3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿದ್ಯುತ್ ಖಾಸಗಿ ಕಾರಣ ಕೈಬಿಡಲು ಸೆಸ್ಕಾಂ ಎಂಡಿಗೆ ರೈತರ ಒತ್ತಾಯ


ಮೈಸೂರು; ವಿದ್ಯುತ್ ಖಾಸಗಿಕರಣವನ್ನು ಕೈ ಬಿಡುವಂತೆ ಒತ್ತಾಯಿಸಿ ರೈತರು ಶುಕ್ರವಾರ ನಗರದ ಸೆಸ್ಕಾಂ ಎಂಡಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್,
ಕರ್ನಾಟಕ ರಾಜ್ಯದ ವಿದ್ಯುತ್ ಪ್ರಸರಣ ನಿಗಮವನ್ನು ಖಾಸಗೀಕರಣ ಮಾಡುವುದು ಕೃಷಿ ಮತ್ತು ರೈತ ವರ್ಗಕ್ಕೆ ತುಂಬಲಾರದ ನಷ್ಟ ಉಂಟಾಗುತ್ತದೆ. ಮುಂದಿನ ದಿನಗಳಲ್ಲಿ ಖಾಸಗಿಕರಣದ ಒಡೆತದಿಂದ ಕೃಷಿ ಉತ್ಪನ್ನವು ಕುಂಠಿತವಾಗುವ ಸಾಧ್ಯತೆಗಳಿರುತ್ತವೆ. ಕಾರಣ ನಿಗದಿತ ಸಮಯಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ. ವಿದ್ಯುತ್ ಪೂರೈಕೆಯು ಸರ್ಕಾರದ ಮೂಲ ಜವಾಬ್ದಾರಿಯಾಗಿದ್ದು, ಇದನ್ನು ಖಾಸಗಿ ಕಂಪನಿಗಳು ವಹಿಸಿಕೊಂಡಲ್ಲಿ ನಿಯಮ ಮತ್ತು ಷರತ್ತುಗಳನ್ನು ಹೇರುತ್ತಾರೆ. ಇದರಿಂದ ಸಮರ್ಪಕವಾದ ವಿದ್ಯುತ್ ಪೂರೈಕೆಯಾಗದೆ ಕೃಷಿ ಚಟುವಟಿಕೆ ವಿಫಲವಾಗುತ್ತದೆ ಎಂದು ದೂರಿದರು.
ರೈತರು ಕೃಷಿ ಬಿಟ್ಟು ಹೊರಬರುವ ಹಾಗೂ ಅವಕಾಶವಾದಿಯಾಗಿ ಕಾಯುತ್ತಿರುವ ಬಂಡವಾಳ ಶಾಹಿಗಳು ಮತ್ತು ಶ್ರೀಮಂತರು, ಕೃಷಿ ಭೂಮಿಯನ್ನು ಆಕ್ರಮಿಸಿ, ಮೂಲ ಕೃಷಿಕರನ್ನು ಕೂಲಿ ಕಾರ್ಮಿಕರಂತೆ ನೇಮಿಸಿಕೊಳ್ಳುವ ಸಾಧ್ಯತೆಗಳು ನಿರ್ಮಾಣವಾಗುತ್ತದೆ. ಆದ್ದರಿಂದ ವಿದ್ಯುತ್ ಖಾಸಗಿಕರಣವನ್ನು ಕೈಬಿಡಬೇಕು. ಮೂಲ ಸೌಕರ್ಯವನ್ನು ಕಲ್ಪಸಿರುವ ವಿದ್ಯುತ್ ನಿಗಮಗಳು ಖಾಸಗಿಯವರ ಕೈಗೊಂಬೆಯಾದರೆ ರಾಜ್ಯದ ಕೃಷಿ ವರ್ಗದ ರಕ್ಷಣೆ ಕೈ ತಪ್ಪಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಯಾಗಿದ್ದ ಎಸ್ ಬಂಗಾರಪ್ಪನವರ ಕಾಲದಲ್ಲಿ ಸಾಕಷ್ಟು ಹೋರಾಟದ ನಂತರ ಕೃಷಿ ಗೆ ಉಚಿತ ವಿದ್ಯುತ್ ನೀಡುವ ಘೋಷಣೆ ಆಗಿದೆ. ಆದರೆ ಕಾಫಿ ಕಂಪನಿಗಳ ಕೈಗೆ ಸಿಲುಕಿದರೆ ಸಹಾಯ ನಿಲ್ಲುವ ಸಾಧ್ಯತೆಗಳಿರುತ್ತದೆ. ಸ್ಮಾರ್ಟ್ ಮೀಟರ್ ಅಳವಡಿಕೆಯ ಒತ್ತಡಗಳಿಂದ ಕೃಷಿ ವಲಯಕ್ಕೆ ಹೊಡೆತ ಬೀಳುತ್ತದೆ. ದಿ ಟಾಟಾ ಪವರ್ ಕಂಪನಿ ಲಿಮಿಟೆಡ್ ಕರ್ನಾಟಕದಲ್ಲಿ ವಿದ್ಯುತ್ ಸಾಕಷ್ಟು ಆತಂಕ ಉಂಟು ಮಾಡುತ್ತಿದೆ. ಮುಂಬೈ ಮೂಲದ ವಿದ್ಯುತ್ ಉತ್ಪಾದನಾ ಮತ್ತು ವಿತರಣ ಸಂಸ್ಥೆ ಕೆಇಆರ್‌ಸಿಗೆ 15 ಜಿಲ್ಲೆಗಳ ವಿದ್ಯುತ್ ವಿತರಣೆಗೆ ಅರ್ಜಿ ಸಲ್ಲಿಸಿದೆ. ಅದರಲ್ಲಿ ಚೆಸ್ಕಾಂನ ಮೂರು ಕಂದಾಯ ಜಿಲ್ಲೆಗಳನ್ನು ಮೈಸೂರು ಚಾಮರಾಜನಗರ ಹಾಸನ ಒಳಗೊಂಡAತಹ ಭೌಗೋಳಿಕ ಸಂಪರ್ಕಿತ ಪ್ರದೇಶಗಳನ್ನು ಕೆಪಿಟಿಸಿಎಲ್ ವಿತರಣಾ ಪರವಾನಿಗೆ ಮಂಜೂರು ಮಾಡದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮುಖಂಡರುಗಳಾದ ರಾಜು, ಒಳಗೆರೆ ಗಣೇಶ, ಕೆರೆಹುಂಡಿ ರಾಜಣ್ಣ, ಹಾಲಿನ ನಾಗರಾಜ್, ಹನುಮಯ್ಯ, ಎಚ್. ಪ್ರಕಾಶ್, ಗಾಂಧಿ ಮಲಿಯೂರು ಮಹೇಂದ್ರ, ಸೋಮಣ್ಣ, ಅಂಡುವಿನಹಳ್ಳಿ ಮಹೇಶ್, ಬಿದರಳ್ಳಿ ಮಾದಪ್ಪ, ಸ್ಯಾಂಡ್ ಹಳ್ಳಿ ಬಸವರಾಜು, ನಾಗರಾಜಪ್ಪ, ಕಿಲ್ಲಪುರ ನಂದೀಶ್, ಕೆರಹಳ್ಳಿ ರವಿ, ದೇವಿರಮ್ಮನಹಳ್ಳಿ ಪುಟ್ಟಸ್ವಾಮಿ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಹಾಜರಿದ್ದರು