
ಮೈಸೂರು; ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಮೈಸೂರು ಜಿಲ್ಲಾ ಸಮಿತಿ, ಮಂಥನ, ವನವಾಸಿ ಕಲ್ಯಾಣ ಮತ್ತು ಜನಜಾಗರಣ ಟ್ರಸ್ಟ್ ಇವರ ಸಂಯುಕ್ತ ಪ್ರಾಯೋಜಕತ್ವದಲ್ಲಿ ಮೈಸೂರಿನ ಝಾನ್ಸಿ ಲಕ್ಷ್ಮೀ ಬಾಯಿ ರಸ್ತೆಯಲ್ಲಿರುವ ಮಾಧವ ಕೃಪಾದಲ್ಲಿ ಅವಿಶ್ರಾಂತ ಧ್ಯೇಯಜೀವಿ ಮೈ. ಚ. ಜಯದೇವರ ಬದುಕು ನೆನಪು ಪುಸ್ತಕ ಲೋಕಾರ್ಪಣೆ ಗೊಂಡಿತು.
ಈ ಸಂದರ್ಭದಲ್ಲಿ ಜ್ಯೇಷ್ಠ ಸಂಘ ಪ್ರಚಾರಕ ಸು.ರಾಮಣ್ಣ ಮಾತನಾಡಿ, ಸಂಘ ಸರ ಸಂಚಾಲಕ ಡಾ. ಹೆಡ್ಗೆ ಜೀ ಅವರು ಹೀಗೆ ಬಾಳಿದರು ಎಂದು ಹೇಳುವ ಅಸಂಖ್ಯಾತ ಸಾಧಕರು ಸಂಘದಲ್ಲಿ ಇದ್ದಾರೆ. ಅಂತಹವರ ಸಾಲಿನಲ್ಲಿ ಮೈ ಚ ಜಯದೇವ, ಹೊ ವೆಂ ಶೇಷಾದ್ರಿ, ಕೃಷ್ಣಪ್ಪ ಮುಂತಾದವರಿದ್ದಾರೆ. ಅವರ ಪೈಕಿ ಮೈಸೂರಿನವರೇ ಆಗಿದ್ದ ಮೈ ಚ ಜಯದೇವ ಅವರ ಸಂಘ ಜೀವನ ಕುರಿತು ಹೆಸರಾಂತ ಲೇಖಕ ಬಾಬು ಕೃಷ್ಣಮೂರ್ತಿ ಅವರು ರಚಿಸಿರುವ ಅವಿಶ್ರಾಂತ ಧ್ಯೇಯಜೀವಿ ಮೈ ಚ ಜಯದೇವ:ಬದುಕು ನೆನಪು ಪುಸ್ತಕವನ್ನು ಪರಿಚಯಿಸಿದ್ದಾರೆ ಎಂದರು.
ಅತ್ಯಂತ ಸರಳಜೀವಿಯಾಗಿದ್ದ ಮೈ ಚ ಜಯದೇವ ಅವರು ಅಂತ್ಯದವರೆಗೂ ಬತ್ತಿಹೋಗದ ಚೈತನ್ಯಜೀವಿಯಾಗಿದ್ದರು. ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ ನ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿಭಾಯಿಸಿದರು. ಅವರು ಎಂದಿಗೂ ಸಂಘಕ್ಕೆ, ರಾಷ್ಟ್ರೋತ್ಥಾನ ಸಂಸ್ಥೆಗೆ ತಾನು ಅನಿವಾರ್ಯ ಎಂದು ಭಾವಿಸಲಿಲ್ಲ. ಬದಲಾಗಿ ಸಂಘಕ್ಕೆ ನಿಷ್ಠೆಯನ್ನು ತೋರಲು ಸಂಘ ಮತ್ತು ರಾಷ್ಟ್ರೋತ್ಥಾನ ಸಂಸ್ಥೆಗಳು ತಮಗೇ ಅನಿವಾರ್ಯ ಎಂದೇ ಭಾವಿಸಿದ್ದರು. ಅವರ ಚಿಂತನೆ, ಅಧ್ಯಯನ ಮತ್ತು ತಪಸ್ಸು ಅವರನ್ನು ಋಷಿ ಸದೃಶರನ್ನಾಗಿಸಿದವು ಎಂದು ಹೇಳಿದರು.
ರಾಷ್ಟ್ರೋತ್ಥಾನ ಸಾಹಿತ್ಯ ಪರಿಷದ್ ನ ಸೇವೆಗಾಗಿ ತಮ್ಮನ್ನು ತಾವು ಒಪ್ಪಿಸಿಕೊಂಡು, ಸೇವೆಗಾಗಿ ತಮ್ಮನ್ನು ಸಜ್ಜುಗೊಳಿಸಿಕೊಂಡು, ಕನ್ನಡ ಸಾಹಿತ್ಯ ಸೇವೆಯಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ತು ಅಸಾಮಾನ್ಯ ಸಾಧನೆಯನ್ನು ಮಾಡಲು ಜಯದೇವ ಅವರು ಹಿರಿದಾದ ಪಾತ್ರ ವಹಿಸಿದರು. ಅದನ್ನು ಶೂನ್ಯದಿಂದ ಶಿಖರದವರೆಗೆ ಕೊಂಡೊಯ್ದ ಜಯದೇವರು ಐತಿಹಾಸಿಕ ದಾಖಲೆಗಳನ್ನು ಬರೆದರು. ಐನೂರ ಮೂವತ್ತಕ್ಕೂ ಹೆಚ್ಚು ಮಹಾಪುರುಷರನ್ನು ಅವರು ಪರಿಚಯಿಸಿದರು. ಕೋಟಿಗಟ್ಟಲೆ ಭಾರತ ಭಾರತಿ ಪುಸ್ತಕಗಳು ಮಾರಾಟವಾದವು. ಈ ಹಾದಿಯಲ್ಲಿ ಅಸಂಖ್ಯಾತ ಸಾಹಿತಿಗಳ ಸಂಪರ್ಕವನ್ನು ಗಳಿಸಿಕೊಂಡರು.
ನಿರ್ಮೋಹ ನಿಸ್ಸಂಗ, ಜನಗಳ ನಡುವೆ ಬರೆಯುತ್ತಿದ್ದುದು ಅವರ ವಿಶೇಷ ಗುಣವಾಗಿತ್ತು. ಯಾರು ಬೇಡದವರು ಆಗಬಾರದು ಎನ್ನುವ ನಿಲುವನ್ನು ಹೊಂದಿದ್ದರು. iಟಿvoಟvemeಟಿಣ ತಿiಣhouಣ ಚಿಣಣಚಿಛಿhmeಟಿಣ'', ಮತ್ತುಠಿuಡಿsuiಣ oಜಿ exಛಿeಟಟeಟಿಛಿe ಎಂಬ ವಿಶೇಷಣಗಳು ಜಯದೇವರ ಕಾರ್ಯಶೈಲಿಯಲ್ಲಿ ಸದಾ ಗೋಚರಿಸುತ್ತಿದ್ದವು ಎಂದರು. ಅವರನ್ನುರಾಷ್ಟ್ರೋತ್ಥಾನ” ದ ಜವಾಬ್ದಾರಿಯಿಂದ ವಿಮುಕ್ತಗೊಳಿಸಿ ಪ್ರಚಾರಕರಾಗಿ ನೇಮಿಸಿದ ಕ್ಷಣದಿಂದ ಕಿಂಚಿತ್ತಾದರೂ ವಿಚಲಿತರಾಗದೆ, ಯಾವುದೇ ರೀತಿಯ “seಟಿse oಜಿ beಟoಟಿgiಟಿg” ಕುರುಹುಗಳನ್ನು ತಾಳದೆ, ಮುಂದಿನ ಜವಾಬ್ದಾರಿಯನ್ನು ಅತ್ಯಂತ ಸಹಜವಾಗಿಯೇ ಒಪ್ಪಿಕೊಂಡು ಅದಕ್ಕಾಗಿ ಸಜ್ಜುಗೊಂಡರು ಎಂದು ತಿಳಿಸಿದರು.
ನಂತರ ಮಾತನಾಡಿದ ಮುಖ್ಯ ಅತಿಥಿಯಾದ ಉದ್ಯಮಿ ಡಾ ಎಂ ಜಗನ್ನಾಥ ಶೆಣೈ, ಮೈ ಚ ಜಯದೇವ ಅವರ ತಂದೆಯವರ ಸೇವಾ ಮನೋಭಾವವನ್ನೂ, ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗಿನ ಸುದೀರ್ಘ ಸಂಬಂಧವನ್ನು ನೆನಪಿಸಿಕೊಂಡರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಪ್ರಾಂತ ಸಂಪರ್ಕ ಪ್ರಮುಖರಾದ ಡಾ ವಿ. ರಂಗನಾಥ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ವನವಾಸಿ ಕಲ್ಯಾಣದ ಆನಂದ್ ಸ್ವಾಗತಿಸಿದರು. ಅಭಾಸಾಪ ಮೈಸೂರು ಜಿಲ್ಲಾ ಸಮಿತಿಯ ಸಹಕಾರ್ಯದರ್ಶಿ ಶ್ರೀಮತಿ ರೂಪಶ್ರೀ ನಾಗರಾಜ್ ಪ್ರಾರ್ಥನೆ, ಹಾಗೂ ಸಮಿತಿಯ ಜಿಲ್ಲಾಧ್ಯಕ್ಷ ಎಸ್ ಸುಬ್ರಹ್ಮಣ್ಯ ವಂದನಾರ್ಪಣೆಯನ್ನು ಸಲ್ಲಿಸಿದರು. ಜಯರಾಮ್ ಅವರಿಂದ ವಂದೇ ಮಾತರಂ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.