
ಮೈಸೂರು: ನಗರದ ಚಾಮುಂಡಿಬೆಟ್ಟದ ಪಾದದಲ್ಲಿರುವ ಅಯ್ಯಪ್ಪ ಸ್ವಾಮಿ ಮತ್ತು ಗುರುವಾಯೂರಪ್ಪನ್ ದೇವಾಲಯದಲ್ಲಿ ಜೂ.12ರಿಂದ 19ರವರೆಗೆ ಸಹಸ್ರ ಕಲಶ ಪೂಜೆಯನ್ನು ಆಯೋಜಿಸಲಾಗಿದೆ ಶಬರಿಮಲೆ ಅಯ್ಯಪ್ಪ ಪೂಜಾ ಸಮಿತಿ ಅಧ್ಯಕ್ಷ ಜಿ.ಶ್ರೀನಿವಾಸ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 12 ರಿಂದ 19ರ ತನಕ ನಿತ್ಯ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ವಿವಿಧ ಪೂಜೆಗಳು ನಡೆಯುತ್ತವೆ. ಗಣಪತಿ ಹೋಮ, ಉಷಾ ಪೂಜಾ, ಮುಳ ಪೂಜಾ,ಅತ್ತಾಳ ಪೂಜಾ, ವಾಸ್ತು ಹೋಮ, ವಾಸ್ತು ಕಲಶಾಭಿಷೇಕಂ, ವಾಸ್ತು ಪ್ಮಣ್ಯಂ ಮುಂತಾದ ಪೂಜೆಗಳು ನಡೆಯಲಿವೆ. ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಪೂಜೆ ಹಮ್ಮಿ ಕೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರ ನೀಡಬೇಕು. ಹೆಚ್ಚಿನ ಮಾಹಿತಿಗೆ ಮೊ.ಸಂ: 93428 20188, 0821-2484688ನ್ನು ಸಂಪರ್ಕಿಸುವAತೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಆರ್.ಹರಿದಾಸ್, ಉಪಾಧ್ಯಕ್ಷ ಕೆ.ಎಸ್.ವಿರೂಪಾಕ್ಷ, ಖಜಾಂಚಿ ಕೆ.ಎನ್. ಬಸವಾರಾಧ್ಯ ಹಾಜರಿದ್ದರು