3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಎಲ್ಲರ ಕಣ್ಮನ ಸೆಳೆಯುತ್ತಿರುವ ನೀಲಿ ಸುಂದರಿ !


ಅಪಾರ ಪೌಷ್ಟಿಕ ಸತ್ವಗಳನ್ನು ಒಳಗೊಂಡ ಹಾಗೂ ಮಧುಮೇಹಿಗಳಿಗೆಂದು ಪ್ರಕೃತಿಯೇ ನೀಡಿದ ದಿವ್ಯ ಔಷಧಿಯಾಗಿರುವ ನೀಲಿ ಸುಂದರಿ ನೇರಳೆ ಹಣ್ಣು ಇದೀಗ ಮಾರುಕಟ್ಟೆಗೆ ಬಂದು ಎಲ್ಲರ ಕಣ್ಮನ ಸೆಳೆಯುತ್ತಿವೆ. ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಎಲ್ಲರೂ ನೇರಳೆ ಹಣ್ಣಿನ ರುಚಿಯನ್ನು ಸವಿಯಲು ಇಷ್ಟು ಪಡುತ್ತಾರೆ. ಯಾಕೇಂದರೆ ಇದು ಪ್ರಕೃತಿಯ ಸೀಜನ್ ಪ್ರೂಟ್ಸ್
ಪ್ರಕೃತಿ ನಮಗೆ ಕಾಲಕಾಲಕ್ಕೆ ತಕ್ಕಂತೆ ವಿವಿಧ ಹಣ್ಣುಗಳನ್ನು ನೀಡುತ್ತದೆ. ಬೇಸಿಗೆಯಲ್ಲಿ ಕಲ್ಲಂಗಡಿ ಸಿಕ್ಕರೆ, ಜೂನ್ ವರೆಗೂ ಮಾವಿನ ಹಣ್ಣು ಬಾಯಿಯಲ್ಲಿ ನೀರೂರಿಸುತ್ತದೆ. ಇನ್ನೇನು ಮಾವು ಮುಗಿಯಿತು ಎನ್ನುವ ಸಂದರ್ಭದಲ್ಲಿಯೇ ಥಟ್ಟನೆ ಪ್ರತ್ಯಕ್ಷವಾಗಿದೆ ಕಡು ನೀಲಿ ಬಣ್ಣದ ನೇರಳೆ ಹಣ್ಣು. ಅಂದರೆ ಒಂದೊAದು ಕಾಲಕ್ಕೆ ಒಂದೊAದು ಬಗೆಯ ಹೂವುಗಳು, ಹಣ್ಣುಗಳು ಸಿಗುತ್ತವೆ.
ವರ್ಷದ ಎಲ್ಲಾ ಸಮಯದಲ್ಲೂ ಸಿಗುವ ಹಣ್ಣು, ತರಕಾರಿಗಳಿಗೆ ಒಂದು ಬಗೆಯ ಗುಣ ಲಕ್ಷಣಗಳು ಕಂಡುಬAದರೆ ಕೇವಲ ವರ್ಷಕ್ಕೆ ಒಂದು ಬಾರಿ ಸಿಗುವ ಹಣ್ಣುಗಳಲ್ಲಿ ಕೆಲವೊಂದು ವಿಶೇಷವಾದ ಗುಣಲಕ್ಷಣಗಳು ಇರುತ್ತವೆ.
ಅದರಲ್ಲಿ ನೀಲಿ ಸುಂದರಿ ಎಂದೇ ಕರೆಸಿಕೊಳ್ಳುವ ಈ ಹಣ್ಣು ಬಹುಪಯೋಗಿ ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ನಗರದ ದೇವರಾಜ ಮಾರುಕಟ್ಟೆ, ಅಗ್ರಹಾರ ವೃತ್ತ, ಮೈಸೂರು ವಿವಿ ರಸ್ತೆ, ವಾಲ್ಮೀಕಿ ರಸ್ತೆ, ಕುವೆಂಪುನಗರ, ಎನ್.ಆರ್.ಮೊಹಲ್ಲಾ ಮುಂತಾದ ಪ್ರಮುಖ ಬಡಾವಣೆಗಳ ರಸ್ತೆ ಹಾಗೂ ವೃತ್ತಗಳಲ್ಲಿ ಕಪುö್ಪ ಸುಂದರಿಯದ್ದೇ ಕಾರುಬಾರು.
ಬೇಸಿಗೆಯ ಅಂತ್ಯ ಹಾಗೂ ಮಳೆಗಾಲದಲ್ಲಿ ಎಲ್ಲೆಡೆ ಸಿಗುವ ನೇರಳೆ ಹಣ್ಣಿನಲ್ಲಿ ಅಪಾರವಾದ ಪೌಷ್ಟಿಕಾಂಶಗಳಿವೆ. ನಾರಿನ ಅಂಶ, ಮೆಗ್ನೀಶಿಯಂ, ಕ್ಯಾರೋಟಿನ್, ಕಬ್ಬಿಣದ ಅಂಶ, ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಅಂಶಗಳು ಹೆಚ್ಚು ಸಿಗುತ್ತವೆ. ನೇರಳೆ ಹಣ್ಣಿನ ಬೀಜಗಳಿಂದ ಮಾಡಿದ ಪುಡಿ ಮಧುಮೇಹಿಗಳಿಗೆ ರಾಮಬಾಣ. ಸೀಸನ್‌ನಲ್ಲಿ ನೇರಳೆ ಹಣ್ಣನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಹಲವು ಬಗೆಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು. ಜೊತೆಗೆ ಕೆಲವು ಆರೋಗ್ಯ ಪ್ರಯೋಜನಗಳು ಸಹ ಸಿಗುತ್ತವೆ.