Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಟಾಟಾ ಎಲೆಕ್ಟ್ರಿಕ್ ಸಫ್ಟ್ ಕಂಪೆನಿಗೆ ವಿತರಣಾ ಪರವಾನಗಿ ನೀಡಿಕೆಗೆ ಆಕ್ಷೇಪಣೆ, ಸಲಹೆಗಳ ನೀಡಿಕೆ:ಲಿಂಗರಾಜು


ಮೈಸೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧಿಸೂಚನೆಗೆ ಸಂಬಂಧಿಸಿದಂತೆ ವಿದ್ಯುತ್ ವಿತರಣಾ ಸಂಸ್ಥೆಗಳ ಕಾರ್ಯವ್ಯಾಪ್ತಿಯ ಪ್ರದೇಶಗಳಲ್ಲಿ ಟಾಟಾ ಎಲೆಕ್ಟ್ರಿಕ್ ಸಫ್ಟ್ ಕಂಪೆನಿಗೆ ವಿತರಣಾ ಪರವಾನಗಿ ನೀಡುವ ಕುರಿತು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ನೀಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,
ವಿದ್ಯುತ್ ಹೆಚ್ಚುವರಿ ವಿತರಣಾ ಪರವಾನಗಿದಾರರ ಪ್ರವೇಶದಿಂದ ಸ್ಪರ್ಧಾತ್ಮಕ ವಾತಾವರಣ ನಿರ್ಮಾಣವಾಗಿ ಕಾರ್ಯಕ್ಷಮತೆ, ಸೇವಾ ಗುಣಮಟ್ಟ ಹಾಗೂ ಗ್ರಾಹಕ ಸ್ನೇಹಿ ಆಡಳಿತದಲ್ಲಿ ಸುಧಾರಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ತಾವು ಹೆಚ್ಚುವರಿ ವಿತರಣಾ ಪರವಾನಗಿದಾರರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ವಿವಿಧ ಪರವಾನಗಿದಾರರ ಕಾರ್ಯಕ್ಷಮತೆಯ ಹೋಲಿಕೆ ಹಾಗೂ ಮೌಲ್ಯಮಾಪನ ಸಾಧ್ಯವಾಗುವುದರಿಂದ ಸೇವಾ ಗುಣಮಟ್ಟದ ಮೇಲ್ವಿಚಾರಣೆ ಸುಲಭವಾಗುತ್ತದೆ. ವೈಜ್ಞಾನಿಕ ಮತ್ತು ವ್ಯವಸ್ಥಿತ ಇಂಧನ ಲೆಕ್ಕಪತ್ರ ಹಾಗೂ ಇಂಧನ ಲೆಕ್ಕ ಪರಿಶೋಧನೆ ಮೂಲಕ ತಾಂತ್ರಿಕ ಮತ್ತು ವಾಣಿಜ್ಯ ನಷ್ಟಗಳನ್ನು ನಿಯಂತ್ರಿಸಬಹುದು. ಗ್ರಾಹಕರ ದೂರುಗಳು ಹಾಗೂ ಹಿತಾಸಕ್ತಿದಾರರ ಪ್ರಶ್ನೆಗಳಿಗೆ ಸಮಯಬದ್ಧ ಮತ್ತು ಎಂದು ಅವರು ಪಾರದರ್ಶಕ ರೀತಿಯಲ್ಲಿ ಸ್ಪಂದಿಸುವ ವ್ಯವಸ್ಥೆ ರೂಪುಗೊಳ್ಳುತ್ತದೆ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಹಕರ/ಹಿತಾಸಕ್ತಿದಾರರ ಪ್ರತಿನಿಧಿಗಳಾಗಿ ಕನಿಷ್ಠ ಇಬ್ಬರು ನಿರ್ದೇಶಕರನ್ನು ಪಾರದರ್ಶಕ ವಿಧಾನದಲ್ಲಿ ಮಂಡಳಿಗೆ ನೇಮಿಸಬೇಕು. ನಿಯಮಿತ ಅವಧಿಯಲ್ಲಿ ಎನರ್ಜಿ ಆಡಿಟ್ ಮತ್ತು ಸೇಫ್ಟಿ ಆಡಿಟ್ ನಡೆಸುವುದನ್ನು ಕಡ್ಡಾಯಗೊಳಿಸಿ, ಅದರ ವರದಿಗಳನ್ನು ಆಯೋಗಕ್ಕೆ ಸಲ್ಲಿಸಬೇಕು. ಮಹಿಳಾ ಸುರಕ್ಷತೆ, ಲೈಂಗಿಕ ಕಿರುಕುಳ ತಡೆ ಹಾಗೂ ಉದ್ಯೋಗಿಗಳ ಕಲ್ಯಾಣಕ್ಕೆ ಸಂಬಂಧಿಸಿದ ಕಾನೂನುಬದ್ದ ಸಮಿತಿಗಳು ಮತ್ತು ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಗ್ರಾಹಕರ ದೂರುಗಳನ್ನು ಪರಿಣಾಮಕಾರಿ ಯಾಗಿ ಪರಿಹರಿಸಲು ವಿಶೇಷ ಕಸ್ಟಮರ್ ಕೇರ್ ಇಂಜಿನಿಯರ್, ಮ್ಯಾನೇಜರ್ ಅನ್ನು ನೇಮಿಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ಈ ಷರತ್ತುಗಳು ಮತ್ತು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುವುದಾದರೆ, ಟಾಟಾ ಎಲೆಕ್ನಿಕ್ ಸಮ್ಮ ಕಂಪೆನಿಗೆ ವಿತರಣಾ ಪರವಾನಗಿ ನೀಡುವುದಕ್ಕೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಯಾವುದೇ ಆಕ್ಷೇಪಣೆ ಇಲ್ಲ ಎಂದು ತಿಳಿಸಿದ್ದಾರೆ