
ಮೈಸೂರು; ನೈಜ ನಾಯಕತ್ವವು ಶಿಸ್ತು, ಸಮಯಪಾಲನೆ, ಸತ್ಯಸಂಧತೆ, ತಂಡದ ಕೆಲಸ, ದೇಶ ಪ್ರೇಮ ಮತ್ತು ನಿರಂತರ ಆತ್ಮ ಸುಧಾರಣೆಯ ಅಡಿಪಾಯದ ಮೇಲೆ ನಿರ್ಮಾಣವಾಗುತ್ತದೆ ಎಂದು ಲೆಫ್ಟಿನೆಂಟ್ ಕರ್ನಲ್ ಕೆ. ಎ. ಗೀತಾ ಹೇಳಿದರು.
ನಗರದ ವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ ನಡೆದ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿ ನಾಯಕರು ಧೈರ್ಯ, ಜವಾಬ್ದಾರಿ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುವಂತೆ ಪ್ರೇರೇಪಿಸಿದರು. “ನಿಮ್ಮ ಕೆಲಸವನ್ನು ಮೌನವಾಗಿ ಮಾಡಿ, ನಿಮ್ಮ ಯಶಸ್ಸು ಸದ್ದನ್ನು ಮಾಡಲಿ” ಎಂದು ಹೇಳಿದರು.
ವಿಜಯ ವಿಠ್ಠಲ ಸಂಸ್ಥೆಯ ಅಧ್ಯಕ್ಷ ವಾಸುದೇವ ಭಟ್ ಮಾತನಾಡಿ, ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನವನ್ನು ಶ್ಲಾಘಿಸಿದರು. ಶೈಕ್ಷಣಿಕ ಪ್ರಗತಿಯೊಂದಿಗೆ ಸರ್ವಾಂಗೀಣ ವಿಕಸನದ ಮಹತ್ವವನ್ನು ಒತ್ತಿಹೇಳಿದರು. ಪ್ರಜಾಪ್ರಭುತ್ವದ ರೀತಿಯಲ್ಲಿ ನಡೆದ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿನ ಸದನ ಪದ್ಧತಿಯ ಪಾತ್ರವನ್ನು ಪ್ರಶಂಸಿಸಿದರು. ಇದೇ ವೇಳೆ, ಎನ್.ಸಿ.ಸಿ ಕೆಡೆಟ್‌ಗಳನ್ನು ಅಭಿನಂದಿಸಿದ ಅವರು, ಶೈಕ್ಷಣಿಕ ವರ್ಷದಲ್ಲಿ ಶೇ. 100ರಷ್ಟು ಹಾಜರಾತಿಯನ್ನು ಕಾಯ್ದುಕೊಂಡಿದ್ದಕ್ಕಾಗಿ ಸರಳಾ ದೇವಿ ಅವರನ್ನು ವಿಶೇಷವಾಗಿ ಅಭಿನಂದಿಸಿದರು
ಸಮಾರAಭದಲ್ಲಿ ವಿಜಯ ವಿಠ್ಠಲ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾ ಹೆಚ್. ಸತ್ಯಪ್ರಸಾದ್ , ಶಾಲೆಯ ಪ್ರಾಂಶುಪಾಲರಾದ ವೀಣಾ ಎಸ್. ಎ, ಪೋಷಕರು, ಶಿಕ್ಷPರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ವೇಳೆ ನೂತನವಾಗಿ ಆಯ್ಕೆಯಾದ ನಾಯಕರು ಶಾಲೆಯ ಸೇವೆಗೆ ಬದ್ಧರಾಗಿ, ಪ್ರಾಮಾಣಿಕತೆ, ನಿಷ್ಠೆ ಮತ್ತು ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುವ ಪ್ರತಿಜ್ಞೆಯನ್ನು ಕೈಗೊಂಡರು. ನೂತನ ಪದಾಧಿಕಾರಿಗಳಿಗೆ ಬ್ಯಾಡ್ಜ್ಗಳನ್ನು ಪ್ರದಾನ ಮಾಡಲಾಯಿತು.