
ಜೀ ಕನ್ನಡದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ಶ್ರೀಗುರು ರಾಘವೇಂದ್ರ ಮಹಾತ್ಮೆ’ ಧಾರಾವಾಹಿಯಲ್ಲಿ ಮಹತ್ವದ ಬದಲಾವಣೆಯಾಗುತ್ತಿದೆ. ಶ್ರೀರಾಘವೇಂದ್ರ ಸ್ವಾಮಿಗಳ ಆಗಮನವಾಗಿದೆ. ಶ್ರೀಗುರು ರಾಯರ ಪಾತ್ರ ಎಂದ ತಕ್ಷಣ ಕಣ್ಮುಂದೆ ಬರೋದು ಡಾ.ರಾಜ್ಕುಮಾರ್ ಅವರ ಚಿತ್ರ. ಇವರ ಬಳಿಕ ಮನ ಮುಟ್ಟಿದವರು ನಟ ಪರೀಕ್ಷಿತ್ ಶರಪಾಷಣ. ‘ಶ್ರೀಗುರು ರಾಘವೇಂದ್ರ ವೈಭವ’ ಧಾರಾವಾಹಿ ಸೂಪರ್ ಹಿಟ್ ಆಗಿತ್ತು. ಮನೆ ಮನೆಗೆ ರಾಯರ ಕಥೆ ಸಾರಿದ ನಟ ಇವರು. ಸದ್ಯ 16ರ‍್ಷಗಳ ಬಳಿಕ ಮತ್ತೆ ರಾಯರ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ‘ಶ್ರೀರಾಘವೇಂದ್ರ ಮಹಾತ್ಮೆ’ಗೆ ಕಾಲಿಟ್ಟಿದ್ದಾರೆ.
ಈ ಹಿಂದೆ ವೆಂಕಟನಾಥರಾಗಿ ಬಾಲ್ಯದ ಪಾತ್ರವನ್ನ ಶ್ರೇಯಸ್ ಕಶ್ಯಪ್ ಅವರು ನಿರ್ವಹಿಸಿದ್ದರು. ಇದಾದ ಬಳಿಕ ಯೌವನವಾವಸ್ಥೆಗೆ ಬಂದವರು ಅಮಿತ್ ಕಶ್ಯಪ್. ಇವರು ಮಾಡಿದ ಪಾತ್ರವನ್ನ ಸದ್ಯ ನಟ ಪರೀಕ್ಷಿತ್ ಶರಪಾಷಣ ಅವರು ಮುಂದುವರೆಸುತ್ತಿದ್ದಾರೆ. ಇವರ ಪ್ರವೇಶಕ್ಕೆ ಅದ್ಬುತ ಸನ್ನಿವೇಶಗಳು ಸಿದ್ದವಾಗಿವೆ.
ಕಥೆ ಏನು?
ಗುರುರಾಯರು ಪೂರ್ವ ಜನ್ಮದಲ್ಲಿ ಶ್ರೀಮನ್‌ನಾರಾಯಣ ವಿಷ್ಣುವಿನ ಅಂಶ ಶಂಕುಕರ್ಣ, ಪ್ರಹ್ಲಾದ, ಬಾಹ್ಲೀಕ, ವ್ಯಾಸರಾಯರು ಕಥೆ ಬರುತ್ತದೆ. ನಂತರ ಕಲಿಯುಗದ ಕಾಮಧೇನು ಆಗಿ ಅವತಾರವೆತ್ತಿದವರು ರಾಯರು. ಗುರುಗಳ ಮಹತ್ವ ಸಾರುತ್ತಿದೆ ಶ್ರೀ ರಾಘವೇಂದ್ರ ಮಹಾತ್ಮೆ'. ಅದ್ಬುತವಾದ ಗ್ರಾಫಿಕ್ಸ್ಗಳನ್ನ ಬಳಸಿ ಧಾರಾವಾಹಿಯನ್ನ ಆ ಕಾಲಘಟ್ಟದಲ್ಲಿ ಕಟ್ಟಿಕೊಟ್ಟಿದೆ. ಸದ್ಯ ಮುಂದುವರೆದ ಭಾಗ ಸನ್ಯಾಸತ್ವ. ಈ ಭಾಗದ ನಾಯಕರಾಗಿ ತಂಜಾವೂರಿನಲ್ಲಿ ರಾಜ ರಘುನಾಥ ಭೂಪಾಲನ ಸಮ್ಮುಖದಲ್ಲಿ, ಗುರು ಸುಧೀಂದ್ರರು ವೆಂಕಟನಾಥರಿಗೆ ಸನ್ಯಾಸ ದೀಕ್ಷೆಯನ್ನು ನೀಡಿ 'ಶ್ರೀ ರಾಘವೇಂದ್ರ ತೀರ್ಥರು' ಎಂದು ನಾಮಕರಣ ಮಾಡುವ ಭಕ್ತಿಭಾವದ ಕ್ಷಣಗಳು ಬರಲಿವೆ. ರಾಯರ ಪಾತ್ರದಲ್ಲಿ ಪರೀಕ್ಷಿತ್ ಸ್ಟಾರ್ ಸುವರ್ಣ ವಾಹಿನಿಯಲ್ಲಿಶ್ರೀ ಗುರು ರಾಘವೇಂದ್ರ ವೈಭವ’ 2010ರಲ್ಲಿ ಪ್ರಸಾರವಾಗಿತ್ತು. ರಾಯರ ಬಾಲ್ಯದಿಂದ ಹಿಡಿದು ಬೃಂದಾವನಸ್ಥ ರಾಗುವವರೆಗೂ ಸಂಚಿಕೆಗಳು ಮೂಡಿಬಂದಿದ್ದವು. ಬಹಳ ಪ್ರಸಿದ್ದಿ ಪಡೆದ ಧಾರಾವಾಹಿ ಇದು. ಇದೇ ಜೂನ್ 21ಕ್ಕೆ ಬರೋಬ್ಬರಿ 15ವರ್ಷಗಳನ್ನ ತುಂಬಿ 16ನೇ ವಸಂತಕ್ಕೆ ಕಾಲಿಡುತ್ತದೆ. ಸದ್ಯ ಇದೇ ಜೂನ್ ತಿಂಗಳಲ್ಲಿ ಪರೀಕ್ಷಿತ್ ಅವರು ಮತ್ತೆ ಅದೇ ರಾಯರ ಅವತಾರಕ್ಕೆ ಬಣ್ಣ ಹಚ್ಚಿ ತೆರೆಮೇಲೆ ಬರುತ್ತಿರುವುದು ಬಹಳ ವಿಶೇಷವಾದ ಕಾಕತಾಳೀಯ ಎಂದು ಹೇಳಬಹುದು. ಜೀ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ಸಂಜೆ 6ಗಂಟೆಗೆ ‘ ಶ್ರೀ ರಾಘವೇಂದ್ರ ಮಹಾತ್ಮೆ ‘ ಪ್ರಸಾರವಾಗಲಿದೆ.
ಶ್ರೀಗಂಧದ ಗುಡಿ ವಿಲನ್
ನಟ ಪರೀಕ್ಷಿತ್ ಶರಪಾಷಣ ಅವರು ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಶ್ರೀಗಂಧದ ಗುಡಿ’ ಧಾರಾವಾಹಿಯನ್ನ ನಿರ್ಮಾಣ ಮಾಡುತ್ತಿದ್ದಾರೆ. ಇದರ ಜೊತೆಗೆ ನಾಯಕಿ ಚಂದನಾಳ ಸಹೋದರ ದಾಸ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದೊಂದು ನೆಗೆಟಿವ್ ಶೇಡ್ ಇರುವ ಪಾತ್ರ.