
ಭಗವದ್ಗೀತೆಯ ಮೊದಲ ಅಧ್ಯಾಯವೇ “ಅರ್ಜುನ ವಿಷಾದ ಯೋಗ”.
ಇಲ್ಲಿ ಯುದ್ಧಭೂಮಿಯಲ್ಲಿ ನಿಂತ ಅರ್ಜುನನ ಮನಸ್ಥಿತಿ, ಗೊಂದಲ, ಭಯ, ತಪ್ಪಿತಸ್ಥ ಭಾವನೆ ಮತ್ತು ಆತ್ಮವಿಶ್ವಾಸ ಕಳೆದುಕೊಂಡ ಸ್ಥಿತಿಯನ್ನು ಅತ್ಯಂತ ಆಳವಾಗಿ ಚಿತ್ರಿಸಲಾಗಿದೆ.
“ಸಮಸ್ಯೆ ಹೊರಗಿನ ಪರಿಸ್ಥಿತಿಯಲ್ಲಿ ಅಲ್ಲ; ಅದನ್ನು ನಾವು ನೋಡುವ ಮನಸ್ಥಿತಿಯಲ್ಲಿ ಇದೆ” ಎಂಬುದು.
ಭಗವದ್ಗೀತೆಯ ಕೆಲವು ಪ್ರಮುಖ ಶ್ಲೋಕಗಳೊಂದಿಗೆ ಇದನ್ನು ನೋಡೋಣ
ಕುರುಕ್ಷೇತ್ರದಲ್ಲಿ ಅರ್ಜುನನ ವಿಷಾದ
ಕುರುಕ್ಷೇತ್ರ ಯುದ್ಧ ಆರಂಭವಾಗಲು ಸಿದ್ಧವಾಗಿತ್ತು.
ಅರ್ಜುನನು ತನ್ನ ರಥವನ್ನು ಎರಡೂ ಸೇನೆಗಳ ಮಧ್ಯೆ ನಿಲ್ಲಿಸು ಎಂದು ಕೃಷ್ಣನಿಗೆ ಹೇಳುತ್ತಾನೆ.
“ಓ ಕೃಷ್ಣಾ! ನನ್ನ ರಥವನ್ನು ಎರಡೂ ಸೇನೆಗಳ ಮಧ್ಯದಲ್ಲಿ ನಿಲ್ಲಿಸು.”
ಆದರೆ ಎದುರಿಗೆ ಯಾರು ನಿಂತಿದ್ದಾರೆ ಎಂಬುದನ್ನು ಕಂಡ ಕ್ಷಣದಲ್ಲೇ ಅರ್ಜುನನ ಮನಸ್ಸು ಕುಸಿಯುತ್ತದೆ
ಮಾನಸಿಕ ಕುಸಿತದ ಮೊದಲ ಲಕ್ಷಣ
ಅರ್ಜುನ ಹೇಳುತ್ತಾನೆ:
“ನನ್ನ ಬಂಧುಗಳೇ ಯುದ್ಧಕ್ಕೆ ಸಿದ್ಧರಾಗಿ ನಿಂತಿರುವುದನ್ನು ನೋಡಿ?”
ಅದರ ನಂತರ ಅವನಲ್ಲಿ ಕಾಣುವ ಮಾನಸಿಕ ಲಕ್ಷಣಗಳನ್ನು ಆತನೇ ವಿವರಿಸುತ್ತಾನೆ:
“ನನ್ನ ಅಂಗಗಳು ನಿಶಕ್ತವಾಗುತ್ತಿವೆ. ಬಾಯಿ ಒಣಗುತ್ತಿದೆ. ದೇಹ ನಡುಗುತ್ತಿದೆ.”
ಇದು ಇಂದಿನ ಮನೋವಿಜ್ಞಾನ ಭಾಷೆಯಲ್ಲಿ ಹೇಳುವುದಾದರೆ ?
ಆತ್ಮವಿಶ್ವಾಸ ಕಳೆದುಕೊಂಡ ಅರ್ಜುನ
ಮುಂದೆ ಆತ ಹೇಳುತ್ತಾನೆ:
“ನನ್ನ ಕೈಯಿಂದ ಗಾಂಡೀವ ಜಾರುತ್ತಿದೆ.”
ಇದು ಕೇವಲ ಬಿಲ್ಲು ಜಾರುವುದು ಅಲ್ಲ.
ಅರ್ಜುನನ ಆತ್ಮವಿಶ್ವಾಸವೇ ಕುಸಿಯುತ್ತಿದೆ.
ಸಮಸ್ಯೆ ಯುದ್ಧದಲ್ಲಿಲ್ಲ ಗ್ರಹಿಕೆಯಲ್ಲಿ ಇದೆ
ಅರ್ಜುನ ಯುದ್ಧವನ್ನು “ಅಧರ್ಮ” ಎಂದು ಭಾವಿಸುತ್ತಾನೆ.
ಅವನಿಗೆ ಎದುರಿನವರು ಶತ್ರುಗಳಲ್ಲ; ಅಜ್ಜ, ಗುರು, ಬಂಧುಗಳು ಎಲ್ಲರೂ ಇದ್ದಾರೆ ಎಂಬ ಮೋಹ ಕಾಡುತ್ತದೆ.
“ಇಂತಹ ಮಹಾನುಭಾವರಾದ ಗುರುಗಳನ್ನು ಕೊಂದು ಬದುಕುವುದಕ್ಕಿಂತ ಭಿಕ್ಷೆ ಬೇಡುವುದೇ ಉತ್ತಮ.”
ಇಲ್ಲಿ ಅರ್ಜುನನು ಪರಿಸ್ಥಿತಿಯನ್ನು ಭಾವನಾತ್ಮಕವಾಗಿ ಮಾತ್ರ ನೋಡುತ್ತಿದ್ದಾನೆ.
ಕರ್ತವ್ಯ, ಧರ್ಮ, ನ್ಯಾಯ ಇವು ಅವನ ಮನಸ್ಸಿನಲ್ಲಿ ಮಸುಕಾಗಿವೆ.
ಕೃಷ್ಣ – ಗೀತಾಚಾರ್ಯ ಹಾಗೂ ಮನೋವಿಜ್ಞಾನಿ
ಇಲ್ಲಿಂದ ಕೃಷ್ಣನ ಕೌನ್ಸೆಲಿಂಗ್ ಪ್ರಾರಂಭವಾಗುತ್ತದೆ.
ಮೊದಲು ಆತ ಅರ್ಜುನನ ದೌರ್ಬಲ್ಯವನ್ನು ಪ್ರಶ್ನಿಸುತ್ತಾನೆ:
“ಇಂತಹ ಸಂದರ್ಭದಲ್ಲಿ ಈ ದೌರ್ಬಲ್ಯ ನಿನಗೆ ಹೇಗೆ ಬಂತು?”
ನAತರ ಇನ್ನೂ ಸ್ಪಷ್ಟವಾಗಿ ಹೇಳುತ್ತಾನೆ:
“ಓ ಅರ್ಜುನಾ! ಈ ನಿಷ್ಕಿçಯ ದೌರ್ಬಲ್ಯಕ್ಕೆ ಒಳಗಾಗಬೇಡ.”
ಇದು ಗದರಿಕೆ ಅಲ್ಲ.
ಒಬ್ಬ ಸೈಕಾಲಜಿಸ್ಟ್ ರೋಗಿಯೊಳಗಿನ ಶಕ್ತಿಯನ್ನು ಎಬ್ಬಿಸುವ ಪ್ರಯತ್
ಆತ್ಮಜ್ಞಾನದಿಂದ ಮನೋಸ್ಥೆöÊರ್ಯ
ಕೃಷ್ಣ ಅರ್ಜುನನ ಮನಸ್ಸನ್ನು ಹೊರಗಿನ ಸಂಬAಧಗಳಿAದ ಒಳಗಿನ ಆತ್ಮಜ್ಞಾನಕ್ಕೆ ತಿರುಗಿಸುತ್ತಾನೆ.
“ಆತ್ಮ ಹುಟ್ಟುತ್ತದೆ ಸಾಯುತ್ತದೆ.”
ಅಂದರೆ:
ನೀನು ದೇಹದ ಮಟ್ಟದಲ್ಲಿ ಮಾತ್ರ ಯೋಚಿಸುತ್ತಿದ್ದೀಯ.
ಧರ್ಮದ ದೃಷ್ಟಿಯಿಂದ ನೋಡು ಎಂದು ಕೃಷ್ಣ ಹೇಳುತ್ತಾನೆ.
ಕಾರ್ಯದಲ್ಲಿ ಏಕಾಗ್ರತೆ
ಗೀತೆ ಕಾರ್ಯಸಾಧನೆಗೆ ಮನಸ್ಸನ್ನು ಕೇಂದ್ರೀಕರಿಸಲು ಕಲಿಸುತ್ತದೆ.
ಅದಕ್ಕೆ ಅತ್ಯಂತ ಪ್ರಸಿದ್ಧ ಶ್ಲೋಕ:
“ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ”
ಅರ್ಥ:
“ನಿನಗೆ ಇರುವ ಹಕ್ಕು ಕೇವಲ ಕಾರ್ಯ ಮಾಡುವುದರಲ್ಲಿ; ಫಲದ ಮೇಲೆ ಅಲ್ಲ.”
ಇದು ಕಾರ್ಯನಿರ್ವಹಣೆಯ ಅತ್ಯುತ್ತಮ ಮನೋವಿಜ್ಞಾನ.
ಫಲದ ಭಯವೇ ಹೆಚ್ಚು ಒತ್ತಡಕ್ಕೆ ಕಾರಣ.
ಕೃಷ್ಣ ಅದನ್ನು ತೆಗೆದುಹಾಕುತ್ತಾ
ಗೊಂದಲದಿAದ ಸ್ಪಷ್ಟತೆಯ ಕಡೆಗೆ
ಆರಂಭದಲ್ಲಿ ಅರ್ಜುನ ಹೇಳಿದ್ದೇ:
ನ ಯೋತ್ಸೆ÷್ಯÃ'' ?ನಾನು ಯುದ್ಧ ಮಾಡುವುದಿಲ್ಲ.”
ಆದರೆ ಹದಿನೆಂಟು ಅಧ್ಯಾಯಗಳ ನಂತರ ಆತ ಹೇಳುತ್ತಾನೆ:
“ನನ್ನ ಮೋಹ ನಾಶವಾಗಿದೆ. ನನಗೆ ಸ್ಪಷ್ಟತೆ ಬಂದಿದೆ.”
ಇದು ಗೀತೆಯ ಸಂಪೂರ್ಣ ಕೌನ್ಸೆಲಿಂಗ್ ಪ್ರಕ್ರಿಯೆಯ ಫಲ.
ಗೀತೆ ಬದುಕಿನ ಕೈಪಿಡಿ
ಭಗವದ್ಗೀತೆ ಕೇವಲ ಧಾರ್ಮಿಕ ಗ್ರಂಥವಲ್ಲ.
ಅದು:
ಮನಸ್ಸನ್ನು ನಿರ್ವಹಿಸುವ ಪಾಠ
ಸಂಕಷ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮಾರ್ಗದರ್ಶನ
ಕರ್ತವ್ಯ ಮತ್ತು ಭಾವನೆಗಳ ನಡುವಿನ ಸಂಘರ್ಷಕ್ಕೆ ಪರಿಹಾರ
ಆತ್ಮವಿಶ್ವಾಸ ತುಂಬುವ ಮನೋವಿಜ್ಞಾನ
ಕಾರ್ಯನಿಷ್ಠ ಜೀವನದ ತತ್ವಶಾಸ್ತç
ಅರ್ಜುನ ಪ್ರತಿಯೊಬ್ಬ ಮನುಷ್ಯನ ಪ್ರತಿನಿಧಿ.
ಕೃಷ್ಣ ಪ್ರತಿಯೊಬ್ಬರೊಳಗಿನ ಜ್ಞಾನಸ್ವರ.
ಅದಕ್ಕಾಗಿ ಭಗವದ್ಗೀತೆ ಇಂದಿಗೂ ಬದುಕಿನ ಕೈಪಿಡಿಯಾಗಿ ಉಳಿದಿದೆ