3Kaala News

ಸುಭಾಷಿತ 

ಭೌತಿಕ ಬದುಕಿಗೆ ಆಧ್ಯಾತ್ಮದ ಜ್ಞಾನ ಅವಶ್ಯಕ. ಮನುಷ್ಯ ಧರ್ಮದಿಂದ ವಿಮುಖನಾದರೇ, ಜೀವನ ಅಶಾಂತಿಯ ಕಡಲಾಗುತ್ತದೆ. ಮನುಷ್ಯನ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೆ, ಮಾರಕವಾಗಬಾರದು.  ಸುಳ್ಳು ಹೇಳಲು ಹಲವು ದಾರಿ, ಆದರೆ ಸತ್ಯಕ್ಕೆ ಇರುವುದೊಂದೇ ದಾರಿ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವೃತ್ತಿ ಮಾರ್ಗದರ್ಶನ ಎಂಬ ವಿನೂತನ ಕಾರ್ಯಕ್ರಮ ಜಾರಿ; ಎಚ್.ವಿ.ರಾಜೀವ್


ಮೈಸೂರು; ಎಚ್.ವಿ. ರಾಜೀವ್ ಸ್ನೇಹ ಬಳಗದ ವತಿಯಿಂದ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವವರ ವಿದ್ಯಾರ್ಥಿಗಳು ಸದರಿ ವರ್ಷ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ 85%ಕ್ಕಿಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವೃತ್ತಿ ಮಾರ್ಗದರ್ಶನ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ತಿಳಿಸಿದರು.
ಶನಿವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಪ್ರತಿಭಾ ಪುರಸ್ಕಾರ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಅರ್ಜಿಯನ್ನು ಸಲ್ಲಸಲು ವಿದ್ಯಾರಣ್ಯಪುದಂ 2ನೇ ಮುಖ್ಯರಸ್ತೆ, 2ನೇ ಕ್ರಾಸ್‌ನಲ್ಲಿರುವ ಎಚ್.ವಿ. ರಾಜೀವ್ ಸ್ನೇಹ ಬಳಗದ ಕಛೇರಿಯನ್ನು ಸಂಪರ್ಕಿಸಿ ಖುದ್ದಾಗಿ ಅರ್ಜಿ ಸಲ್ಲಪಬಹುದು ಅಥವಾ ನಿಮ್ಮ ಮೊಬೈಲ್ ನಿಂದ 9513183888 ಸಂಖ್ಯೆಗೆ ವಾಟ್ಸಾಪ್‌ನಲ್ಲಿ ಹಾಯ್ ಎಂದು ಸಂದೇಶ ಕಳುಹಿಸಿದರೆ, ತಕ್ಷಣವೇ ನಿಮಗೆ ಗೂಗಲ್ ಸ್ಟೆಡ್‌ಶೀಟ್ ಲಿಂಕ್ ಕಳುಹಿಸಿಕೊಡಲಾಗುವುದು, ಆ ಲಿಂಕ್ ಮೂಲಕ ನೀವು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ಜೂನ್ 30ರ ಮಂಗಳವಾರ ಸಂಜೆ 5 ಗಂಟೆ. ಆ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದರು.
ಜುಲೈ 5 ರ ನಂತರ ಅಂತಿಮವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಥಾದ ಕಾರ್ಯಕ್ರಮಕ್ಕೆ ಭಾಗವಹಿಸಲು ಕಳುಸಲಾಗುವುದು ಹಾಗೂ ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳದ ಬಗ್ಗೆ ಪತ್ರಿಕೆಯ ಪ್ರಕಟಣೆಯ ಮೂಲಕ ಹಾಗೂ ವಾಟ್ಸಾಪ್ ಸಂದೇಶದ ಮೂಲಕ ತಿಳಿಸಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕರಿಸುವುದರೊಂದಿಗೆ, ಅವರ ಮುಂದಿನ ವಿದ್ಯಾಭ್ಯಾಸದಲ್ಲಿ ಯಾª,À ಯಾವ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯ ಎಂಬುದರ ಬಗ್ಗೆ ಪರಿಣಿತರು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ದೊರೆಯುವುದು. ಈ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸಿ, ಶೈಕ್ಷಣಿಕ ಉನ್ನತ ಸಾಧನೆಗೆ ಅಗತ್ಯವಾದ ಪ್ರೇರಣೆ ಮತ್ತು ಜಾಗೃತಿ ಉಂಟುಮಾಡುವ ಸದುದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಈ “ಸಾಧನಾ – ಪುರಸ್ಕಾರ ಸಮಿತಿಯ ಮಾರ್ಗದರ್ಶಕರುಗಳಾಗಿ” ಶಿಕ್ಷಣ ತಜ್ಞರು ಹಾಗೂ ರೈಸ್ ಫೌಂಡೇಷನ್ ಸಂಸ್ಥೆಯ ಡಾ. ಬಿ ಅಚ್ಚುತರಾವ್, ವ್ಯಕ್ತಿತ್ವ ಕಲಿಕಾ ಪ್ರೇರಣಾ ಗುರುಗಳಾದ ಚೇತನ್ ರಾಮ್ ಆರ್.ಎ, ನಿವೃತ್ತ ಪ್ರಾಂಶುಪಾಲ ಎಸ್. ನಂದೀಶ್ ಹಾಗೂ ಜಿ. ನಂಜುAಡಸ್ವಾಮಿ, ಸಹ ಪ್ರಾಧ್ಯಾಪಕ ಡಾ. ಸಂಜಯ್ ಕುಮಾರ್ ಸಿ.ಕೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಅಧೀಕ್ಷಕರಾದ ಚಂಚಲಾಕ್ಷಿ ರವರು ಇರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಎಚ್.ವಿ. ರಾಜವ್ ಸ್ನೇಹಬಳಗದ ಸಂಚಾಲಕರಾದ ಭಾಗ್ಯಶ್ರೀ ಆರ್ ಭಟ್ ಅವರ ಮೊಬೈಲ್ ನಂ 9513183888ನ್ನು ಸಂಪರ್ಕಿಸಬೇಕೆAದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಪಾಲಿಕೆಯ ಮಾಜಿ ಸದಸ್ಯರುಗಳಾದ ಕೆ.ವಿ.ಮಲ್ಲೇಶ್, ಭೈರಪ್ಪ ಮತ್ತಿತರರು ಉಪಸ್ಥಿತರಿದ್ದರು.