Skip to main content

3Kaala News

ಸುಭಾಷಿತ 

ಅತಿಯಾಗಿ ಯಾರನ್ನೂ ಒತ್ತಾಯಪೂರ್ವಕವಾಗಿ ನಿಮ್ಮ ಜೀವನದಲ್ಲಿ ಉಳಿಸಿಕೊಳ್ಳಬೇಡಿ…”
ಅತಿಯಾಗಿ ಯಾರನ್ನೂ ಹಿಡಿದುಕೊಳ್ಳಲು ಪ್ರಯತ್ನಿಸಬೇಡಿ.
ಉಳಿಯುವ ಮನಸ್ಸಿದ್ದವರು ಕಾರಣವಿಲ್ಲದೆ ಉಳಿಯುತ್ತಾರೆ.
ಹೋಗುವ ಮನಸ್ಸಿದ್ದವರನ್ನು ಹಿಡಿದಿಟ್ಟರೂ ಪ್ರಯೋಜನವಿಲ್ಲ.
ಒತ್ತಾಯದಿಂದ ಉಳಿದ ಸಂಬಂಧಕ್ಕೆ ಆತ್ಮೀಯತೆ ಇರುವುದಿಲ್ಲ.
ಪ್ರೀತಿಯನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.
ಗೌರವವನ್ನು ಬಲವಂತದಿಂದ ಗಳಿಸಲಾಗುವುದಿಲ್ಲ.
ನಿಮ್ಮ ವ್ಯಕ್ತಿತ್ವವೇ ನಿಮ್ಮ ದೊಡ್ಡ ಆಸ್ತಿ.
ಅದನ್ನು ಯಾರಿಗಾಗಿ ಕಳೆದುಕೊಳ್ಳಬೇಡಿ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರು ಯೋಗೀಸ್ ಟ್ರಸ್ಟ್ವತಿಯಿಂದ ಕಂಪ್ಯೂಟರ್, ಮಕ್ಕಳ ಪುಸ್ತುಕಗಳ ಕೊಡುಗೆ ಹಸ್ತಾಂತರ


ಮೈಸೂರು ; ಮೈಸೂರು ಯೋಗೀಸ್ ಟ್ರಸ್ಟ್ವತಿಯಿಂದ ಶನಿವಾರ ನಗರದ ದೊಡ್ಡಪೇಟೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಗೆ ಮೈಸೂರು ನಗರ ಇಲ್ಲಿಯ ಶೈಕ್ಷಣಿಕ ಅಭಿವೃದ್ಧಿಗಾಗಿ ಕಂಪ್ಯೂಟರ್ ಹಾಗೂ ಶಾಲಾ ಮಕ್ಕಳ ಗ್ರಂಥಾಲಯಕ್ಕೆ ಕೆಲವು ಉಪಯುಕ್ತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.
ಮೈಸೂರು ಯೋಗೀಸ್ ಟ್ರಸ್ಟ್ ಸಂಸ್ಥಾಪಕ ಯೋಗ ಪ್ರಕಾಶ್, ಲಯನ್ ಸುರೇಶ್, ಗೌರವ ಅಧ್ಯಕ್ಷ ಬಿ. ವಿ. ಮಂಜುನಾಥ್ ಅವರು ಶಾಲೆಯ ಮುಖ್ಯ ಉಪಾಧ್ಯಾಯ ರವೀಶ್ ಅವರಿಗೆ ಕಂಪ್ಯೂಟರ್ ಹಾಗೂ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನ್ನು ಹಸ್ತಾಂತರಿಸಿದರು. ಈ ವೇಳೆ ವಿಶ್ವ ನಾಥ್, ಪ್ರತಿಭಾ, ಸ್ವಾಮಿ ಇನ್ನಿತರರು ಹಾಜರಿದ್ದರು.