Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿದ್ಯಾರ್ಥಿಗಳು ದುಷ್ಟ ಚಟದಿಂದ ದೂರ ಇರಿ ಎಸ್ ಪಿ ಮುತ್ತುರಾಜ್


ವರದಿ ಜಿ ಬಂಗಾರು
ಚಾಮರಾಜನಗರ ಜೂನ್ 23;
ವಿದ್ಯಾರ್ಥಿಗಳು ಮಾದಕ ವ್ಯಸನ ಅಭ್ಯಾಸದಿಂದ ದೂರ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಮುತ್ತುರಾಜ್ ಸಲಹೆ ನೀಡಿದರು
ನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್ಎಸ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪೊಲೀಸ್ ವತಿಯಿಂದಮಂಗಳವಾರ ಮಧ್ಯಾನ ಏರ್ಪಡಿಸಿದ ಅಂತರಾಷ್ಟ್ರೀಯ ಮಾದಕ ವ್ಯಸನ ತಡೆ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವಿದ್ಯಾರ್ಥಿಗಳು ಮದ್ಯಪಾನ ಧೂಮಪಾನ ಬಗ್ಗೆ ನಿಮ್ಮ ಪೋಷಕರಿಗೆ ಹಾಗೂ ನಿಮ್ಮ ಸ್ನೇಹಿತರಿಗೆ ಇದರ ಬಗ್ಗೆ ಜಾಗೃತಿ ಮೂಡಿಸುವ ಕರ್ತವ್ಯ ನಿಮ್ಮದು ಎಂದು ತಿಳಿಸಿದವರು
ಭವ್ಯ ಭಾರತ ನಿರ್ಮಾಣ ಆಗಲು ಪ್ರಜ್ಞಾವಂತ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಆದ್ದರಿಂದ ದೂರ ಇದ್ದು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸ, ಐಎಎಸ್, ಐಪಿಎಸ್. ಉನ್ನತ ಮಟ್ಟದ ಅಧಿಕಾರಿಗಳಾಗಿ. ಕಾಲೇಜಿಗೆ ಹಾಗೂ ಶಾಲೆಗೆ ಕೀರ್ತಿ ತನ್ನಿ ಎಂದು ತಿಳಿಸಿದರು
ಚಾಮರಾಜನಗರ ಡಿವೈಎಸ್ಪಿ ಎಸ್ ಪಿ ಸ್ನೇಹ ರಾಜ್ ಮಾತನಾಡಿ. ಹೆಣ್ಣು ಮಕ್ಕಳು ಏನೇ ಸಮಸ್ಯೆ ಬಂದರೂ ಮುಕ್ತವಾಗಿ ಪೋಲಿಸ್ ಸಹಾಯವಾಣಿ ಮಾಹಿತಿ ನೀಡಿ. ಹಾಗೂ ನಿಮ್ಮ ಪೋಷಕರ ಮೂಲಕ ಮಾಹಿತಿ ನೀಡಬಹುದು. ಜಿಲ್ಲೆಯಲ್ಲಿ ಮಹಿಳಾ ಸುರಕ್ಷತೆಗಾಗಿ ಅಕ್ಕಪಡೆ ರಚನೆ ಮಾಡಲಾಗಿದೆ ದಿನದ 24 ಗಂಟೆಗಳು ಸಹ ನಿಮ್ಮ ಸೇವೆ ಮಾಡಲು ನಿರಂತರವಾಗಿ ಇರುತ್ತಾರೆ. ಕಾಲೇಜು ಹೋಗೋ ಮಾರ್ಗದಲ್ಲಿ ಅಥವಾ ಕಾಲೇಜಿನ ಆವರಣದಲ್ಲಿ ಅಪರಿಚಿತರು ಯಾವುದೇ ಸಿಹಿ ತಿಂಡಿ ತಿನ್ನಬಾರದು ಎಂದು ತಿಳಿಸಿದರು
ಜಿಲ್ಲಾ ಪೊಲೀಸ್.ಹೆಚ್ಚುವರಿ ಎಸ್ಪಿ ,ಎಂ ಏನ್ ಶಶಿಧ‌ರ್, ಡಿವೈಎಸ್ಪಿ ಸ್ನೇಹ ರಾಜ್, ಟೌನ್ ಸರ್ಕಲ್ ಇನ್ಸೆಕ್ಟರ್ ಜಗದೀಶ್‌. ಟ್ರಾಫಿಕ್‌ ಇನ್ಸೆಕ್ಟ‌ರ್ ಹನುಮಂತ ಉಪ್ಪಾ‌ರ್. ಕಾಲೇಜಿನ ಪ್ರಾಂಶುಪಾಲ ಪ್ರೊ ದೇವರಾಜ್ ಮೂರ್ತಿ. ಉಪನ್ಯಾಸಕ ಗಿರೀಶ್. ಅನುರಾಧ, ಕೃತಿ, ವತ್ಸಲಾ, ರಮ್ಯಾ ವಿದ್ಯಾರ್ಥಿಗಳು ಹಾಜರಿದ್ದರು