ಇದು ಎಷ್ಟು ನಿಜ ಅಲ್ವಾ…,
ಮಕ್ಕಳು ರೆಕ್ಕೆ ಬಲಿತ ಹಕ್ಕಿಯಂತೆ ಹಾರಿ ಬಿಟ್ಟರೆ..ಹೆತ್ತವರ ಗತಿಯೇನು
ಹೆತ್ತವರು ದುಡಿದು ಮಕ್ಕಳನ್ನು ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡಿದ ತಕ್ಷಣದಿಂದ,ಮಕ್ಕಳು ರೆಕ್ಕೆ ಬಲಿತ ಹಕ್ಕಿಯಂತೆ ಹಾರಿ ಬಿಟ್ಟರೆ..,
ಹೆತ್ತವರ ಗತಿಯೇನು,
ನಾವು ಹಕ್ಕಿಗಳಲ್ಲ…, ನಮ್ಮಲ್ಲಿ ವಿವೇಚನಾ ಶಕ್ತಿ ಇದೆ.., ವಿವೇಚನಾ ಶಕ್ತಿ ಇರುವ ಏಕೈಕ ಪ್ರಾಣಿ ಮನುಷ್ಯ…,
ಹಾಗಾದರೂ ಕೂಡ, ಮಕ್ಕಳು ಕೃತಘ್ನರಾಗುತ್ತಿರುವುದು ಹೇಗೆ?.,
ಇಂದು ವಿದ್ಯಾವಂತ ಮಕ್ಕಳ ತಂದೆತಾಯಿಯರು ಇರುವುದು ಆಶ್ರಮದಲ್ಲಿ…,
ತಿಂಗಳಿಗೋ ಅಥವಾ ವರ್ಷಕ್ಕೋ ಇಂತಿಷ್ಟು ಹಣ ನೀಡಿದರೆ ಮುಗಿಯಿತು ಎಂದು ಕೊಳ್ಳುವ ಮಕ್ಕಳಿಗೆ ಸಂಸ್ಕಾರದ ಕೊರತೆ ಬರುವಂತೆ ಮಾಡಿದವರು ಯಾರು?..,
ಈಗಿನ ಕಾಲದಲ್ಲಿ ಒಂದೇ ಮಗು ಎನ್ನುವ ವ್ಯಾಮೋಹ,.. ನಾವು ಅನುಭವಿಸಿದ ಕಷ್ಟ ಮಗುವಿಗೆ ಬರಬಾರದು ಎನ್ನುವಂತೆ ಬೆಳೆಸುವುದೇ ದೊಡ್ಡ ತಪುö್ಪ…,
ಮಗು ಬೆಳೆಯುತ್ತಲೇ ಕಣ್ಣಿಗೆ ಕಂಡದ್ದನ್ನು, ಹೇಳಿದ್ದನ್ನು ಅಷ್ಟೇ ನಂಬುತ್ತದೆ.., ಆಳವಾಗಿ ಅರಿತುಕೊಳ್ಳುವ ಬುದ್ಧಿ ಇರುವುದಿಲ್ಲ..,
ಉದಾಹರಣೆಗೆ, ಅಪ್ಪ ಆಟದ ಸಾಮಾನು ತಂದುಕೊಟ್ಟಿದ್ದರ ಹಿಂದೆ ಅಪ್ಪ ಎಷ್ಟು ಗಂಟೆ ಕೆಲಸ ಮಾಡಿರಬಹುದು?., ಅಪ್ಪ ಬಿಡುವಿಲ್ಲದೆ ನನ್ನ ಖುಷಿಗಾಗಿ ಒದ್ದಾಡಿರಬಹುದು?.ಅಪ್ಪನ ಪೂರ್ತಿ ದಿನದ ಎಷ್ಟು ದುಡಿಮೆ ಆ ಆಟದ ಸಾಮಾನಿಗೆ ಖರ್ಚಾಗಿರಬಹುದು,? ., ಎಂದು ಯೋಚಿಸುವಷ್ಟು ಶಕ್ತಿ ಆ ಪುಟ್ಟ ಮೆದುಳಿಗಿರುವುದಿಲ್ಲ…,
ಆ ಸಂಧರ್ಭದಲ್ಲೆಲ್ಲಾ ತಾಯಿಯಾದವಳು, ಪರಿಸ್ಥಿತಿಯ ಸೂಕ್ಷ÷್ಮತೆ ಬಗ್ಗೆ ಅರ್ಥ ಮಾಡಿಸುವ ಕೆಲಸ ಮಾಡಬೇಕು..,
ಅಪ್ಪ ಬಂದರೆ ಬೈಯುತ್ತಾರೆ.., ಅಪ್ಪ ಜೋರಿದ್ದಾರೆ ಹೊಡೆಯುತ್ತಾರೆ ಎನ್ನುತ್ತಾ ಅಪ್ಪನನ್ನು ವಿಲನ್ ಮಾಡುವುದು ಅಮ್ಮನೇ..,
ಜನ್ಮ ನೀಡಿದ ಅಮ್ಮ ದೇವತೆ ಎನ್ನುವವರೇ..,
ಅಪ್ಪ ಅನಿಸಿಕೊಂಡ ಮೇಲೆ ಸಂಪೂರ್ಣ ಜೀವನ ಸಂಸಾರಕ್ಕಾಗಿ ತ್ಯಾಗ ಮಾಡುವ ಅಪ್ಪ ದೇವರಿಗಿಂತ ಹೆಚ್ಚು..
ಅಮ್ಮನ ಪ್ರೀತಿಗಿಂತ ಹೆಚ್ಚು ಅಪ್ಪನ ಪ್ರೀತಿ ಇರುತ್ತದೆ ಆದರೆ ಅಪ್ಪ ತೋರ್ಪಡಿಸಿಕೊಳ್ಳುವುದು ಕಡಿಮೆ..,
ಹೊರಗಡೆ ಹೋಗಿ ದುಡಿಯುವ ಅಪ್ಪನ ಕೆಲಸ ಅಥವಾ ಅಮ್ಮನ ಕೆಲಸದ ಬಗ್ಗೆ ಗೌರವ ಬೆಳೆಸಿಕೊಳ್ಳುವ ಜೊತೆಗೆ.., ಅದರಲ್ಲಿರುವ ಕಷ್ಟ., ಸಮಯದ ಮಹತ್ವ, ತ್ಯಾಗ ಇವೆಲ್ಲವೂ ಆ ಪುಟ್ಟ ಮನಸಲ್ಲಿ ಬೇರೂರಿದರೆ,, ಯಾವ ತಂದೆತಾಯಿ ಕೂಡ ಆಶ್ರಮದಲ್ಲಿ ಕಾಣಸಿಗುವುದಿಲ್ಲ..,
ಮತ್ತು
ಯಾವ ಮಗಳೂ ಕೂಡ ಯಾರ ಜೊತೆಯೋ ಓಡಿ ಹೋಗಿ, ಫ್ರಿಡ್ಜ್, ಸೂಟ್ ಕೇಸ್ ನಲ್ಲಿ ಹೆಣವಾಗುವುದಿಲ್ಲ..,
ಯಾವ ಮಗನೂ ಡ್ರಗ್ಸ್, ಡ್ರಿಂಕ್ಸ್, ಜೂಜು, ಮೋಜು ಎನ್ನುತ್ತಾ ನಶೆಯೇರಿಸಿಕೊಳ್ಳುವುದಿಲ್ಲ…,
ಅಮ್ಮ ಅದೆಲ್ಲೋ ಮನೆಯಲ್ಲಿ ಕಸ
ಮುಸುರೆ ಕೆಲಸ ಮಾಡಿದರೂ.., ಅಪ್ಪ ರಸ್ತೆ ಗುಡಿಸುವ ಕೆಲಸ ಮಾಡಿದರೂ..,ಅದರಿಂದ ಬರುವ ಹಣವೇ ನಿಮ್ಮ ಆಸೆ ತೀರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ…,
ಎಲ್ಲಾ ಅಪ್ಪ ಅಮ್ಮಂದಿರು ಶ್ರೀಮಂತರಾಗಿರುವುದಿಲ್ಲ..,
ಬಿಸಿಲಲ್ಲಿ ದುಡಿಯುವ ವಾಚ್ ಮೆನ್, ನೂರಾರು ಸಾವಿರಾರು ಬಾರಿ ಅತ್ತಿತ್ತ ಓಡಾಡಿ ಕಸ್ಟಮರ್ ಗೆ ಊಟ ಕೊಡೋ ವೇಟರ್, ಮಳೆ ಬಿಸಿಲೆನ್ನದೆ ಜನರನ್ನು ಸುರಕ್ಷಿತವಾಗಿ ದಡ ಸೇರಿಸೋ ಆಟೋ ಡ್ರೆöÊವರ್..,ಬಸ್ ಡ್ರೆöÊವರ್.,ಎಲ್ಲರೂ ಮನೆಯ ಜವಾಬ್ದಾರಿ ಹೊತ್ತವರೇ.., ಬೇರೆಯವರ ಬಗ್ಗೆ ಅನುಕಂಪ ತೋರಿಸೋ ಮೊದಲು ನಿಮ್ಮ ಸುಖ ಸಂತೋಷಕ್ಕೆ ಕಾರಣವಾಗುವವರನ್ನು ಖುಷಿಯಾಗಿರಿಸಿ..,
ಸೋತೋ ಅಥವಾ ಮೋಸ ಹೋಗಿಯೋ ಮನೆ ಸೇರುವುದಲ್ಲ..,
ಹೆತ್ತವರ ಋಣ ತೀರಿಸುವುದು ಸತ್ತಾಗ ಊರಿಗೆ ಊಟ ಹಾಕಿಸಿಯೋ, ಅಥವಾ ಫ್ಲೆಕ್ಸ್ ಹಾಕಿಯೋ, ಅಥವಾ ವರ್ಷಕ್ಕೊಮ್ಮೆ ಕಾರ್ಯದ ದಿವಸ ದೋಷ ತಾಗದಿರಲಿ ಎಂದು ನೆನೆಪಿಸಿಕೊಂಡೋ ಅಲ್ಲ…
ಹೆತ್ತವರು ಬದುಕಿದ್ದಾಗಲೇ “ರಿಟನ್ ಗಿಫ್ಟ್” ಕೊಡಿ…,
ವಯಸ್ಸಾದ ಮೇಲೆ ಹೆತ್ತವರು ನಿರೀಕ್ಷಿಸುವುದು ಪ್ರೀತಿ ಅಷ್ಟೇ.., ನೆನಪಿರಲಿ,ನವಿರಾದ ಸ್ಪರ್ಶಕ್ಕೆ ವಿಶೇಷ ಶಕ್ತಿ ಇದೆ..,
ಹಣ, ಒಡವೆ,ಕೊಂಕು ಮಾತು,ಜಗಳ, ಮಾಡುವ ಹೆತ್ತವರು ಇಲ್ಲವೆಂದಲ್ಲ.., ಮಗನ ಹೆಂಡತಿಯನ್ನು ಕಂಡರೆ ಉರಿದುಕೊಳ್ಳುವ, ಸೊಸೆ ಎಂದರೆ ವಿಚಿತ್ರವಾಗಿ ಆಡುವ,ಗಂಡುಹೆಣ್ಣು ಮಕ್ಕಳಲ್ಲಿ ಭೇದಭಾವ ಮಾಡುವ ಹೆತ್ತವರು ಕೂಡ ಇರುತ್ತಾರೆ…,
ಇತ್ತೀಚಿನ ಸಾವಿನಲ್ಲಿ ಅತ್ತೆಯಂದಿರ ಪಾತ್ರ ನೋಡಿರುತ್ತೀರಿ..,
ಇದು ಸೂಕ್ಷ÷್ಮ ವಿಚಾರ.., ನಿಮ್ಮ ತಾಳ್ಮೆ ಮುಖ್ಯ ಇಲ್ಲಿ..,
ನಿಮ್ಮ ಸಂಸಾರವೇ ಒಡೆದುಹೋಗುವಷ್ಟು ತೊಂದರೆಯಾದರೆ ಪಕ್ಕದಲ್ಲೇ ಇರುವ ಉತ್ತಮ ಆಶ್ರಮ ಸೇರಿಸಿದರೂ, ಪ್ರತಿನಿತ್ಯ ವಿಚಾರಿಸುತ್ತಲೇ ಇರಿ…, ಅಥವಾ ನೀವೇ ಮನೆಬಿಟ್ಟು ಹೊರಹೋದರೂ ವಿಚಾರಿಸುತ್ತಿರಿ..,
ಸಾಧ್ಯವಾದರೆ ಪ್ರತಿ ದಿನ,ವಾರ,ತಿಂಗಳು,ಭೇಟಿ ಮಾಡಿ…,ಮುಕ್ತವಾಗಿ ಮಾತನಾಡಿ, ನಗಿಸಿ…, ನಿಮ್ಮ ಏನೊಂದು ಸಮಸ್ಯೆ ಕೂಡ ಹೇಳಿಕೊಳ್ಳಬೇಡಿ..(ಸಮಸ್ಯೆ ಹೇಳಿದರೆ ಅವರು ಕೊರಗುತ್ತಾರೆ, ವಿನಃ ಸಮಸ್ಯೆ ಕೇಳಿ ಅವರೇನು ಮಾಡುತ್ತಾರೆ? ಹೇಳದಿರುವುದು ಉತ್ತಮ).,ಆದರೆ ಅವರ ಸಮಸ್ಯೆ ತಪ್ಪದೇ ಕೇಳಿ.., ಮನುಷ್ಯ ಪ್ರತಿ ಹಂತದಲ್ಲೂ ನೋವು ಹಂಚಿಕೊಳ್ಳಲು ಬಯಸುತ್ತಾನೆ.. ಇಲ್ಲದಿದ್ದರೆ ಒಳಗೊಳಗೇ ಕೊರಗುತ್ತಾನೆ..,
ತಪುö್ಪ ಅರಿವಾಗಿ ಬದಲಾಗಿದ್ದರೆ ವಾಪಾಸ್ ಕರೆದುಕೊಂಡು ಬನ್ನಿ…,
ಮನೆ ಆಸ್ತಿಗೋಸ್ಕರ ತಂದೆತಾಯಿ ಜೊತೆಗೆ ಇರುವ ಬದಲು ಅವರಿಗೆ ಉತ್ತಮ ಜೀವನ ಕೊಡಿ.. ಕೊನೆಯಗಾಲವನ್ನು ಚೆನ್ನಾಗಿ ಕಳೆಯುವಂತೆ ಮಾಡಿ..
ನಿಮ್ಮ ಸ್ವಾರ್ಥಕ್ಕೆ ತಂದೆತಾಯಿ ಜೀವನ ಬಲಿಯಾಗದಿರಲಿ..,
ಇವೆಲ್ಲಾ ಬಿಟ್ಟು ಹೆತ್ತವರ ಅನಾರೋಗ್ಯದಲ್ಲೂ ಜೊತೆಗಿದ್ದು ನೋಡದೆ, ಹೆಂಡತಿ ಮಕ್ಕಳು ಎಂದು ಎಲ್ಲೋ ದೂರವಿದ್ದೋ.. ವರ್ಷಕೊಂದೋ, ಎರಡು ಸಲನೋ ವಿಐಪಿಗಳಂತೆ ಬಂದು ವಿಸಿಟ್ ಕೊಟ್ಟು ಇಣುಕಿ ಹೋಗಿ , ಇದ್ದಾಗ ಶೋಕಿ ಮಾಡುತ್ತಾ ಕೊನೆಗೆ ಅಪ್ಪ ಅಮ್ಮ ಹೋದಮೇಲೆ ಮನೆಗೆ ಬಂದು ಕೂತು ದರ್ಪ ತೋರಿಸುವುದಲ್ಲ..,
ಮನೆ, ಆಸ್ತಿಗಾಗಿ ಹೆತ್ತವರ ಜೊತೆಗೆ ಇದ್ದು, ಅವರನ್ನು ಕೀಳಾಗಿ ನೋಡುವ ಅದೆಷ್ಟೋ ಮಕ್ಕಳಿದ್ದಾರೆ.., ಮಕ್ಕಳ ವ್ಯಾಮೋಹ ಆ ಅಸಹಾಯಕ ತಂದೆತಾಯಿಯರನ್ನು ಮೂಕವಾಗಿಸುತ್ತದೆ..,
ತಂದೆತಾಯಿಯ ಸೇವೆ ಮಾಡಿದವನಷ್ಟೇ ತಂದೆ ತಾಯಿ ಮಾಡಿದ ಆಸ್ತಿ ತಿನ್ನಲು ಅರ್ಹ…,
ಎಂಜಲು ತಿನ್ನುವ ಬುದ್ಧಿ ಇಟ್ಟುಕೊಳ್ಳಬೇಡಿ…,
ಭಗವಂತ ಎಲ್ಲವನ್ನೂ ನೋಡುತ್ತಾನೆ…,
“ಕರ್ಮ ರಿಟರ್ನ್್ಸ”
ಇಷ್ಟೆಲ್ಲಾ ಬರೆದ ನಾನು, ಸ್ಯಾಕ್ಸೋಫೋನ್ ಕಲಾವಿದೆ ಮತ್ತು ಒಂದು ಪುಟ್ಟ ಗ್ರಾಮದಲ್ಲಿ ಒಬ್ಬ ಪುಟ್ಟ ಅಂಗಡಿ ಇಟ್ಟುಕೊಂಡು ಇಡೀ ಊರಿನ ಜನರ ಮೆಚ್ಚುಗೆ ಗಳಿಸಿದ್ದ,..ತನ್ನ ಮಡದಿ,ಮಕ್ಕಳು,ಹೆಂಡತಿ ಮನೆಯವರು, ತಾಯಿ ಮನೆಯವರು, ಎಂದು ಭೇದಭಾವ ಮಾಡದೆ ತನ್ನ ಸಂಪೂರ್ಣ ಜೀವನ ತ್ಯಾಗ ಮಾಡಿದ ದೇವರೊಬ್ಬರ ಮಗಳು…,
(ಯಾರೋ ಒಬ್ಬರ ಮೆಸ್ಸೆಂಜರ್ ನಲ್ಲಿ ಮೇಡಂ ಆಶ್ರಮ ಮತ್ತು ವಯಸ್ಸಾದ ಹೆತ್ತವರ ಬಗ್ಗೆ ಬರೆಯಿರಿ ಎನ್ನುವ ಮೆಸೇಜ್ ಗೆ ಈ ಪೋಸ್ಟ್ ಅಪ್ಲೋಡ್ ಮಾಡಿದ್ದೇನೆ)
• ಭಾರತೀಗೋಪಾಲ್ #ಸ್ಯಾಕ್ಸೋಫೋನಿಸ್
