ಬಿಜೆಪಿ ಎಸ್ ಟಿ ಮೋರ್ಚಾ ವತಿಯಿಂದ ಜುಲೈ 7 ರಂದು ಮೈಸೂರಿನಲ್ಲಿ ಜಾಗೃತಿ ಸಮಾವೇಶ
ಮೈಸೂರು; ರಾಜ್ಯ ಕಾಂಗ್ರೆಸ್ ಸರ್ಕಾರವು ಎಸ್ ಟಿ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತ ಬಂದಿದ್ದು, ಎಸ್ ಟಿ ಸಮುದಾಯಕ್ಕೆ ಸಂವಿಧಾನ ಬದ್ಧ ಶೇ 7ರ ಮೀಸಲಾತಿ ಜಾರಿಯಾಗಲೇ ಬೇಕೆಂದು ರಾಜ್ಯ ಬಿಜೆಪಿ ಎಸ್‍ಟಿ ಮೋರ್ಚಾ ವತಿಯಿಂದ ರಾಜ್ಯಾದ್ಯಂತ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿದೆ. ಅದರಂತೆ ಮೈಸೂರಿನಲ್ಲಿಯೂ ಜುಲೈ ರಂದು ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶವನ್ನು ಆಯೋಜಿಸಿದೆ. ಅದರ ಹಿನ್ನೆಲೆಯಲ್ಲಿ ಮೈಸೂರು ನಗರ ಹಾಗೂ ಗ್ರಾಮಾಂತರ ಎಸ್ ಟಿ ಮೋರ್ಚಾ ಪದಾಧಿಕಾರಿಗಳ ಮೈಸೂರಿನ ಬಿಜೆಪಿ ಪಕ್ಷದ ಕಛೇರಿಯಲ್ಲಿ…