Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪೊಲೀಸರಿಗೆ ತನಿಖಾ ಕೌಶಲ್ಯವನ್ನು ಸುಧಾರಿಸಲು ಕಾರ್ಯಗಾರ


ಮೈಸೂರು; ತನಿಖಾಧಿಕಾರಿಗಳ ತನಿಖಾ ಲೋಪಗಳನ್ನು ಸರಿಪಡಿಸಿ, ತನಿಖಾ ಕೌಶಲ್ಯವನ್ನು ಸುಧಾರಿಸಲು ಈiಟಿಜiಟಿg oಜಿ ಐಚಿಠಿses, ಜಿiಟಟiಟಿg ಣhe gಚಿಠಿs & ಅoಡಿಡಿeಛಿಣioಟಿಚಿಟ meಚಿsuಡಿes ಎಂಬ ವಿಷಯದ ಬಗ್ಗೆ ಕಾರ್ಯಾಗಾರವನ್ನು ನಗರದ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರವನ್ನು ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ. ಎಂ.ಬಿ ಬೋರಲಿಂಗಯ್ಯ, ಐ.ಪಿ.ಎಸ್‌ರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ತನಿಖಾಧಿಕಾರಿಗಳಿಗೆ ಉತ್ತಮ ತನಿಖೆ ಕೈಗೊಳ್ಳುವ ಹಲವು ಮಾರ್ಗೋಪಾಯಗಳನ್ನು ತಿಳಿಸಿಕೊಟ್ಟರು.
ಕಾರ್ಯಾಗಾರದ ವಲಯ ಉದ್ದೇಶದ ಬಗ್ಗೆ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕ ವಿಷ್ಣುವರ್ಧನಎನ್ ತಿಳಿಸಿದರು. ಕಾರ್ಯಾಗಾರದಲ್ಲಿ ವಿಶ್ರಾಂತ ನ್ಯಾಯಾಧೀಶರಾದ ಸತೀಶ್ ಸಿಂಗ್, ನಿವೃತ್ತ ಅಭಿಯೋಜನ ಉಪನಿರ್ದೇಶಕ ರುದ್ರಯ್ಯಗಂಜಿಗಟ್ಟಿ, ನಿವೃತ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಚಿನ್ನಪ್ಪ, ಮಂಗಳೂರು ವಿಭಾಗದ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ, ವಿಧಿ ವಿಜ್ಞಾನ ಪ್ರಯೋಗಾಲಯದ ಉಪ ನಿರ್ದೇಶಕ ಡಾ.ಚಂದ್ರಶೇಖರ್, ಜೆ.ಎಸ್.ಎಸ್ ಕಾನೂನು ವಿದ್ಯಾಲಯದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರೊ.ಸುರೇಶ್, ನಿವೃತ್ತ ಡಿ.ವೈ.ಎಸ್.ಪಿ ಅಶೋಕನ್, ನಿವೃತ್ತ ವಿಧಿ ವಿಜ್ಞಾನಅಧಿಕಾರಿ ಶಿ ರವೀಂದ್ರ ಮುಂತಾದವರು ಭಾಗವಹಿಸಿ ಉಪನ್ಯಾಸ ನೀಡಿ, ಪರಸ್ಪರ ಗುಂಪು ಚರ್ಚೆ, ವಿಚಾರ ವಿನಿಮಯ, ಪ್ರಾತ್ಯಕ್ಷಿಕೆ ಪಾತ್ರ ನಿರ್ವಹಣೆ ನೀಡಿ,ಕಾರ್ಯಾಗಾರವನ್ನು ಹೆಚ್ಚು ಶೌಚಿತ್ಯ ಹಾಗೂ ಅರ್ಥಪೂರ್ಣವಾಗಿಸಿದರು. ಈ ಸಂದರ್ಭದಲ್ಲಿ ತನಿಖೆಯಲ್ಲಿನ ಲೋಪದೋಷಗಳನ್ನು ಹೋಗಲಾಡಿಸಿ, ತನಿಖಾ ಕೌಶಲ್ಯವನ್ನು ಹೆಚ್ಚಿಸಿಕೊಂಡು ಗುಣಮಟ್ಟವನ್ನು ಸುಧಾರಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ನಿರ್ಣಯ ಮಾಡಲಾಯಿತು.ಈ ಕಾರ್ಯಾಗಾರದಲ್ಲಿ ತರಬೇತಿ ಹೊಂದಿದ ಅಧಿಕಾರಿಗಳು ತಮ್ಮ ಘಟಕದಲ್ಲಿ ಈ ಬಗ್ಗೆ ಚರ್ಚಿಸಿ ಸ್ಮಧಾರಣಾ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಯಿತು
ಈ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 57 ಅಧಿಕಾರಿಗಳು ಹಾಗೂ ಅಕಾಡೆಮಿಯಲ್ಲಿ ಬುನಾದಿ ತರಬೇತಿ ಪಡೆಯುತ್ತಿರುವ 150 ಪಿ.ಎಸ್.ಐ (ಸಿವಿಲ್) ಪ್ರಶಿಕ್ಷಣಾರ್ಥಿಗಳು ಒಟ್ಟು 207 ಜನ ಭಾಗವಹಿಸಿ ತರಬೇತಿಯ ಉಪಯೋಗವನ್ನು ಪಡೆದಿರುತ್ತಾರೆ. ಅಕಾಡೆಮಿಯ ಉಪನಿರ್ದೇಶಕ ಚೆನ್ನಬಸವಣ್ಣ ಎಸ್.ಎಲ್, ಸರ್ವರನ್ನು ಸ್ವಾಗತಿಸಿದರು.ಸಹಾಯಕ ನಿರ್ದೇಶಕ ಎಸ್.ಎನ್ ಸಂದೇಶಕುಮಾರ್‌ರವರುಕಾರ್ಯಾಗಾರವನ್ನು ಸಂಯೋಜಿಸಿದರು.