
- ಜಗತ್ತಿನಲ್ಲೇ ಅತ್ಯಂತ ಕಡಿಮೆ ದರ ಎಂದು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ
ನವದೆಹಲಿ: ದೇಶೀಯ ಅಡುಗೆ ಅನಿಲ ಎಲ್ಪಿಜಿ ಬೆಲೆಯನ್ನು ಇದೀಗ ಪ್ರತಿ ಸಿಲಿಂಡರ್ಗೆ 29 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇದು ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರದಲ್ಲಿ ಮೂರು ತಿಂಗಳಲ್ಲಿ ಎರಡನೇ ಬಾರಿಗೆ ದರ ಏರಿಕೆಯಾಗಿದೆ. ಸಿಲಿಂಡರ್ ದರ ಜಗತ್ತಿನಲ್ಲೇ ಅತ್ಯಂತ ಕಡಿಮೆ ದರವಾಗಿದೆ ಎಂದು ಕೇಂದ್ರ ಸರ್ಕಾರ ದರ ಏರಿಕೆಯನ್ನು ಸಮರ್ಥಿಸಿಕೊಂಡಿದೆ.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಜಾಗತಿಕ ಇಂಧನ ಪೂರೈಕೆಗೆ ವ್ಯತ್ಯಯ ಉಂಟು ಮಾಡಿದ ಬಳಿಕ ಹಾಗೂ ಅಂತಾರಾಷ್ಟಿçÃಯ ಇಂಧನ ಬೆಲೆಗಳಲ್ಲಿ ಏರಿಕೆಯಾದ ಬೆನ್ನಲ್ಲೇ ಮಾರ್ಚ್ 7ರಂದು ಸಿಲಿಂಡರ್ಗೆ 60 ರೂ.ಗಳಷ್ಟು ಹೆಚ್ಚಳ ಮಾಡಲಾಗಿತ್ತು.
ದೇಶೀಯ ಎಲ್ಪಿಜಿ ಮಾರಾಟದ ಮೇಲಿನ ನಷ್ಟವನ್ನು ಈ ಹೆಚ್ಚಳವು ಭಾಗಶಃ ಸರಿದೂಗಿಸಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ. ಇತ್ತೀಚೆಗೆ, ಜೂನ್ 01ರಂದು ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯು ದೆಹಲಿಯಲ್ಲಿ 42 ರೂ.ಗಳಷ್ಟು ಮತ್ತು ಕೋಲ್ಕತ್ತಾದಲ್ಲಿ 53.50 ರೂ.ಗಳಷ್ಟು ಏರಿಕೆಯಾಗಿತ್ತು.
ಇಂದಿನ ದರ ಪರಿಷ್ಕರಣೆಗೂ ಮುನ್ನ, ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಮಾರಾಟವಾಗುವ ಪ್ರತಿ ಎಲ್ಪಿಜಿ ಸಿಲಿಂಡರ್ ಮೇಲೆ ಸುಮಾರು 703 ರೂ.ಗಳಷ್ಟು ನಷ್ಟ ಅನುಭವಿಸುತ್ತಿವೆ ಎಂದು ಅಂದಾಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಗ ಇಂಧನ ಬೆಲೆ ಹೆಚ್ಚಳದ ಮಧ್ಯೆ ಮತ್ತೆ ಎಲ್ಪಿಜಿ ದರ ಏರಿಕೆಯಾಗಿದೆ. ಮೇ ಮಧ್ಯ ತಿಂಗಳಿನಿAದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್ಗೆ ಒಟ್ಟು 7.50 ರೂ.ಗಳಷ್ಟು ಏರಿಕೆಯಾಗಿವೆ. ಅಲ್ಲದೆ, ನೈಸರ್ಗಿಕ ಅನಿಲ (ಸಿಎನ್ಜಿ) ದರಗಳು ಪ್ರತಿ ಕೆಜಿಗೆ ಸುಮಾರು 6 ರೂ.ಗಳಷ್ಟು ಹೆಚ್ಚಾಗಿತ್ತು.
ಜಗತ್ತಿನಲ್ಲೇ ಅತ್ಯಂತ ಕಡಿಮೆ ದರ ಎಂದು ದರ ಏರಿಕೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ:
ದರ ಏರಿಕೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಪಶ್ಚಿಮ ಏಷ್ಯಾದಲ್ಲಿನ ಅಡೆತಡೆಗಳಿಂದಾಗಿ ಅಂತಾರಾಷ್ಟಿçÃಯ ಎಲ್ಪಿಜಿ ಬೆಲೆಗಳಲ್ಲಿ ತೀವ್ರ ಏರಿಕೆಯ ಹೊರತಾಗಿಯೂ, ಭಾರತೀಯ ಕುಟುಂಬಗಳು ಅಡುಗೆ ಅನಿಲಕ್ಕೆ ಜಗತ್ತಿನಲ್ಲೇ ಕಡಿಮೆ ದರ ಪಾವತಿಸುತ್ತಿವೆ ಎಂದು ಹೇಳಿದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಬಳಿಕ ಅಂತಾರಾಷ್ಟಿçÃಯ ಬೆಲೆಗಳಲ್ಲಿ ಏರಿಕೆಯಾಗಿದ್ದು, ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಪೂರೈಕೆ ವೆಚ್ಚವು 1,600 ರೂ.ಗಿಂತ ಹೆಚ್ಚಾಗಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಏರಿಕೆಯ ಹೊರತಾಗಿಯೂ, ನಮ್ಮಲ್ಲಿನ ದೇಶೀಯ ಎಲ್ಪಿಜಿ ದರವು ನೆರೆಯ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿನ ಬೆಲೆಗಳಿಗಿಂತ ಕಡಿಮೆಯಾಗಿವೆ. ಅಲ್ಲದೆ, ಯುನೈಟೆಡ್ ಸ್ಟೇಟ್ಸ್, ಆಸ್ಟೆçÃಲಿಯಾ ಮತ್ತು ಕೆನಡಾ ಸೇರಿದಂತೆ ಮುಂದುವರೆದ ದೇಶಗಳ ಬೆಲೆಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಬಿಕ್ಕಟ್ಟಿನ ಸಮಯದಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ನಿರಂತರ ಇಂಧನ ಸಾಗಣೆ ಸಾಧ್ಯವಾಗುತ್ತಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ. ಇದರಿಂದ ದೇಶದಲ್ಲಿ ಎಲ್ಪಿಜಿ ಅಥವಾ ಇತರ ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯಿಲ್ಲ. ಎಲ್ಲರೂ ಸಹ 942 ರೂ.ಗಳಿಗೆ ಅಗತ್ಯವಿರುವಷ್ಟು ಸಿಲಿಂಡರ್ಗಳನ್ನು ಖರೀದಿಸಬಹುದು ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.