Skip to main content

3Kaala News

ಸುಭಾಷಿತ 

ಬದುಕೆಂಬುದು ಚೈನಿನ ಸರಪಳಿ ಇದ್ದ ಹಾಗೆ. ಪ್ರತಿಕೊಂಡಿಯೂ ಗಟ್ಟಿಯಾಗಿರಬೇಕು. ಕೊಂಡಿಗಳ ನಡುವೆ ಬಿರುಕು ಬಿಟ್ಟಾಗ ಗಟ್ಟಿಯಾದ ಬೆಸುಗೆಗಳನ್ನು ನಿರಂತರವಾಗಿ ಹಾಕುತ್ತಿರಬೇಕು. ನಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಂತು; ಆದಮ್ಯ ಆತ್ಮವಿಶ್ವಾಸದಿಂದ ನಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಾಲ್ವಡಿ ಕೃಷ್ಣರಾಜರ ಮಾಡಿದ ಅಭಿವೃದ್ಧಿ ಕೆಲಸಗಳು ಅಜರಾಮರ ; ಶಾಸಕ ಟಿ.ಎಸ್.ಶ್ರೀವತ್ಸ


ಮೈಸೂರು ; ಮೈಸೂರು ಸಂಸ್ಥಾನವನ್ನಾಳಿದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿದ ಶಾಶ್ವತ ಕೆಲಸಗಳಿಂದ ಕನ್ನಡ ನಾಡಿನ ಅಭಿವೃದ್ಧಿ ನೂರ್ಮಡಿಯಾಗಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಭಾಂಗಣದಲ್ಲಿ ಪಾತಿ ಫೌಂಡೇಶನ್‍ವತಿಯಿಂದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 142ನೇ ಜಯಂತೋತ್ಸವ ಪ್ರಯುಕ್ತ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರದ ಸಾಧಕರಾದ
ಡಾ, ಚಂದ್ರಶೇಖರ್ ( ಯೋಗ ಹಾಗೂ ವೈದ್ಯಕೀಯ ಕ್ಷೇತ್ರ), ಯೋಗ ಪ್ರಕಾಶ್ ( ಯೋಗ ಕ್ಷೇತ್ರ), ಸೀಮಾ( ಯೋಗ ಕ್ಷೇತ್ರ), ಡಾ ಪಿ ಎಂ ಗಣೇಶ್ ಕುಮಾರ್ ( ಕ್ರೀಡಾ ಕ್ಷೇತ್ರ), ಎಸ್ ವಿ ವೆಂಕಟೇಶಯ್ಯ( ಯೋಗ ಕ್ಷೇತ್ರ), ಡಾಕ್ಟರ್ ಕಾವ್ಯ ಎಸ್( ವೈದ್ಯಕೀಯ ಕ್ಷೇತ್ರ), ಲಯನ್ ಕೆ ಎನ್ ಸುರೇಶ್ ( ಧಾರ್ಮಿಕ ಕ್ಷೇತ್ರ), ಸುಮ ರಾಜ್ ಕುಮಾರ್ ( ನಿರೂಪಣೆ ಕ್ಷೇತ್ರ) ಅವರನ್ನು ಸನ್ಮಾನಿಸಿ ಮಾತನಾಡಿದರು.
ಕೃಷ್ಣರಾಜ ಒಡೆಯರ್ ಅವರು ಮಹಾರಾಜರಾಗಿದ್ದರೂ ಸಹ ಅಧಿಕಾರದ ವ್ಯಾಪ್ತಿಯನ್ನು ವಿಕೇಂದ್ರೀಕರಿಸಿ, ಪ್ರಜೆಗಳು ಸಹ ಅಧಿಕಾರದಲ್ಲಿ ಒಳಗೊಳ್ಳುವಂತೆ ಮಾಡಿದರು. ನಾಡಿಗೆ ಸಾಹಿತ್ಯ ಪರಿಷತ್ತಿನ ಕೊಡುಗೆ ನೀಡಿದರು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜಪ್ರಭುತ್ವದ ಪ್ರತಿನಿಧಿಯಾಗಿದ್ದರೂ ಪ್ರಜಾಪ್ರಭುತ್ವದ ಹಿತಾಸಕ್ತಿಗೆ ಮಿಗಿಲಾಗಿ ರಾಜ್ಯಭಾರ ಮಾಡಿದ ಮಹಾನ್ ವ್ಯಕ್ತಿ. ಅವರು ನಿರ್ಮಿಸಿದ ಶಾಲೆ, ಕಾಲೇಜು, ಆಸ್ಪತ್ರೆ, ಅಣೆಕಟ್ಟು, ಹಾಗೂ ನಾಲ್ವಡಿ ಕೊಡುಗೆಗಳನ್ನು ಸ್ಮರಿಸಿದರು
ನಂತರ ಮಾತನಾಡಿದ ಆರ್‍ಎಸ್‍ಎಸ್ ಮಾ ವೆಂಕಟರಾಮ್, ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆಗಳನ್ನು ಸ್ಮರಿಸಿದರು
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಪಾತಿ ಫೌಂಡೇಶನ್ ಅಧ್ಯಕ್ಷ ಎಂ.ಡಿ ಪಾರ್ಥಸಾರಥಿ, ಉದ್ಯಮಿ ಕುಮಾರ್ ಆರಾಧ್ಯ, ಸಿ.ವಿ.ಪಾರ್ಥಸಾರಥಿ, ಸುರೇಶ್ ಗೋಲ್ಡ್, ಟಿಎಸ್ ಅರುಣ್, ಗಾಯಕ ಕೃಷ್ಣಮೂರ್ತಿ, ಚಂದನ ಶ್ರೀನಿವಾಸ್, ಬಸವರಾಜ್, ಮಹದೇವ ಹಾಗೂ ಇನ್ನಿತರರು ಹಾಜರಿದ್ದರು
ಬಳಿಕ ವಿಷ್ಣು ಗ್ರೂಪ್ಸ್ ಚಂದನ ಶ್ರೀನಿವಾಸರವದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.