
ಬೆಂಗಳೂರು; ಬಿಗ್ ಬಾಸ್ ಕನ್ನಡ 13' ಸೀಜನ್ ಇನ್ನೇನು ಕೆಲವು ತಿಂಗಳಲ್ಲಿ ಆರಂಭವಾಗಲಿದೆ. ಇದಕ್ಕಾಗಿ ಕಾರ್ಯಕ್ರಮದ ಪ್ರೀ-ಪ್ರೊಡಕ್ಷನ್ ವರ್ಕ್ಗೆ ಚಾಲನೆ ನೀಡಲಾಗಿದೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ, ಸೆಪ್ಟೆಂಬರ್ ತಿಂಗಳಲ್ಲಿಬಿಗ್ ಬಾಸ್ ಕನ್ನಡ 13′ ಪ್ರಸಾರ ಆರಂಭವಾಗಲಿದೆ. ಹಾಗಾದ್ರೆ, ಇನ್ನೆರಡು ತಿಂಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಾವ ಧಾರಾವಾಹಿಗಳು ಎಂಡ್ ಆಗುತ್ತವೆ
ಸದ್ಯ ಪ್ರಸಾರವಾಗುತ್ತಿರುವ ಸೀರಿಯಲ್‌ಗಳು;
ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಣಿ',ಪ್ರೇಮಕಾವ್ಯ’, ಅಗ್ನಿಸಾಕ್ಷಿ',ಮುದ್ದು ಸೊಸೆ’, ಗೌರಿ ಕಲ್ಯಾಣ',ಶ್ರೀ ಗಂಧದ ಗುಡಿ’, ನಂದಗೋಕುಲ',ಭಾರ್ಗವಿ ಎಲ್‌ಎಲ್‌ಬಿ’ ಹಾಗೂ ಪವಿತ್ರ ಬಂಧನ' ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಹೊಸ ಧಾರಾವಾಹಿ ಅಗ್ನಿಸಾಕ್ಷಿ’ ಸೀರಿಯಲ್ ಈಗಷ್ಟೇ ಶುರುವಾಗಿದೆ. ದೊಡ್ಡ ಹೈಪ್‌ನೊಂದಿಗೆ ಲಾಂಚ್ ಆಗಿರುವ ಅಗ್ನಿಸಾಕ್ಷಿ' ಮೆಗಾ ಧಾರಾವಾಹಿಯಾಗಿ ಮುಂದುವರೆಯೋದ್ರಲ್ಲಿ ಅನುಮಾನವೇ ಇಲ್ಲ. ಈ ಸೀರಿಯಲ್‌ಗಳು ಎಂಡ್ ಆಗಲ್ಲ! ನಂದಗೋಕುಲ’, ಮುದ್ದು ಸೊಸೆ',ಶ್ರೀ ಗಂಧದ ಗುಡಿ’, ಗೌರಿ ಕಲ್ಯಾಣ',ಪವಿತ್ರ ಬಂಧನ’ ಧಾರಾವಾಹಿಗಳು ಟಿಆರ್‌ಪಿ ಪಟ್ಟಿಯಲ್ಲಿ ಟಾಪ್‌ನಲ್ಲಿವೆ. ಹೀಗಾಗಿ, ಈ ಐದೂ ಸೀರಿಯಲ್‌ಗಳು ಎಂಡ್ ಆಗಲ್ಲ. ಇದಂತೂ ಪಕ್ಕಾ!ಭಾರ್ಗವಿ ಎಲ್‌ಎಲ್‌ಬಿ' ಹವಾ ಕಡಿಮೆ ಒಂದ್ ಟೈಮ್‌ನಲ್ಲಿಭಾರ್ಗವಿ ಎಲ್‌ಎಲ್‌ಬಿ’ ಧಾರಾವಾಹಿಗೆ ಹೆಚ್ಚು ಟಿಆರ್‌ಪಿ ಬರುತ್ತಿತ್ತು. ಆದ್ರೀಗ, ಭಾರ್ಗವಿ ಎಲ್‌ಎಲ್‌ಬಿ' ಹವಾ ಕಡಿಮೆ ಆಗಿದೆ. ಸದ್ಯ ಕಥೆಯ ಟ್ರಾ÷್ಯಕ್ ನೋಡಿದ್ರೆ ಭಾರ್ಗವಿ ಮೇಲೆ ಮಾವ ಜೆಪಿ ಪಾಟೀಲ್‌ಗೆ ನಂಬಿಕೆ, ವಿಶ್ವಾಸ ಹೆಚ್ಚಾಗಿದೆ. ಹಾಗೇ ಮುಂದುವರೆಸಿ ಹ್ಯಾಪಿ ಎಂಡಿAಗ್ ಮಾಡಿಬಿಡ್ತಾರಾ?ಇನ್ನೂ ಇತ್ತೀಚೆಗಷ್ಟೇ ಶುರುವಾದ ಸೀರಿಯಲ್ರಾಣಿ’. ಆರಂಭದಿAದಲೂ ರಾಣಿ' ಟಿಆರ್‌ಪಿ ಪಟ್ಟಿಯಲ್ಲಿ ಕಮಾಲ್ ಮಾಡ್ತಿಲ್ಲ. ಟಿಆರ್‌ಪಿ ಆಧಾರದ ಮೇಲೆರಾಣಿ’ ಧಾರಾವಾಹಿಯನ್ನ ಎಂಡ್ ಮಾಡ್ತಾರಾ?
ಸಾಮಾನ್ಯವಾಗಿ ಬಿಗ್ ಬಾಸ್ ಕನ್ನಡ 13' ಕಾರ್ಯಕ್ರಮ ರಾತ್ರಿ 9.30ಕ್ಕೆ ಪ್ರಸಾರವಾಗೋದು. ಒಂದ್ವೇಳೆ,ಭಾರ್ಗವಿ ಎಲ್‌ಎಲ್‌ಬಿ’ ಧಾರಾವಾಹಿಯನ್ನ ಎಂಡ್ ಮಾಡಿ? ಪವಿತ್ರ ಬಂಧನ' ಸೀರಿಯಲ್ ಸ್ಲಾಟ್‌ನ ಚೇಂಜ್ ಮಾಡಬಹುದಾ? ಅಥವಾ ಯಾವ ಸೀರಿಯಲ್ ಅನ್ನೂ ಮುಗಿಸದೆಭಾರ್ಗವಿ ಎಲ್‌ಎಲ್‌ಬಿ’ ಹಾಗೂ `ಪವಿತ್ರ ಬಂಧನ’ ಧಾರಾವಾಹಿಗಳನ್ನ ಸಂಜೆ 5 ರಿಂದ 6 ಗಂಟೆಗೆ ಹಾಕಬಹುದಾ? ಸದ್ಯಕ್ಕೆ ಇವೆಲ್ಲವೂ ಪ್ರಶ್ನಾರ್ಥಕ ಹಾಗೂ ಊಹಾಪೋಹವಷ್ಟೇ. ಯಾವ ಸೀರಿಯಲ್ ಪ್ರಾಜೆಕ್ಟ್ನ ನಿಲ್ಲಿಸಬೇಕು, ಯಾವುದನ್ನ ಮುಂದುವರೆಸಬೇಕು ಅನ್ನೋದನ್ನ ಕಲರ್ಸ್ ಕನ್ನಡ ತಂಡ ನಿರ್ಧರಿಸುತ್ತದೆ.