3Kaala News

ಸುಭಾಷಿತ 

ಓಟದ ಬದುಕಿನಲ್ಲಿ ಎಲ್ಲವನ್ನು ತಕ್ಷಣವೇ ಪಡೆದುಕೊಳ್ಳಬೇಕೆಂಬ ನಿನ್ನ ಹಟವೇ ನಿನ್ನ ನೆಮ್ಮದಿಯನ್ನು ಕದಿಯುತ್ತದೆ. ಸಮಯಕ್ಕಿಂತ ಮುಂಚೆ, ಹಣೆ ಬರಕಿಂತ ಮುಂಚೆ, ಹೆಚ್ಚಿಗೆ ಯಾರಿಗೂ ಏನೂ ಸಿಗುವುದಿಲ್ಲ . ನಿನ್ನ ಪ್ರಯತ್ನ ನಿರಂತರವಾಗಿರಲಿ. ಆದರೆ, ಫಲಿತಾಂಶಕ್ಕಾಗಿ ಇಂದಿನ ಶಾಂತಿಯನ್ನು ಬಲಿ ಕೊಡಬೇಡ. ಭಗವಾನ್ ಶ್ರೀ ಕೃಷ್ಣ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕರಾಮುಕ್ತ ವಿವಿಯಲ್ಲಿ ಯೋಗ ದಿನಾಚರಣೆ


ಮೈಸೂರು; ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕರಾಮುಕ್ತ ವಿವಿಯ ಡೀನ್ ಪೆÇ್ರ. ಎಂ ರಾಮನಾಥಂ ನಾಯುಡು ಮಾತನಾಡಿ,
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವ ಉಪಯೋಗ ವಿಶೀಷ್ಟತೆ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ರಾಧ ಎಂ.ಡಿ ಮಾತನಾಡಿ, ಪ್ರಸ್ತುತ ವಿದ್ಯಾಮಾನಗಳಿಗೆ ಯೋಗ ಎಷ್ಟು ಅವಶ್ಯಕತೆ ಎಂಬುದನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಲಸಚಿವ ಪೆÇ್ರ.ನವೀನ್ ಕುಮಾರ್ ಎಸ್ ಕೆ ಮಾತನಾಡಿ, ತಾಳ್ಮೆ, ಏಕಾಗ್ರತೆಗೆ ಯೋಗ ಎಷ್ಟು ಪರಿಣಾಮಕಾರಿ ಬೀರುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕುಲಸಚಿವ(ಪರೀಕ್ಷಾಂಗ) ಡಾ.ಸಿ.ಎಸ್ ಆನಂದಕುಮಾರ್, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಕೃಷ್ಣಪ್ಪ ಎನ್, ಡಾ ಚಿದಾನಂದ.ಎಲ್, ಡಾ. ಕೃಷ್ಣಪ್ಪ.ಎನ್, ಶಿಕ್ಷಣ ಶಾಸ್ತ್ರ ವಿಭಾಗದವರು ಹಾಗೂ ವಿದ್ಯಾರ್ಥಿಗಳು ಅಧ್ಯಾಪಕರುಗಳು ಮತ್ತು ಆಧ್ಯಾಪಕೇತರ ಸಿಬ್ಬಂದಿ, ಸ್ಟುಡಿಯೊ ವಿಭಾಗದ ಸಿಬ್ಬಂದಿಗಳು ಹಾಜರಿದ್ದರು.ನಂತರ ಆಡಳಿತ ಭವನದ ಮುಂಭಾಗ ಯೋಗಭ್ಯಾಸ ಮಾಡಲಾಯಿತು.