
ಮೈಸೂರು: ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿರುವ ಜನರ ಬಡತನ ನಿರ್ಮೂಲನೆ ಮಾಡಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮಂಗಳವಾರ ನಗರದ ಕಾಡಾ ಸಾರ್ವಜನಿಕ ಕಚೇರಿ ಕಟ್ಟಡದ ಹೊರಾಂಗಣದಲ್ಲಿ ಆಯೋಜಿಸಿದ್ದ ಕೇಂದ್ರ ಸರ್ಕಾರದ ವಿವಿಧ ಜನಕಲ್ಯಾಣ ಹಾಗೂ ಪ್ರಗತಿಪರ ಯೋಜನೆಗಳ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಕರು,ಕಾರ್ಮಿಕರು,ರೈತರು,ಜನಸಾಮಾನ್ಯರಿಗೆ ಹಲವಾರು ಯೋಜನೆಗಳು ಅನುಷ್ಠಾನಗೊಂಡಿದ್ದರೂ ಕೇಂದ್ರದ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಸಿಗದೆ ಬಳಸಿಕೊಳ್ಳುವ ಕೆಲಸವಾಗುತ್ತಿಲ್ಲ. ಹಾಗಾಗಿ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದರು. ಫಲಾನುಭವಿಗಳಿಗೆ ಯಾವ ಯೋಜನೆಗಳು ಇದೆ, ಯಾವ ರೀತಿಯಲ್ಲಿ ಅವುಗಳ ಪ್ರಯೋಜನ ಪಡೆಯಬೇಕು, ಹೇಗೆ ಬಳಸಿಕೊಳ್ಳಬಹುದು ಎನ್ನುವ ಕುರಿತು ತಿಳಿಸಲಾಗುತ್ತದೆ ಎಂದರು.
ಪ್ರಧಾನಮAತ್ರಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಹಲವಾರು ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಜತೆಗೆ,ಯಾವ್ಯಾವ ಸೌಲಭ್ಯಗಳನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬುದರ ಕುರಿತು ಮೇಳದಲ್ಲಿ ನೂರಾರು ಜನರು ಪಾಲ್ಗೊಂಡು ಮಾಹಿತಿ ಪಡೆದರು ಮೇಳದಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆ, ಪಿಎಂ ಉದ್ಯೋಗ ಸೃಜನಕಾರ್ಯಕ್ರಮ,ಪಿಎಂ ಬೀದಿಬದಿವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆ, ಸೂರ್ಯ ಘರ್ ಯೋಜನೆ, ಪಿಎಂ ಸೂಕ್ಷತ್ಮ ಆಹಾರ ಸಂಸ್ಕರಣಾ ಉದ್ಯಮಗಳ ಔದಾರೀಕರಣ ಯೋಜನೆ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಪಿಎಂ ಆವಾಸ್ ಯೋಜನೆ, ಪಿಎಂ ಜನ ಆರೋಗ್ಯ ಯೋಜನೆ, ಜೀವನ್ ಜ್ಯೋತಿ ವಿಮಾ ಯೋಜನೆ, ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಕೌಶಲ್ಯ ವಿಕಾಸ್ ಯೋಜನೆ, ಗತಿ ಶಕ್ತಿ ರಾಷ್ಟಿçÃಯ ಮಹಾ ಯೋಜನೆ ಕುರಿತಾದ ಮಾಹಿತಿ ನೀಡುವುದಕ್ಕಾಗಿ ಪ್ರತ್ಯೇಕ ಟೇಬಲ್‌ಗಳನ್ನು ಇಡಲಾಗಿತ್ತು. ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳು,ಬ್ಯಾಂಕ್ ಅಧಿಕಾರಿಗಳು ತಂತಮ್ಮ ಯೋಜನೆಗಳ ಕುರಿತು ಮಾಹಿತಿ ಹಂಚಿಕೊAಡರು. ಮನೆ ಸಾಲಕ್ಕೆ ಸಂಬAಧಿಸಿದAತೆ ಬ್ಯಾಂಕ್ ಅಧಿಕಾರಿಗಳು ವಿವರಣೆ ಕೊಟ್ಟರೆ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಬಗ್ಗೆ ರೈತರಿಗೆ ಅರಿವು ಮೂಡಿಸಲಾಯಿತು.ಇದೇ ಸಂದರ್ಭದಲ್ಲಿ ಜ್ಯೋತಿ, ಬೀನಾ,ಹರ್ಷಿತ್,ಜುಂಲಕ್ಷಿ÷್ಮÃ, ಮೀನಾಕ್ಷಿ, ವಸಂತ,ಲಕ್ಷಿ÷್ಮÃ,ಸೋಮಣ್ಣ, ವಿಜಯಕುಮಾರ್ ಅವರಿಗೆ ವಿಧವಾ,ವೃದ್ಯಾಪ,ವಿಶೇಷಚೇತನರ ಪಿಂಚಣಿಪ್ರಮಾಣಪತ್ರವನ್ನು ಸಂಸದರು ವಿತರಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಕುಂಬ್ರಳ್ಳಿ ಎನ್.ಸುಬ್ಬಣ್ಣ, ನಗರಾಧ್ಯಕ್ಷ ಎಲ್.ನಾಗೇಂದ್ರ, ಪ್ರಕೋಷ್ಠಗಳ ಸಂಚಾಲಕ ಎನ್.ವಿ.ಫಣೀಶ್, ಮಾಜಿ ಮೇಯರ್ ಎಸ್.ಸಂದೇಶ್ ಸ್ವಾಮಿ, ನಗರ ಪ್ರಧಾನ ಕಾರ್ಯದರ್ಶಿಗಳಾದ ವಿ.ಸೋಮಸುಂದರ್,ರುದ್ರಮೂರ್ತಿ, ಬಿ.ಎಂ.ರಘು ಮತ್ತಿತರರು ಹಾಜರಿದ್ದರು.