
ಮೈಸೂರು; ರಂಗವಲ್ಲಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕöÈತಿ ನಿರ್ದೇಶನಾಲಯ, ಬೆಂಗಳೂರು ಇವರ ಸಹಯೋಗದೊಂದಿಗೆ ಜೂನ್ 7ರಂದು ಭಾನುವಾರ ಸಂಜೆ 7ಕ್ಕೆ ಮೈಸೂರಿನ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮAದಿರದಲ್ಲಿ `ತಟ್ಟೆ ಇಡ್ಲಿ ರಾದ್ಧಾಂತ’ ಪತ್ತೇದಾರಿ ಹಾಸ್ಯ ನಾಟಕ ಪ್ರದರ್ಶಿಸಲಿದೆ.
ನಾಟಕ ಕುರಿತು: ಆಸ್ತಿ ಪಾಲು ಮಾಡಿದ್ರೆ ಕೊನೆಗಾಲದಲ್ಲಿ ಮಕ್ಕಳು ಅನ್ನಹಾಕಲ್ಲ ಅನ್ನೋ ತಂದೆ, ಕಷ್ಟದಲ್ಲಿದ್ರೂ ಮುದುಕ ಆಸ್ತಿ ಪಾಲು ಮಾಡ್ತಿಲ್ಲ ಅಂತ ಹಲುಬ್ತಿರೋ ಮಕ್ಕಳು….. ಈ ಕ್ಷಣ ಕಿತ್ತಾಡಿದರೂ ಮರುಗಳಿಗೆಗೇ ಒಂದಾಗುವ ಓರಗಿತ್ತಿಯರು. ಈ ನಡುವೆ ವಿಷಪ್ರಾಶನದಿಂದ ಮುದುಕನ ಸಾವು. ಮುದುಕನಿಗೆ ವಿಷವಿಟ್ಟವರು ಯಾರು?
ರಂಗಾಯಣದ ಹಿರಿಯ ಕಲಾವಿದ ಮಾಯಸಂದ್ರ ಕೃಷ್ಣಪ್ರಸಾದ್ ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ ಮಧು ನೀನಾಸಂ ಬೆಳಕಿನ ವಿನ್ಯಾಸ, ಹೆಚ್.ಕೆ. ದ್ವಾರಕಾನಾಥ್ ರಂಗವಿನ್ಯಾಸ, ಉದಿತ್ ಹರಿತಸ್ ಹಿನ್ನೆಲೆ ಸಂಗೀತವಿದೆ.
ಹೆಚ್ಚಿನ ವಿವರಗಳಿಗೆ ಮೊಬೈಲ್ ನಂ 9901626701, 9886711381 ಸಂಪರ್ಕಿಸಬಹುದು.