Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಎಚ್.ವಿ. ರಾಜೀವ್‍ರಿಂದ ವಿದ್ಯಾರ್ಥಿನಿಗೆ ಉಚಿತವಾಗಿ ಸೈಕಲ್ ವಿತರಣೆ


ಮೈಸೂರು;
ಎಚ್.ವಿ. ರಾಜೀವ್ ಸ್ನೇಹ ಬಳಗದ ವತಿಯಿಂದ ಮೈಸೂರಿನ ನಾಚನಹಳ್ಳಿ ಪಾಳ್ಯದ ನಿವಾಸಿಯಾದ ಅಬ್ದುಲ್ ಗಫರ್ ರವರ ಸಾಕು ಮಗಳಾದ ಜೋಹರ್ ಕೌಶರ್‍ರಿಗೆ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅವರು ಸೈಕಲ್‍ನ್ನು ಕೊಡುಗೆಯಾಗಿ ನೀಡಿದರು.
ಜೋಹರ್ ಕೌಶರ್‍ರಿಗೆ ಸೆಂಟ್ ಥಾಮಸ್ ಶಾಲೆಯಲ್ಲಿ 8ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದು, ಅವರ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿಉಚಿತವಾಗಿ ಸೈಕಲ್ ವಿತರಣೆಯನ್ನು ಮಾಡಿದರು.
ಬಳಿಕ ಮಾತನಾಡಿದ ಅವರು,
ಅಬ್ದುಲ್ ಗಫರ್ ಗೆ ಈಗಾಗಲೇ ಇಬ್ಬರು ಮಕ್ಕಳಿದ್ದರೂ ಸಹ, ಈ ಮಗುವನ್ನು ತಮ್ಮ ಮಗುವಿನಂತೆ ಸಾಕಿ-ಬೆಳೆಸುತ್ತಿರುವುದು ಅವರ ಹೃದಯ ಶ್ರೀಮಂತಿಕೆಯನ್ನು ತೋರಿಸುತ್ತದೆ. ಆ ಮಗುವಿನ ಶಿಕ್ಷಣಕ್ಕೆ ಮತ್ತಷ್ಟು ಅನುಕೂಲವಾಗಲಿ ಹಾಗೂ ವಿದ್ಯಾಭ್ಯಾಸದಲ್ಲಿ ಇನ್ನಷ್ಟು ಪೆÇ್ರೀತ್ಸಾಹ ಸಿಗಲಿ ಎಂಬ ಉದ್ದೇಶದಿಂದ ಸೈಕಲ್ ವಿತರಣೆ ಮಾಡಲಾಯಿತು ಎಂದು ಹೇಳಿದರು.