3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

41 ಸ್ವತ್ತು ಕಳವು ಮತ್ತು 2 ವಂಚನೆ ಪ್ರಕರಣ ಭೇದಿಸಿದ ಮೈಸೂರು ನಗರ ಪೊಲೀಸರು


*ವಶಪಡಿಸಿಕೊಂಡ ಸ್ವತ್ತುಗಳು ವಾರಸ್ಮದಾರರಿಗೆ ವಾಪಾಸ್

ಮೈಸೂರು: ಮೈಸೂರು ನಗರದ ವಿವಿಧ ಠಾಣೆಯ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಕಳೆದ ಮೂರು ತಿಂಗಳಲ್ಲಿ 41ಸ್ವತ್ತು ಕಳುವು ಮತ್ತು 3 ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ತಿಳಿಸಿದರು. ಮೈಸೂರು ನಗರ ಪೊಲೀಸ್ ಘಟಕದಿಂದ ಕಳೆದ 03 ತಿಂಗಳುಗಳಲ್ಲಿ ಒಂದು ದರೋಡೆ ಸಂಚು, ಎರಡು ಸುಲಿಗೆ, 10 ಕನ್ನ ಕಳುವು, 9 ಮನೆ ಕಳ್ಳತನ, 4 ಮನೆ ಕೆಲಸದವರಿಂದ ಕಳ್ಳತನ. 10 ವಾಹನ ಕಳ್ಳತನ. 05 ಸಾಮಾನ್ಯ ಕಳ್ಳತನ. ಹಾಗೂ 3ವಂಚನೆ ಪ್ರಕರಣ ಸೇರಿದಂತೆ ಒಟ್ಟು 44 ಪ್ರಕರಣಗಳನ್ನು ಪತ್ತೆ ಮಾಡಿದ್ದು, ಸದರಿ ಪ್ರಕರಣಗಳಿಂದ ಒಟ್ಟು ರೂ. 2.09,37,645 ಮೌಲ್ಯದ 1 ಕೆ.ಜಿ 578 ಗ್ರಾಂ, 743 ಮಿಲಿ ಚಿನ್ನಾಭರಣ. 3 ಕೆ.ಜಿ 578 ಗ್ರಾಂ ಬೆಳ್ಳಿ 2.76.786 ನಗದು ಹಾಗೂ ಇತರೇ ಮಾಲುಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ. ಪತ್ತೆಯಾದ ಈ ಪ್ರಕರಣಗಳಲ್ಲಿ ಒಟ್ಟು 55 ಜನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ ಎಂದು ತಮ್ಮ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಂಡಿ ಠಾಣಾ ಪೊಲೀಸರು ಇಬ್ಬರು ಆರೋಪಿಯನ್ನು ದಸ್ತಗಿರಿ ಮಾಡಿ ವಂಚನೆ ಪ್ರಕರಣಕ್ಕೆ ಸಂಬAಧಪಟ್ಟAತೆ 90 ಲಕ್ಷ ಮೌಲ್ಯದ ಒಟ್ಟು 660 ಗ್ರಾಂ ಚಿನ್ನದ ಗಟ್ಟಿಯನ್ನು ವಶ ಪಡಿಸಿಕೊಂಡಿದ್ದಾರೆ.
ವಿಜಯನಗರ ಪೊಲೀಸ್ ಠಾಣಾ ಪೊಲೀಸರು 2 ಆರೋಪಿಗಳನ್ನು ಬಂಧಿಸಿ. 2 ಮನೆ ಕೆಲಸದವರಿಂದ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ 23.50.000 ರೂ ಮೌಲ್ಯದ 170 ಗ್ರಾಂ ಚಿನ್ನಾಭರಣ ಮತ್ತು ಗಾರ್ಮೆಂಟ್ಸ್ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ 3 ಕನ್ನಕಳುವು. 1 ಮನೆಕಳ್ಳತನ ಒಟ್ಟು 4 ಪ್ರಕರಣಗಳನ್ನು ಪತ್ತೆ ಮಾಡಿ 21,00,000 ರೂ ಮೌಲ್ಯದ 173 ಗ್ರಾಂ 260 ಮಿಲಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ. ಜೊತೆಗೆ 1 ವಂಚನೆ ಪ್ರಕರಣ ಪತ್ತೆ ಮಾಡಿ 4 ಆರೋಪಿಗಳನ್ನು ವಶಕ್ಕೆ ಪಡೆದು ರೂ. 2,74,000 ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.
ಸರಸ್ವತಿಪುರಂ ಠಾಣಾ ಪೊಲೀಸರು 2 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ, 4-ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ 18,40,000 ರೂ ಮೌಲ್ಯದ 143 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಲಷ್ಕರ್ ಠಾಣಾ ಪೊಲೀಸರು 4 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ 3 ಸಾಮಾನ್ಯ ಕಳುವು, 1 ಮನೆ ಕೆಲಸದವರಿಂದ ಕಳ್ಳತನ ಒಟ್ಟು 4 ಪ್ರಕರಣಗಳನ್ನು ಪತ್ತೆ ಮಾಡಿ 11,45000 ರೂ ಮೌಲ್ಯದ 202 ಗ್ರಾಂ ಚಿನ್ನಾಭರಣಗಳು 196 ಗ್ರಾಂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ನಜರ್ ಬಾದ್ ಠಾಣಾ ಪೊಲೀಸರು 2 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ 1ದೇವಸ್ಥಾನ ಕನ್ನಕಳುವು, 1 ವಂಚನೆ ಪ್ರಕರಣ ಒಟ್ಟು 2 ಪ್ರಕರಣಗಳನ್ನು ಪತ್ತೆ ಮಾಡಿ 9.25,000 ರೂ ಮೌಲ್ಯದ 43 ಗ್ರಾಂ ಚಿನ್ನಾಭರಣ ಮತ್ತು 1ಕೆಜಿ 250ಗ್ರಾಂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ಮೇಟಗಳ್ಳಿ ಠಾಣಾ ಪೊಲೀಸರು 13 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ 5 ದ್ವಿಚಕ್ರ ವಾಹನ ಕಳ್ಳತನ. 2 ಕನ್ನಕಳುವು, 2 ಮನೆಕಳುವು. 1 ಸಾಮಾನ್ಯ ಕಳುವು ಒಟ್ಟು 10 ಪ್ರಕರಣಗಳನ್ನು ಪತ್ತೆ ಮಾಡಿ 8,22,645 ರೂ ಮೌಲ್ಯದ 20.900ಗ್ರಾಂ ಚಿನ್ನಾಭರಣ, 496 ಗ್ರಾಂ ಬೆಳ್ಳಿ ಪದಾರ್ಥಗಳು, 5 ದ್ವಿಚಕ್ರ ವಾಹನಗಳು, 2786ರೂ ನಗದು ಹಣ ಮತ್ತು ವಿದ್ಯುತ್ ವೈರ್‌ಗಳು, ಎಲೆಕ್ಟಾçನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉದಯಗಿರಿ ಠಾಣಾ ಪೊಲೀಸರು 5ಜನ ಆರೋಪಿಗಳನ್ನು ದಸ್ತಗಿರಿ ಮಾಡಿ 1- ಕನ್ನಕಳುವು. 1-ವಾಹನ ಕಳುವು 1- ಮನೆಕಳ್ಳತನ ಒಟ್ಟು 3 ಪ್ರಕರಣಗಳನ್ನು ಪತ್ತೆ ಮಾಡಿ 5.45.000 ರೂ ಮೌಲ್ಯದ 54 ಗ್ರಾಂ ಚಿನ್ನಾಭರಣ, 1 ದ್ವಿಚಕ್ರ ವಾಹನ ವನ್ನು ವಶಪಡಿಸಿಕೊಂಡಿರುತ್ತಾರೆ.
ಕೃಷ್ಣರಾಜ ಠಾಣಾ ಪೊಲೀಸರು ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ 1-ರಾತ್ರಿ ಕನ್ನಕಳುವು ಪ್ರಕರಣವನ್ನು ಪತ್ತೆ ಮಾಡಿ 4,65,000 ರೂ ಮೌಲ್ಯದ 33.730 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕುವೆಂಪುನಗರ ಠಾಣಾ ಪೊಲೀಸರು 6 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ 1 ಮನೆಕಳ್ಳತನ. 2 ಕನ್ನಕಳುವು ಒಟ್ಟು 3 ಪ್ರಕರಣಗಳನ್ನು ಪತ್ತೆ ಮಾಡಿ 4.10.000 ರೂ ಮೌಲ್ಯದ 30 ಗ್ರಾಂ ಚಿನ್ನ ಮತ್ತು ಇತರೆ ಗೃಹೋಪಯೋಗಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಲಕ್ಷಿ÷್ಮÃಪುರಂ ಠಾಣಾ ಪೊಲೀಸರು ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ 1 ಸುಲಿಗೆ ಪ್ರಕರಣ ಪತ್ತೆ ಮಾಡಿ 3,55,000 ರೂ ಮೌಲ್ಯದ 32.150 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ವಿದ್ಯಾರಣ್ಯಪುರಂ ಠಾಣಾ ಪೊಲೀಸರು ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ 1 ಸಾಮಾನ್ಯ ಕಳುವು ಪ್ರಕರಣವನ್ನು ಪತ್ತೆ ಮಾಡಿ 3 ಲಕ್ಷ ಮೌಲ್ಯದ 1576 ಗ್ರಾಂ ಬೆಳ್ಳಿ ಪದಾರ್ಥವನ್ನು ವಶಪಡಿಸಿಕೊಂಡಿದ್ದಾರೆ.
ಹೆಬ್ಬಾಳ್ ಠಾಣಾ ಪೊಲೀಸರು 8 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ 1 ದರೋಡೆ ಸಂಚು, 1 ಸುಲಿಗೆ ಒಟ್ಟು 2 ಪ್ರಕರಣಗಳನ್ನು ಪತ್ತೆ ಮಾಡಿ, ಸುಲಿಗೆ ಪ್ರಕರಣಕ್ಕೆ ಸಂಬAಧಪಟ್ಟAತೆ 1,43,000 ರೂ ಮೌಲ್ಯದ 1 ಮೊಬೈಲ್, 5ಗ್ರಾಂ ತೂಕದ ಚಿನ್ನದ ಉಂಗುರ, 60 ಗ್ರಾಂ ಬೆಳ್ಳಿ ಚೈನ್ ಮತ್ತು 1 ದ್ವಿಚಕ್ರ ವಾಹನವನ್ನು ವಶ ಪಡಿಸಿಕೊಂಡಿದ್ದಾರೆ.
ಉಳಿದAತೆ ವಿ.ವಿ.ಪುರಂ ಠಾಣಾ ಪೊಲೀಸರು ಒಬ್ಬ ಆರೋಪಿತೆಯನ್ನು ದಸ್ತಗಿರಿ ಮಾಡಿ 1 ಮನೆ ಕೆಲಸದವರಿಂದ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಿ 90,000 ರೂ ಮೌಲ್ಯದ 11.700 ಗ್ರಾಂ ಚಿನ್ನಭರಣವನ್ನು ವಶಪಡಿಸಿಕೊಂಡಿದ್ದಾರೆ. ದೇವರಾಜ ಠಾಣಾ ಪೊಲೀಸರು 03 ಆರೋಪಿಗಳನ್ನು ದಸ್ತಗಿರಿ ಮಾಡಿ 3 ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ 1,48,000/-ರೂ ಮೌಲ್ಯದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ನರಸಿಂಹರಾಜ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ 1 ವಾಹನ ಕಳುವು ಪ್ರಕರಣ ಪತ್ತೆ ಮಾಡಿ 25,000 ರೂ ಮೌಲ್ಯದ ಪ್ಯಾಸೆಂಜರ್ ಆಟೋವನ್ನು ವಶಪಡಿಸಿಕೊಂಡಿದ್ದಾರೆ ಎಂದು ವಿವರಿಸಿದರು. ಬಳಿಕ ಸ್ವತ್ತುಗಳನ್ನು ಕಳೆದುಕೊಂಡಿದ್ದ ಅದರ ಮಾಲೀಕರಿಗೆ ಅವರ ಸ್ವತ್ತುಗಳನ್ನು ಹಿಂತಿರುಗಿಸಿದರು.