
*ಮೈಸೂರು ತಾಲ್ಲೂಕು ರೈತರ ಕುಂದು ಕೊರತೆ ಸಭೆಯಲ್ಲಿ ರೈತರಿಂದ ದೂರುಗಳ ಸುರಿಮಳೆ
ಮೈಸೂರು; ನಗರದ ಜಗ ಜೀವನ್ ರಾಮ್ ಭವನದಲ್ಲಿ ತಾಲ್ಲೂಕು ರೈತರ ಕುಂದು ಕೊರತೆ ಸಭೆ ಮೈಸೂರು ತಾಲೂಕು ತಹಸೀಲ್ದಾರ್ ಮಹೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮೈಸೂರಿ£ ನಡೆಯಿತು. ರೈತರಿಂದ ದೂರುಗಳ ಸುರಿಮಳೆಯಾಯಿತು.
ರೈತರ ಸಭೆಯು ಕಳೆದ 6 ತಿಂಗಳಲ್ಲಿ ನಡೆದಿದ್ದು, ಈಗ ನಡೆಯುತ್ತಿದೆ ಮೂರು ತಿಂಗಳಿಗೊಮ್ಮೆ ರೈತರ ಕುಂದು ಕೊರತೆ ಸಭೆಯನ್ನು ಕಡ್ಡಾಯವಾಗಿ ಮಾಡಬೇಕೆಂದು ರೈತರು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ ಮರಂಕಯ್ಯ ಮಾತನಾಡಿ, ಮೈಸೂರು ತಾಲೂಕಿನಲ್ಲಿ ಪೆಟ್ಟಿಗೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಮದ್ಯೆ 24 ಗಂಟೆಗಳು ಸಿಗುತ್ತಿದ್ದು ಇದರಿಂದ ಗ್ರಾಮಗಳಲ್ಲಿ ಶಾಂತಿ ವ್ಯವಸ್ಥೆ ಹಾಳಾಗಿದ್ದು, ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ 3 ದಿನಕ್ಕೆ ಸೀಮಿತವಾಗಿದ್ದು, ಇದರಿಂದ ಬಡ ರೈತರು ಕೂಲಿ ಕಾರ್ಮಿಕರು ಒಂದು ದಿನದ ಕೂಲಿಯನ್ನು ಕಳೆದುಕೊಂಡು, ಪಡಿತರ ಪಡೆಯಲು ಉದ್ದದ ಲೈನಿನಲ್ಲಿ ನಿಂತು ಪಡೆಯಬೇಕಾಗಿದೆ. ಕನಿಷ್ಠ 20 ದಿನ ಪಡಿತರ ವಿತರಣೆ ಮಾಡಿದರೆ, ಅವರಿಗೆ ಅನುಕೂಲವಾಗುವ ಸಮಯದಲ್ಲಿ ಪಡಿತರವನ್ನು ಪಡೆದು ಕೊಳ್ಳಬಹುದು ಎಂದು ಒತ್ತಾಯಿಸಿದರು.
ಕಬ್ಬು ಬೆಳಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜು ಮಾತನಾಡಿ, ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು, ಸರಿಯಾದ ಸಮಯಕ್ಕೆ ರೋಗಿಗಳಿಗೆ ಸ್ಪಂದಿಸುತ್ತಿಲ್ಲ. ಈ ವ್ಯವಸ್ಥೆಯನ್ನು ಸರಿಪಡಿಸಿಕೊಡಬೇಕೆಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಆನಂದೂರು ಪ್ರಭಾಕರ್ ಮಾತನಾಡಿ, ತಾಲ್ಲೂಕಿನಲ್ಲಿ ಭೂಕಬಳಿಕೆ ಮಾಡಿ, ಪೋರ್ಜರಿ ದಾಖಲಾತಿ ಸೃಷ್ಟಿಸಿ ಕೊಂಡಿರುವ ಭೂ ಕಬಳಿಕೆದಾರರಿಗೆ ನ್ಯಾಯಾಲಯದಲ್ಲಿರುವ ಮೊಖದಮ್ಮೆಗಳನ್ನು ತಾಲ್ಲೂಕು ಆಡಳಿತ ಸರಿಯಾದ ಸಮಯಕ್ಕೆ ದಾಖಲೆಗಳನ್ನು ಒದಗಿಸಿ, ನ್ಯಾಯಾಲಯಕ್ಕೆ ಕೊಟ್ಟು ಸರ್ಕಾರಿ ಆಸ್ತಿಗಳನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.
ಕೃಷಿ ಇಲಾಖೆಗಳಲ್ಲಿ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ ರಸ ಗೊಬ್ಬರಗಳು ಸಿಗುತ್ತಿಲ್ಲ. ತೋಟಗಾರಿಕೆ ಇಲಾಖೆಗಳಲ್ಲಿ ಸಿಗುತ್ತಿರುವ ಸಬ್ಸಿಡಿಗಳು ರೈತರಿಗೆ ಮನವರಿಕೆ ಮಾಡುವಲ್ಲಿ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ದೂರಿದರು.
ಇನ್ನೂ ಅರಣ್ಯ ಇಲಾಖೆ, ಸಾರಿಗೆ ಇಲಾಖೆಯಲ್ಲಿನ ಸಮಸ್ಯೆಗಳ ವಿಚಾರಗಳನ್ನು ಪ್ರಸ್ತಾಪಿಸಲಾಯಿತು.
ಈ ಸಭೆಯಲ್ಲಿ ಜಗದೀಶ್ ಸೂರ್ಯ, ನಾಗನಹಳ್ಳಿ ಚಂದ್ರಶೇಖರ್ ಅಂಕಪ್ಪ ನಾಗರಾಜು ಶಿವಣ್ಣ ಹಲವಾರು ರೈತರು ಭಾಗವಹಿಸಿದ್ದರು. ತಾಲ್ಲೂಕಿನ ಎಲ್ಲಾ ಇಲಾಖೆಗಳಲ್ಲಿನ ಅಧಿಕಾರಿಗಳು ಹಾಜರಿದ್ದರು.