3Kaala News

ಸುಭಾಷಿತ 

ಓಟದ ಬದುಕಿನಲ್ಲಿ ಎಲ್ಲವನ್ನು ತಕ್ಷಣವೇ ಪಡೆದುಕೊಳ್ಳಬೇಕೆಂಬ ನಿನ್ನ ಹಟವೇ ನಿನ್ನ ನೆಮ್ಮದಿಯನ್ನು ಕದಿಯುತ್ತದೆ. ಸಮಯಕ್ಕಿಂತ ಮುಂಚೆ, ಹಣೆ ಬರಕಿಂತ ಮುಂಚೆ, ಹೆಚ್ಚಿಗೆ ಯಾರಿಗೂ ಏನೂ ಸಿಗುವುದಿಲ್ಲ . ನಿನ್ನ ಪ್ರಯತ್ನ ನಿರಂತರವಾಗಿರಲಿ. ಆದರೆ, ಫಲಿತಾಂಶಕ್ಕಾಗಿ ಇಂದಿನ ಶಾಂತಿಯನ್ನು ಬಲಿ ಕೊಡಬೇಡ. ಭಗವಾನ್ ಶ್ರೀ ಕೃಷ್ಣ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜಪ್ರಭುತ್ತದೊಳಗೆ ಪ್ರಜಾ ಪ್ರಭುತ್ವ ತೋರಿಸಿದ ಮಹಾತ್ಮರು


ಮೈಸೂರು: ಇಂದು ನೆಪಮಾತ್ರಕ್ಕೆ ಪ್ರಜಾಪ್ರಭುತ್ವ ಇದೆ. ಅದರೊಳಗೆ ರಾಜಪ್ರಭುತ್ವ ಎದ್ದು ಕಾಣಿಸುತ್ತಿದೆ. ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜಪ್ರಭುತ್ತದೊಳಗೆ ಪ್ರಜಾ ಪ್ರಭುತ್ವ ತೋರಿಸಿದ ಮಹಾತ್ಮರು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಹೇಳಿದರು.
ಕನ್ನಡ ಚಳವಳಿ ಕೇಂದ್ರ ಸಮಿತಿ ವತಿಯಿಂದ ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ಮಹನೀಯರನ್ನು ಪಡೆದ ಕನ್ನಡಿಗರು ಅದರಲ್ಲೂ ಮೈಸೂರಿಗರು ಅದೃಷ್ಟವಂತರು. ಆದರೆ ನಾಲ್ವಡಿ ಅವರೇ ನತದೃಷ್ಟರು ಎನ್ನಬಹುದು. ಒಡೆಯರ್ ಅವರಿಗೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ. ಅವರು ಮೇಲ್ಜಾತಿಯಲ್ಲಿ ಹುಟ್ಟಿದ್ದರೆ ಇಷ್ಟೊತ್ತಿಗೆ ದೇವಸ್ಥಾನವನ್ನೇ ಕಟ್ಟಿಸಿ ಬಿಡುತ್ತಿದ್ದರು ಎಂದರು.
ಇಂದಿನ ರಾಜಕಾರಣಿಗಳು ದಾವಣಗೆರೆಗೆ ಬಂದರೆ ಬಿಡುವುದಿಲ್ಲ, ಬಳ್ಳಾರಿಗೆ ಬರಲು ಬಿಡುವುದಿಲ್ಲ ಎಂದು ಬೊಬ್ಬೆ ಹೊಡೆಯುತ್ತಾರೆ.
ಆದರೆ ಪ್ರಜೆಗಳನ್ನೇ ದೇವರು ಎಂದು ಭಾವಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಸಾಮ್ರಾಜ್ಯ ವಿಸ್ತರಿಸದಿದ್ದರೂ ಅವರ ಅಸಾಧಾರಣ ಕಾರ್ಯಗಳು ಇಂದಿಗೂ ಉಳಿದಿವೆ. ನಮ್ಮಲ್ಲಿ ಎಲ್ಲದಕ್ಕೂ ಜಾತಿಯ ಚೌಕಟ್ಟಿನಲ್ಲಿ ತಂದು ನಿಲ್ಲಿಸಿ ಬಿಡುವ ಪ್ರತೀತಿ ಬೆಳೆದು ಬಂದಿದೆ. ನಾಲ್ವಡಿ ಅವರು ಮೇಲ್ದಾತಿಯಲ್ಲಿ ಹುಟ್ಟಿದ್ದರೆ ಇಷ್ಟೊತ್ತಿಗೆ ಎಷ್ಟು ಪ್ರತಿಮೆಗಳು, ದೇವಸ್ಥಾನಗಳು ನಿರ್ಮಾಣ ಆಗಿರುತ್ತಿತ್ತು ಎಂದರು. ಅಂಬೇಡ್ಕರ್ ಅವರು ತಮ್ಮ ಕಡೆಯ ದಿನಗಳಲ್ಲಿ ಸಾಹು ಮಹಾರಾಜರ ಜತೆ ಮಾತನಾಡುವಾಗ ನಾಲ್ವಡಿ ಅವರ ಕಾರ್ಯಗಳ ಬಗ್ಗೆ ಕೇಳಿ, ಖುದ್ದು ಅವರೇ ಬಂದು ನಿರ್ಲಕ್ಷಿತ ಸಮುದಾಯಗಳಿಗೆ ಆರಂಭಿಸಿದ್ದ ಶಾಲೆಗೆ ಭೇಟಿ ನೀಡಿ ಉಪನ್ಯಾಸ ನೀಡುತ್ತಾರೆ. ಅಂತಹ ಆದರ್ಶದ ವ್ಯಕ್ತಿತ್ವ ನಾಲ್ವಡಿ ಅವರದ್ದು. ಸಮಾಜವು ಜೀವಂತವಾಗಿದೆ ಎಂಬುದಕ್ಕೆ ಕನ್ನಡಪರ ಸಂಘಟನೆಗಳು ಕಾರಣ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮತ್ತಿತರರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್ ಆಶಯ ಭಾಷಣ ಮಾಡಿದರು. ರಂಗಕರ್ಮಿ ರಾಜಶೇಖರ ಕದಂಬ, ಎಚ್.ಕೆ. ಅನಂತ, ದಾರಿಪುರ ಚಂದ್ರಶೇಖರ್, ಜಯಪ್ರಕಾಶ್, ನಾರಾಯಣ ರಾವ್, ರಂಗನಾಥ್ ಉಪಸ್ಥಿತರಿದ್ದರು.
ಐವರು ಸಾಧಕರಿಗೆ ಶ್ರೀ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ: ಮೈಸೂರು ವಾಣಿಜ್ಯ ಮತ್ತುಕೈಗಾರಿಕೆ ಸಂಘದ ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು, ಸಮಾಜ ಸೇವಕ ಬಿ.ಆರ್.ನಟರಾಜ ಜೋಯಿಸ್, ಉದ್ಯಮಿ ಶ್ರೀದೇವಪ್ರಕಾಶ್, ಶಿಕ್ಷಣ ಕ್ಷೇತ್ರದ ಆದಿಶೇಷನ್‍ಗೌಡ, ಪತ್ರಕರ್ತ ಮಹೇಂದ್ರ ದೇವನೂರು ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು