
ಮೈಸೂರು; ಪ್ರತಿಭೆ ಎಂಬುದು ವಿದ್ಯಾರ್ಥಿಯೊಳಗಿನ ಸಾಮಥ್ರ್ಯ, ಪರಿಶ್ರಮ, ಶಿಸ್ತು ಮತ್ತು ಸತತ ಪ್ರಯತ್ನದ ಪ್ರತೀಕ ಎಂದು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯ ಸ್ವಾಮಿ ಯುಕ್ತೇಶಾನಚಿದಜೀ ಹೇಳಿದರು.
ನಗರದ ವಿಜಯ ವಿಠ್ಠಲ ವಿದ್ಯಾಸಂಸ್ಥೆಯಲ್ಲಿ ಮಾರ್ಚ್-ಏಪ್ರಿಲ್ 2026 ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭೆ ಎಂಬುದು ಕೇವಲ ಪರೀಕ್ಷೆಯ ಅಂಕಗಳಿಂದ ಅಳೆಯುವ ವಿಷಯವಲ್ಲ. ಪ್ರತಿಭೆ ಎಂಬುದು ವಿದ್ಯಾರ್ಥಿಯೊಳಗಿನ ಸಾಮಥ್ರ್ಯ, ಪರಿಶ್ರಮ, ಶಿಸ್ತು ಮತ್ತು ಸತತ ಪ್ರಯತ್ನದ ಪ್ರತೀಕ. ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ಶಿಕ್ಷಕರ ಮಾರ್ಗದರ್ಶನ, ಪೋಷಕರ ತ್ಯಾಗ ಅಡಗಿದೆ ಎಂದು ತಿಳಿಸಿದರು.
ಈ ಪ್ರಶಸ್ತಿ ಪುರಸ್ಕಾರಗಳು ವಿದ್ಯಾರ್ಥಿಯ ಜೀವನದ ಅಂತ್ಯವಲ್ಲ. ಅದು ಹೊಸ ಆರಂಭವಾಗಿದೆ. ಕೇವಲ ಕನಸು ಕಾಣುವುದರಿಂದ ಯಶಸ್ಸು ಸಿಗುವುದಿಲ್ಲ. ಬದಲಾಗಿ ನಿರಂತರ ಪರಿಶ್ರಮದಿಂದ ಅದು ಸಿದ್ಧಿಸುತ್ತದೆ. ಪ್ರತಿಭೆಯ ಜೊತೆಗೆ ಉತ್ತಮ ಸಂಸ್ಕಾರವೂ ಅತ್ಯಗತ್ಯ. ಉತ್ತಮ ವ್ಯಕ್ತಿತ್ವವಿಲ್ಲದ ಪ್ರತಿಭೆ ಸಮಾಜಕ್ಕೆ ಉಪಯೋಗವಾಗುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಸದಾ ಸತ್ಯ, ಶಿಸ್ತು, ಪ್ರ್ರಾಮಾಣಿಕತೆ ಮತ್ತು ಸೇವಾಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಜ್ಞಾನಾಸಕ್ತರಾಗಿ ತಮ್ಮ ಗುರಿಯನ್ನು ಸಾಧಿಸುವುದರೊಂದಿಗೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ಹೇಳಿದರು. ಆಲೋಚಿಸುವ ಕ್ರಮ, ವಿನಯಶೀಲತೆ, ನಾಯಕತ್ವ ಗುಣ ವಿದ್ಯಾರ್ಥಿಗಳಲ್ಲಿ ಅತ್ಯಾವಶ್ಯಕ. ವಿದ್ಯಾರ್ಥಿಗಳು ಸೋಲು ಬಂದಾಗ ನಿರಾಶರಾಗದೇ ಅದನ್ನೇ ಯಶಸ್ಸಿನ ಮೆಟ್ಟಿಲೆಂದು ಭಾವಿಸಿ ಸತತ ಪ್ರಯತ್ನದಿಂದ ಗುರಿ ಸಾಧಿಸಬೇಕು. ಪ್ರತಿಯೊಬ್ಬರಲ್ಲೂ ವಿಶಿಷ್ಠ ಪ್ರತಿಭೆ ಇದ್ದು, ಅದನ್ನು ಗುರುತಿಸಿ ಬೆಳೆಸಿಕೊಳ್ಳಬೇಕು. ಎಲ್ಲಾ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ, ಉನ್ನತ ಸ್ಥಾನಗಳನ್ನು ಅಲಂಕರಿಸಿ ದೇಶ ಮತ್ತು ಸಮಾಜಕ್ಕೆ ಕೀರ್ತಿ ತರಬೇಕೆಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಆರ್. ವಾಸುದೇವ ಭಟ್ ಮಾತನಾಡಿ, ಮಾನವ ಪ್ರಯತ್ನ ಮತ್ತು ದೈವ ಸಹಾಯದಿಂದ ಯಾವುದೇ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಧರ್ಮಮಾರ್ಗದಲ್ಲಿ ನಡೆದು ಮಾನವೀಯ ಮೌಲ್ಯಗಳನ್ನು ಆದರ್ಶವಾಗಿರಿಸಿಕೊಂಡು ಮುನ್ನೆಡೆಯಬೇಕು ಎಂದರು. ಪೋಷಕರು ವಿದ್ಯಾರ್ಥಿಗಳ ಅಭಿರುಚಿಯನ್ನು ಗಮನಿಸಿ ಅವರನ್ನು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಹೆಚ್. ಸತ್ಯಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯ ವಿಠಲ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ಸಿಎ ವಿಶ್ವನಾಥ.ಎ., ವಿಜಯ ವಿಠಲ ವಿದ್ಯಾಶಾಲೆಯ ಪ್ರಾಂಶುಪಾಲರಾz ವೀಣಾ.ಎಸ್.ಎ., ಪೋಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.