಬೆಲೆಬಾಳುವ ಒಟ್ಟು 173 ಅಂಡ್ರಾಯಿಡ್ ಮೊಬೈಲ್ ಫೋನ್, ಐಫೋನ್ ಗಳನ್ನು ಪತ್ತೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಮಂಗಳವಾರ ನಗರದ ತಮ್ಮ ಕಚೇರಿಯಲ್ಲಿ ಪತ್ತೆ ಮಾಡಲಾದ ಮೊಬೈಲ್‌ಗಳನ್ನು ಅವುಗಳ ವಾರಸುದಾರರಿಗೆ ಹಿಂತಿರುಗಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ನಾಗರೀಕರು ತಮ್ಮ ಮೊಬೈಲ್ ಕಳೆದುಹೋದ ತಕ್ಷಣ ಸಿಇಐಆರ್ ಪೋರ್ಟಲ್ ನಲ್ಲಿ ದೂರು ದಾಖಲಿಸುವುದರಿಂದ ಸುಲಭವಾಗಿ ಮೊಬೈಲ್ ಗಳನ್ನು ಪತ್ತೆ ಹಚ್ಚಲು ಸಹಾಯವಾಗುತ್ತದೆ ಎಂದು ಹೇಳಿದರು.
ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡಲು ಮತ್ತು ಪತ್ತೆ ಹಚ್ಚಲು ಸಿಇಐಆರ್ ಸಹಕಾರಿಯಾಗಿದೆ.ಅದರಂತೆ ಸಿಇಐಆರ್ ಪೋರ್ಟಲ್ ನಲ್ಲಿ 2026ನೇ ಸಾಲಿನ ಮೇ ತಿಂಗಳಿನಲ್ಲಿ ಒಟ್ಟು 263 ದೂರು ದಾಖಲಾಗಿದ್ದು, ಅದರಂತೆ ಮೈಸೂರು ಜಿಲ್ಲೆಯ ಸೈಬರ್ ಕ್ರೆöÊಂ ಪೊಲೀಸ್ ಠಾಣೆಯ ಡಿವೈಎಸ್ಪಿ ಶ್ರೀಕಾಂತ್.ಆರ್ ರವರು ಸಿಇಐಆರ್ ಪೋರ್ಟಲ್ ನ ನೋಡಲ್ ಅಧಿಕಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ಮೋಸ ಮಾಡಿದ ಸೈಬರ್ ವಂಚಕರನ್ನು ಪತ್ತೆ: ಮೈಸೂರು ಜಿಲ್ಲೆಯ ಕೆ.ಆರ್ ನಗರದ ಚಿನ್ನದ ವ್ಯಾಪಾರಿಯಾದ ರಂದು ಜಿತೇಂದ್ರ ಕುಮಾರ್ ಖಂಡೆಲ್ ವಾಲ್ ಅವರು
ದಿನಾಂಕ 27.01.2026 ರಂದು ನೀಡಿದ ದೂರೆನೆಂದರೆ ಅಪರಿಚಿತ ವ್ಯಕ್ತಿಗಳು ವಾಟ್ಸಪ್ ಮೂಲಕ ಅವರನ್ನು ಸಂಪರ್ಕಿಸಿ ಪ್ರತಿ ಗ್ರಾಂ ಚಿನ್ನಕ್ಕೆ 600 ರೂ ಕಡಿಮೆ ಕೊಡುವುದಾಗಿ ನಂಬಿಸಿ, 100ಗ್ರಾಂ ಚಿನ್ನಕ್ಕೆ ಒಟ್ಟು 13,69,000 ರೂಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡು, ಚಿನ್ನವನ್ನು ಕೊಡದೆ ಮೋಸ ಮಾಡಿರುವ ಬಗ್ಗೆ ಮೈಸೂರು ಜಿಲ್ಲೆಯ ಸೈಬರ್ ಕ್ರೆöÊಂ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದ್ದು,ಈ ಕೇಸಿನ ತನಿಖೆಯ ವೇಳೆಯಲ್ಲಿ ಅಮೀತ್ ಸಿಂಗ್ @ ಅನಿ, ಪಂಜಾಬ್ ರಾಜ್ಯ, ಯತೀನ್ ರಮೇಶ್ ಜೈನ್ ಬಿನ್ ರಮೇಶ್ ಜೈನ್ ಮತ್ತು ಮೊಹಮ್ಮದ್ ಶಾದಾಬ್ ಅಂಜುಮ್ ಎಂಬ ಮೂರು ಮಂದಿ ಆರೋಪಿಗಳು, ಮಹಾರಾಷ್ಟç ರಾಜ್ಯದವರು ಎಂದು ಕಂಡು ಬಂದ ಮೇರೆಗೆ ಸುನಿಲ್.ಎಸ್.ಪಿ ನೇತೃತ್ವದ ತಂಡ 2 & 3ನೇ ಆರೋಪಿಗಳನ್ನು ಮಹಾರಾಷ್ಟç ರಾಜ್ಯದಲ್ಲಿ ವಶಕ್ಕೆ ಪಡೆದು ವಿಚಾರಣೆ ಮಾಡಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 1ನೇ ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.ಈ ಆರೋಪಿಗಳು ಸಾರ್ವಜನಿಕರ ದಾಖಲಾತಿಗಳನ್ನು ಪಡೆದು. ತೆರೆದಿರುವ 56 ಬ್ಯಾಂಕ್ ಖಾತೆಗಳ ಮೇಲೆ 196 ಸೈಬರ್ ದೂರುಗಳು ವಿವಿಧ ರಾಜ್ಯಗಳಲ್ಲಿ ದಾಖಲಾಗಿದ್ದು, ಅಂದಾಜು 189 ಕೋಟಿ 49 ಲಕ್ಷರೂಗಳು ಸೈಬರ್ ವಂಚನೆ ಮಾಡಿರುವುದು ಕಂಡು ಬಂದಿದೆ ಎಂದು ತಿಳಿಸಿದರು.
ಈ ಪತ್ತೆ ಕಾರ್ಯದಲ್ಲಿ ಹಾಗೂ ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ ಎಎಸ್ಪಿ ಮಲ್ಲಿಕ್ ಸಿ, ನಾಗೇಶ್ ಎಲ್ ರವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೆöÊಂ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕÀ ಶ್ರೀಕಾಂತ್.ಆರ್, ಪೊಲೀಸ್ ನಿರೀಕ್ಷಕÀ ಸುನಿಲ್.ಎಸ್.ಪಿ, ಪಿಎಸ್‌ಐ ಲಕ್ಷಿ÷್ಮ.ಆರ್, ಸಿಬ್ಬಂದಿಗಳಾದ ಮಂಜುನಾಥ ಎಸ್, ರಂಗಸ್ವಾಮಿ.ಹೆಚ್.ವಿ, ಅಭಿಷೇಕ್, ಮಹೇಶ ಸಿ.ಎನ್ ಹಾಗೂ ಠಾಣಾ ಸಿಬ್ಬಂದಿಗಳು ಹಾಗೂ ವಿವಿಧ ಪೊಲೀಸ್ ಠಾಣೆಗಳ ಸಿಇಐಆರ್ ಪೋರ್ಟಲ್ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಪ್ರಶಂಸಿದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಮಲ್ಲಿಕ್ ಸಿ, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.