Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ರೈತರು ಬದಲಾದರೆ ಭಾರತ ದೇಶ ಮುಂದಿನ 5 ವರ್ಷಕ್ಕೆ ಎಲ್ಲಾ ರೋಗವನ್ನು ದೂರ ಮಾಡಬಹುದು;ಆಹಾರ ತಜ್ಞ ಡಾ ಖಾದರ್

ಉತ್ತಮ ಆರೋಗ್ಯಕ್ಕಾಗಿ ಪರಿಸರ ಕಾಪಾಡಬೇಕು;

ಹಣ ಸಂಪಾದನೆಗಾಗಿ ಆರೋಗ್ಯ ಹಾಳು ಮಾಡುವ ವ್ಯವಸಾಯ ಮಾಡಬೇಡಿ
ಮೈಸೂರು;
ರೈತರು ಆಹಾರ ಬೆಳೆಯುವ ಪದ್ಧತಿಯಿಂದ ರೋಗ ಬೆಳೆಯುತ್ತಿದೆ. ರೈತನೇ ನಿಜವಾದ ವೈದ್ಯ. ಹಾಗಾಗಿ ಭಾರತ ದೇಶದಲ್ಲಿ ರೋಗ ಮುಕ್ತವಾಗುವುದಕ್ಕೆ ರೈತನೇ ಹೊರತು ವೈದ್ಯರಿಂದ ಸಾಧ್ಯವಿಲ್ಲ ಎಂದು ಆಹಾರ ತಜ್ಞ ಸಿರಿಧಾನ್ಯ ಜಾಗೃತಿ ನೇತಾರ ಡಾಕ್ಟರ್ ಖಾದರ್ ಹೇಳಿದರು.
ಮೈಸೂರಿನ ಇನ್ಸಿ÷್ಟಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ. ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ , ಪರಿಸರ ಮತ್ತು ಆರೋಗ್ಯ ಕುರಿತು ಚಿಂತನ ಮಂಥನ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಾವಯವ ಕೃಷಿ ಮಾಡಿ ಸಿರಿಧಾನ್ಯ, ಸೊಪುö್ಪ ತರಕಾರಿ ಬೆಳೆದರೆ, ಜನರು ಅದನ್ನು ತಿಂದರೆ ಖಂಡಿತ ನಮ್ಮ ದೇಶ ರೋಗ ಮುಕ್ತವಾಗುತ್ತದೆ. ಅದು ರೈತರಿಂದ ಸಾಧ್ಯ ಎಂದು ತಿಳಿಸಿದರು.
ಸಿರಿಧಾನ್ಯನ್ನು ಸುಮಾರು 8 ಗಂಟೆಗಳ ನೀರಿನಲ್ಲಿ ನೆನಸಿ ಅಡಿಗೆ ಮಾಡಿ ತಿನ್ನಬೇಕು. ನಾರು, ನೀರು, ಆಹಾರ ಇಲ್ಲದೆ ರೋಗ ಮುಕ್ತ ಸಾಧ್ಯವಿಲ್ಲ.ಎಲ್ಲಾರು ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡರೆ ಆರೋಗ್ಯ ಉತ್ತಮವಾಗಿರುತ್ತದೆ.ಕಳೆದ 30 ವರ್ಷಗಳ ಹಿಂದೆ ಅಪರೂಪದ ಒಂದು ಮನೆಯಲ್ಲಿ ಸಕ್ಕರೆ ಕಾಯಿಲೆ ಇತ್ತು ಇಂದು ಪ್ರತಿ ಮನೆಯಲ್ಲಿಯೂ ಡಯಾಬಿಟಿಸ್, ಬಿಪಿ, ಇನ್ನಿತರ ಖಾಯಿಲೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೂರು ತಿಂಗಳು ಅನ್ನ, ಸಕ್ಕರೆ, ಗೋಧಿ, ಬಿಟ್ಟು ಬಿಡಿ. ಸಿರಿಧಾನ್ಯ ತಿನ್ನಿ 3 ತಿಂಗಳ ನಂತರ ನಿಮ್ಮ ಆರೋಗ್ಯದಲ್ಲಿ ಎಷ್ಟು ಉತ್ತವಾಗಿರುತ್ತದೆ ನೋಡಿ ಎಂದು ಸಲಹೆ ನೀಡಿದರು. ರೈತನು ಕಾರ್ಪೊರೇಟ್ ಕಂಪನಿಗಳ ಗುಲಾಮ ನಾಗಬಾರದು. ರೈತರು ಹೊಲದಲ್ಲಿ 10 ಪರ್ಸೆಂಟ್ ಗೆಡ್ಡೆ ಗೆಣಸು ಸೊಪುö್ಪ ತರಕಾರಿ ಸಾವಯವ ಕೃಷಿ ಮಾಡಿ ಬೆಳೆದು ತಿನ್ನಿ. ಹಣ ಸಂಪಾದನೆಗಾಗಿ ಆರೋಗ್ಯ ಹಾಳು ಮಾಡುವ ವ್ಯವಸಾಯ ಮಾಡಬೇಡಿ, ಆರೋಗ್ಯ ಕೆಡಿಸಿಕೊಂಡು ಸಂಪಾದಿಸಿದ ಹಣವನ್ನು ವೈದ್ಯರಿಗೆ ಕೊಡಬೇಡಿ ಎಂದರು.
ರೈತರು ಬದಲಾದರೆ ಭಾರತ ದೇಶ ಮುಂದಿನ 5 ವರ್ಷದಕ್ಕೆ ಎಲ್ಲಾ ರೋಗವನ್ನು ದೂರ ಮಾಡಬಹುದು. ಅದು ಹೇಗೆಂದರೆ, ಸುಮಾರು 25 ಸಾವಿರ ಜನ ರೈತರಿಗೆ ಬಿತ್ತನೆ ಬೀಜ ಕೊಟ್ಟು ಸಿರಿ ಧಾನ್ಯ ಬೆಳೆಯುವುದಕ್ಕೆ ಟ್ರೆöÊನಿಂಗ್ ಕೊಟ್ಟಿದ್ದೇವೆ. ರೈತ ಬೆಳೆ ಬೆಳೆದು ನೇರವಾಗಿ ಗ್ರಾಹಕರಿಗೆ ಮಾರುವ ರೀತಿ ಆಗಬೇಕು ಎಂದರು.
ಒಬ್ಬ ಸ್ನೇಹಿತ ಕಳೆದ 70 ವರ್ಷದಿಂದ ಡಯಾಬಿಟಿಸ್ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದ. ಇಂದು ಸಿರಿ ಧಾನ್ಯ ಸಾವಯವ ಕೃಷಿಯಲ್ಲಿ ಬೆಳೆದ ತರಕಾರಿ ಸೇವನೆ ಮಾಡಿ, ಆಹಾರ ಪದ್ಧತಿಯಲ್ಲಿ ಸಕ್ಕರೆ ರೋಗ ಮುಕ್ತವಾಗಿದ್ದಾರೆ. ಸಾವಯವ ಕೃಷಿಯಲ್ಲಿ ಬೆಳೆದ ತರಕಾರಿ ಸೇವನೆ, ಆಹಾರ ಪದ್ಧತಿಯಲ್ಲಿ ಬದಲಾಯಿಸಿದ ನಂತರ ಈಗ 7 ತಿಂಗಳಿAದ ಆರೂಗ್ಯದಲ್ಲಿ ಚೇತರಿಕೆ ಆಗಿದೆ. ಯಾವುದೇ ರೋಗ ಬಂದರೂ ನಮ್ಮದೇ ಆಹಾರದಲ್ಲಿ ಆರೋಗ್ಯ ಉತ್ತಮಪಡಿಸಬೇಕು ಎಂದರೆ, ನಮ್ಮ ಅಡುಗೆ ಮನೆಯಲ್ಲಿ ಎಲ್ಲಾ ಸಾಧ್ಯವಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬುರ್ ಶಾಂತಕುಮಾರ್, ರಾಜ್ಯದಲ್ಲಿ 41,200 ಕೆರೆಗಳಿವೆ. ಮೈಸೂರು ಜಿಲ್ಲೆಯಲ್ಲಿ 2990 ಕೆರೆಗಳ ಪುನರ್ಜೀವನಗೊಳಿಸಿ, ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.
ಈಗ ಏಳು ಜನರಿಗೆ ಒಂದು ಮರ ಆಮ್ಲಜನಕ ನೀಡುತ್ತಿದೆ ಎಂದು ವರದಿ ಹೇಳುತ್ತದೆ.ಶುದ್ಧ ಪರಿಸರವಿದ್ದರೆ ಪ್ರತಿಯೊಬ್ಬ ಮನುಷ್ಯರಿಗೆ ಶುದ್ಧ ಆರೋಗ್ಯವಿರುತ್ತದೆ. ರೈತರು ಗ್ರಾಮೀಣ ಭಾಗದಲ್ಲಿರುವ ಕೆರೆಗಳ ಹೂಳು ತೆಗೆಸಿ, ಜಮೀನಿಗೆ ಮಣ್ಣು ಹಾಕಿ ಕೊಂಡರೆ, ಭೂಮಿ ಫಲವತ್ತತೆ ವೃದ್ಧಿಚಿiÀiÁಗಿ, ರಸಗೊಬ್ಬರ ಕೀಟ ದಾಸಕ ಬಳಕೆ ಕಡಿಮೆಯಾಗುತ್ತದೆ. ಉತ್ತಮ ಆಹಾರ ಬೆಳೆಯಲು ಸಹಕಾರಿಯಾಗುತ್ತದೆ. ಕೆರೆಗಳ ಸಂರಕ್ಷಣೆಯಿAದ ಕೊಳವೆಬಾವಿಗಳ ಅಂತರ್ಜಲ ಹೆಚ್ಚುತ್ತದೆ. ಗಿಡಗಳನ್ನು ನೆಡುವ ಮೂಲಕ ಉಸಿರಾಟಕ್ಕೆ ಬೇಕಾದ ಉತ್ತಮ ಆಮ್ಲಜನಕ ಪಡೆಯಲು ಅನುಕೂಲವಾಗುತ್ತದೆ. ದೆಹಲಿ ಅಂತ ದೊಡ್ಡ ನಗರಗಳಲ್ಲಿ ಪರಿಸರ ಹಾನಿಯಾಗಿ ಆಮ್ಲಜನಕದ ಕೊರತೆ ಉಚಿಟಾಗಿದೆ. ಇದನ್ನ ನಾವೆಲ್ಲ ಮನಗಾಣಬೇಕು. ಎಚ್ಚೆತ್ತುಕೊಂಡರೆ ಭವಿಷ್ಯದಲ್ಲಿ ನಾವು ಸುರಕ್ಷತೆಯಿಂದ ಇರಬಹುದು ಎಂದು ಕಿವಿ ಮಾತು ಹೇಳಿದರು.
ಸತ್ಯಸಾಯಿ ಸೇವಾ ಟ್ರಸ್ಟ್ ಆಸ್ಪತ್ರೆಯ ಶಾಲಿನಿ ಶ್ರೀನಿವಾಸ್ ಹಾಗೂ ನಯನ ಕುಮಾರ್ ಆಸ್ಪತ್ರೆಯ ಗಜಾನನ ಹೆಗಡೆ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಪಿ ಸೋಮಶೇಖರ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಬರಡನಪುರ ನಾಗರಾಜ್, ಹತ್ತಳ್ಳಿ ದೇವರಾಜ್, ವರಕೂಡ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.