3Kaala News

ಸುಭಾಷಿತ 

ಓಟದ ಬದುಕಿನಲ್ಲಿ ಎಲ್ಲವನ್ನು ತಕ್ಷಣವೇ ಪಡೆದುಕೊಳ್ಳಬೇಕೆಂಬ ನಿನ್ನ ಹಟವೇ ನಿನ್ನ ನೆಮ್ಮದಿಯನ್ನು ಕದಿಯುತ್ತದೆ. ಸಮಯಕ್ಕಿಂತ ಮುಂಚೆ, ಹಣೆ ಬರಕಿಂತ ಮುಂಚೆ, ಹೆಚ್ಚಿಗೆ ಯಾರಿಗೂ ಏನೂ ಸಿಗುವುದಿಲ್ಲ . ನಿನ್ನ ಪ್ರಯತ್ನ ನಿರಂತರವಾಗಿರಲಿ. ಆದರೆ, ಫಲಿತಾಂಶಕ್ಕಾಗಿ ಇಂದಿನ ಶಾಂತಿಯನ್ನು ಬಲಿ ಕೊಡಬೇಡ. ಭಗವಾನ್ ಶ್ರೀ ಕೃಷ್ಣ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಾಯಕ ಜನಾಂಗ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು ಶ್ರೀ ಶ್ರೀ.ಪ್ರಸನ್ನಾನಂದ ಪುರಿ ಸ್ವಾಮೀಜಿ


ಚಾಮರಾಜನಗರ. ಜೂನ್ 21; ನಾಯಕ ಜನಾಂಗ ನಿಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಿ ಅವರ ಭವಿಷ್ಯ ಉಜ್ವಲ ಮಾಡಿ ಎಂದು ದಾವಣಗೆರೆ ಜಿಲ್ಲೆ, ಹರಿಹರ ತಾಲೂಕು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ಪ್ರಸನ್ನ ನಂದ ಪುರಿ ಮಹಾಸ್ವಾಮಿಜಿ ಕರೆ ನೀಡಿದರು
ರಾಜ್ಯದಲ್ಲಿ 75 ಲಕ್ಷಕ್ಕೂ ಹೆಚ್ಚು ನಾಯಕ ಜನಾಂಗ ವಾಸ ಮಾಡುತ್ತಿದ್ದೇವೆ ತಮ್ಮ ಮಕ್ಕಳ ಭವಿಷ್ಯ ಉಜ್ವಲಕ್ಕಾಗಿ ಪೋಷಕರು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮುಖ್ಯ ವಾಹಿನಿಗೆ ತರಬೇಕೆಂದು ತಿಳಿಸಿದವರು
ರಾಮಸಮುದ್ರದ ನಾಯಕರ ಬಡಾವಣೆಯಲ್ಲಿ
ಶ್ರೀ ಆಂಜನೇಯಸ್ವಾಮಿ, ಶ್ರೀ ಮಹರ್ಷಿ ವಾಲ್ಮೀಕಿ,ರಾಜವೀರ ಮದಕರಿನಾಯಕ ಪುತ್ಥಳಿಗಳು ಮತ್ತು ನೂತನವಾಗಿ ನಿರ್ಮಿಸಿರುವ ಮಹಾದ್ವಾರ ಉದ್ಘಾಟನೆ ಪೂಜಾ. ಹೋಮ ಪುಟಾಣಿ ಮಕ್ಕಳ ಹಾಲುರವೆ ಮಂಟೆಸ್ವಾಮಿ ದೇವರ ಮೆರವಣಿಗೆ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡ ಜನಾಂಗಕ್ಕೆ ಹೆಚ್ಚಿನ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದು ಇತ್ತೀಚಿಗೆ ಸಚಿವ ಜಾರಕಿಹೊಳಿ ನೇತೃತ್ವದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಸಂಪರ್ಕ ಮಾಡಿ ಮನವಿ ಸಲ್ಲಿಸಿದ್ದೇವೆ ಕೂಡಲೆ ಸರ್ಕಾರ ಜಾರಿ ಮಾಡಬೇಕೆಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆ ವಸಿದ್ದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಂ ರಾಮಚಂದ್ರ ಮಾತೆನಾಡಿ ಆಧ್ಯಾತ್ಮಿಕ ದಿಂದ ಮನಸಿಗೆ ಸುಖ ಶಾಂತಿ ನೆಮ್ಮದಿ ಸಿಗಲಿದೆ ಆದ್ದರಿಂದ ಬಿಡುವಿನ ಸಂದರ್ಭ ದಲ್ಲಿ ವಾಲ್ಮೀಕಿ ಕೃತಿಗಳನ್ನು ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು
ಚಾಮರಾಜನಗರಜಿಲ್ಲಾ ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ರಾಮಸಮುದ್ರದ ಚಂದ್ರಶೇಖರ್. ನಗರಸಭೆ ಮಾಜಿ ಅಧ್ಯಕ್ಷ ಸುರೇಶ್. ಮಾಜಿ ಉಪಾಧ್ಯಕ್ಷ ಸುಧಾ. ಬಿಜೆಪಿ ಮುಖಂಡ ಜಯ ಸುಂದರ್, ಬುಲೆಟ್ ಚಂದ್ರು. ವಿರಾಟ್ ಶಿವು.
ನಾಯಕ ಜನಾಂಗ ರಾಮಸಮುದ್ರ ನಾಯಕ ಜನಾಂಗದ ಯಜಮಾನರು. ವೀರ ಮದಕರಿ ನಾಯಕ ಸಂಘದ. ಅಧ್ಯಕ್ಷರು ಪದಾಧಿಕಾರಿಗಳು. ಜಿಲ್ಲೆಯ ನಾಯಕ ಜನಾಂಗ ಯಜಮಾನರು ಊರಿನ ಗ್ರಾಮಸ್ಥರು. ಹಾಜರಿದ್ದರು. ಐದು ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು.
ಸ್ವಾಮೀಜಿಗಳಿಗೆ ಅದ್ದೂರಿ ಸ್ವಾಗತ ಊರಿನ ಪ್ರಮುಖ ಬೀದಿಗಳಲ್ಲಿ ಹಲವಾರು ಜನಪದ ಕಲಾ ತಂಡದ ಜೊತೆಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆದುಕೊಂಡು ಬರಲಾಯಿತು