3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪ್ರಧಾನಿಯಾಗಿ ಮೋದಿ 12 ವರ್ಷ: ಮೈಸೂರಿನಲ್ಲಿ ಅಭಿನಂದನಾ ಜಾಥಾ, ವಿಶೇಷ ಅರ್ಚನೆ


ಮೈಸೂರು: ಪ್ರಧಾನಿಯಾಗಿ ನರೇಂದ್ರ ಮೋದಿ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮೋದಿಯವರ ಪರವಾಗಿ ಅಭಿನಂದನ ಜಾಥಾ, ದೇವಸ್ಥಾನದಲ್ಲಿ ವಿಶೇಷ ಅರ್ಚನೆ ಕಾರ್ಯಕ್ರಮಗಳು ನಡೆದವು.
ಕೆ.ಆರ್.ಕ್ಷೇತ್ರದ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ನಗರದ ಅಗ್ರಹಾರ ಸರ್ಕಲ್ ನಿಂದ 101 ಗಣಪತಿ ದೇವಸ್ಥಾನದವರೆಗೆ ಜಾಥಾ ನಡೆದಿದ್ದು, ಪ್ರಧಾನಿ ಮೋದಿ ಅವರ ಪರವಾಗಿ ಘೋಷಣೆ ಕೂಗಿ ಶುಭ ಹಾರೈಸಲಾಯಿತು. ಹಾಗೆಯೇ ನರೇಂದ್ರ ಮೋದಿಯವರ ಹೆಸರಿನಲ್ಲಿ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಅರ್ಚನೆ ಮಾಡಲಾಯಿತು.
ಬಳಿಕ ಮಾತನಾಡಿದ ಶಾಸಕ ಟಿ.ಎಸ್. ಶ್ರೀವತ್ಸ, ಪ್ರಧಾನಿಯಾಗಿ ಮೋದಿಯವರು ದೀರ್ಘಾವಧಿಗೆ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದಾರೆ. ಭಾರತವನ್ನು ವಿಶ್ವ ಮಟ್ಟಕ್ಕೆ ಮೋದಿಯವರು ತೆಗೆದುಕೊಂಡು ಹೋಗಿದ್ದಾರೆ. ಮೋದಿಯವರಿಗೆ ಮುಂದೆ ಅಧಿಕಾರ ನಡೆಸುವುದಕ್ಕೆ ಹೆಚ್ಚು ಶಕ್ತಿ ಸಿಗಲಿ ಎಂದು ಇಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸುತ್ತಿದ್ದೇವೆ. ಈ ದಿನದ ವಿಶೇಷವೆಂದರೆ ನಮ್ಮ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಬೂತ್ ಗಳಲ್ಲಿಯೂ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸುತ್ತೇವೆ ಎಂದರು.
ಈ ವೇಳೆ ಕೆಆರ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋಪಾಲ್ ರಾಜ ಅರಸ್, ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ್, ಜೈ ಶಂಕರ್ ನಗರ ಪ್ರಧಾನ ಕಾರ್ಯದರ್ಶಿ ಸೋಮ ಸುಂದರ್, ನಗರಪಾಲಿಕೆಯ ಮಾಜಿ ಸದಸ್ಯರಾದ ಸೌಮ್ಯ ಉಮೇಶ್, ಚಂಪಕ, ಶಾರದಮ್ಮ, ವಿದ್ಯಾ ಅರಸ್, ಬಿ.ವಿ.ಮಂಜುನಾಥ್, ಜಗದೀಶ್, ಮುಖಂಡರಾದ ರಾಕೇಶ್ ಗೌಡ, ಪ್ರದೀಪ್ ಕುಮಾರ್, ಪುರುಷೋತ್ತಮ್, ಶಿವಪ್ಪ, ಸರ್ವಮಂಗಳ, ಚಂದ್ರಕಲಾ, ರೇಖಾ ಮುಂತಾದವರು ಇದ್ದರು.
ಯದುವೀರ್‌ರಿಂದ ಚಂದ್ರಮೌಳೇಶ್ವರಿ ದೇವಸ್ಥಾನದಲ್ಲಿ ಪೂಜೆ ;
ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ 12 ವರ್ಷಗಳ ನಿರಂತರ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಶ್ರೀ ಚಂದ್ರಮೌಳೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದ ಯದುವೀರ್ ಕೃಷ್ಣದತ್ತಚಾಮರಾಜ ಒಡೆಯರ್ ಅವರು, ವಿಶೇಷ ಪೂಜೆ ಸಲ್ಲಿಸಿ ಪ್ರಧಾನಿ ಅವರ ಸುದೀರ್ಘ ಆಡಳಿತದಲ್ಲಿ ಭಾರತವು ಮತ್ತಷ್ಟು ಪ್ರಗತಿ ಕಾಣಲಿ ಎಂದು ಪ್ರಾರ್ಥಿಸಲಾಯಿತು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಈ ಸಂದರ್ಭದಲ್ಲಿ ಮೈಸೂರು ನಗರ ಬಿಜೆಪಿ ಅಧ್ಯಕ್ಷ ಎಲ್ ನಾಗೇಂದ್ರ ಅವರು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ದಿನೇಶ್, ಚಿತ್ರ ನಟ ಎಸ್.ಜಯಪ್ರಕಾಶ್ (ಜೆಪಿ) ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.