Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮಹಿಳೆಯನ್ನು ಕಿಡ್ನಾಪ್ ಮಾಡಿ, ಮನೆಯೊಂದರಲ್ಲಿ ಕೂಡಿ ಹಾಕಿದ್ದ ಮೂವರು ಆರೋಪಿಗಳ ಬಂಧನ


ಮೈಸೂರು; ಪ್ರೀತಿಸಿ ಮದುವೆಯಾದ ವಿವಾಹಿತೆಯನ್ನ ಮೂವರು ವ್ಯಕ್ತಿಗಳು ಕಿಡ್ನಾಪ್ ಮಾಡಿ ರಾಮನಗರದ ಮನೆಯೊಂದರಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟ ಘಟನೆ ನಡೆದಿದ್ದು, ವಿವಾಹಿತೆ ನೀಡಿದ ಮಾಹಿತಿ ಆಧಾರದ ಮೇಲೆ ರಾಮನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಸಂತ್ರಸ್ಥೆಯನ್ನ ರಕ್ಷಣೆ ಮಾಡಿದ್ದಾರೆ.ಪ್ರಕರಣಕ್ಕೆ ಸಂಬAಧಿಸಿದAತೆ ಮೈಸೂರಿನ ಆಲನಹಳ್ಳಿ ಠಾಣೆ ಪೊಲೀಸರು ಮೂವರನ್ನ ಬಂಧಿಸಿದ್ದಾರೆ.
ಮೈಸೂರಿನ ಆಲನಹಳ್ಳಿಯ ಶಿವಕುಮಾರ್ ಎಂಬುವರ ಪತ್ನಿ ಭವ್ಯ (19) ಎಂಬುವರೇ ಅಪಹರಣಕ್ಕೆ ಒಳಗಾದವರು.ರಾಮನಗರದ ಸುಮ,ಕಿರಣ್ ಹಾಗೂ ಮತ್ತೊಬ್ಬ ಮಹಿಳೆ ಬಂಧಿತ ಆರೋಪಿಗಳು.
ಎಲೆಕ್ಟಿçಷಿಯನ್ ಕೆಲಸ ಮಾಡುವ ಶಿವಕುಮಾರ್ ಒಂದು ವರ್ಷದ ಹಿಂದೆ ಹಾಸನ ಜಿಲ್ಲೆ ಸಕಲೇಶಪುರದ ಭವ್ಯ ರನ್ನ ಪ್ರೀತಿಸಿ ಮದುವೆ ಆಗಿದ್ದು ಆಲನಹಳ್ಳಿಯಲ್ಲಿ ವಾಸವಿದ್ದು, .ಜೂನ್ 25 ರಂದು ಶಿವಕುಮಾರ್ ರವರು ಕೆಲಸದ ನಿಮಿತ್ತ ಬೋಗಾದಿಗೆ ತೆರಳಿದ್ದರು.ಪತ್ನಿಯನ್ನ ಮಾತನಾಡಿಸಲು ಫೋನ್ ಮಾಡಿದಾಗ ಸ್ವಿಚ್ ಆಫ್ ಬಂದಿದೆ.ದೇವಸ್ಥಾನಕ್ಕೆ ಹೋಗಿರಬಹುದೆಂದು ಸುಮ್ಮನಾಗಿದ್ದಾರೆ.ರಾತ್ರಿಯಾದರೂ ಪತ್ನಿ ಮನೆಗೆ ಹಿಂದಿರುಗದ ಹಿನ್ನಲೆ ಆತಂಕದಲ್ಲಿದ್ದ ಅವರಿಗೆ ಮರುದಿನ ಕರೆ ಬಂದಿದೆ.ಪತ್ನಿಯೇ ಮಾತನಾಡಿ ನನ್ನನ್ನ ಮೂವರು ವ್ಯಕ್ತಿಗಳು ರಾಮನಗರಕ್ಕೆ ಕರೆತಂದು ಮನೆಯೊಂದರಲ್ಲಿ ಬಂಧಿಸಿದ್ದಾರೆ, ರಕ್ಷಣೆ ಮಾಡಿ ಎಂದು ಮಾಹಿತಿ ನೀಡಿ ಲೊಕೇಶನ್ ಕಳಿಸಿದ್ದಾರೆ.ಕೂಡಲೇ ಶಿವಕುಮಾರ್ 112 ಗೆ ಸಂಪರ್ಕಿಸಿ ಸಂಪೂರ್ಣ ಮಾಹಿತಿ ನೀಡಿ, ಪತ್ನಿ ಕಳಿಸಿದ ಲೊಕೇಶನ್ ಕೊಟ್ಟಿದ್ದಾರೆ.ರಾಮನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಭವ್ಯರನ್ನ ರಕ್ಷಿಸಿದ್ದಾರೆ.ರಾಮನಗರಕ್ಕೆ ತೆರಳಿದ ಶಿವಕುಮಾರ್ ಪತ್ನಿಯನ್ನ ಸುರಕ್ಷಿತವಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ.ಭವ್ಯರನ್ನ ಮನೆಯಿಂದ ಕರೆದೊಯ್ದ ಹಿನ್ನಲೆಯಲ್ಲಿ ಶಿವಕುಮಾರ್ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಸುಮ,ಕಿರಣ್ ಹಾಗೂ ಮತ್ತೊಬ್ಬ ಮಹಿಳೆಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.