ಭಗವದ್ಗೀತೆ ಇಂದಿಗೂ ಬದುಕಿನ ಕೈಪಿಡಿಯಾಗಿ ಉಳಿದಿದೆ
ಭಗವದ್ಗೀತೆಯ ಮೊದಲ ಅಧ್ಯಾಯವೇ “ಅರ್ಜುನ ವಿಷಾದ ಯೋಗ”.ಇಲ್ಲಿ ಯುದ್ಧಭೂಮಿಯಲ್ಲಿ ನಿಂತ ಅರ್ಜುನನ ಮನಸ್ಥಿತಿ, ಗೊಂದಲ, ಭಯ, ತಪ್ಪಿತಸ್ಥ ಭಾವನೆ ಮತ್ತು ಆತ್ಮವಿಶ್ವಾಸ ಕಳೆದುಕೊಂಡ ಸ್ಥಿತಿಯನ್ನು ಅತ್ಯಂತ ಆಳವಾಗಿ ಚಿತ್ರಿಸಲಾಗಿದೆ. “ಸಮಸ್ಯೆ ಹೊರಗಿನ ಪರಿಸ್ಥಿತಿಯಲ್ಲಿ ಅಲ್ಲ; ಅದನ್ನು ನಾವು ನೋಡುವ ಮನಸ್ಥಿತಿಯಲ್ಲಿ ಇದೆ” ಎಂಬುದು. ಭಗವದ್ಗೀತೆಯ ಕೆಲವು ಪ್ರಮುಖ ಶ್ಲೋಕಗಳೊಂದಿಗೆ ಇದನ್ನು ನೋಡೋಣ ಕುರುಕ್ಷೇತ್ರದಲ್ಲಿ ಅರ್ಜುನನ ವಿಷಾದ ಕುರುಕ್ಷೇತ್ರ ಯುದ್ಧ ಆರಂಭವಾಗಲು ಸಿದ್ಧವಾಗಿತ್ತು.ಅರ್ಜುನನು ತನ್ನ ರಥವನ್ನು ಎರಡೂ ಸೇನೆಗಳ ಮಧ್ಯೆ ನಿಲ್ಲಿಸು ಎಂದು ಕೃಷ್ಣನಿಗೆ ಹೇಳುತ್ತಾನೆ. “ಓ ಕೃಷ್ಣಾ!…