
ಮೈಸೂರು: ವಚನ ಸಾಹಿತ್ಯ ಸಂರಕ್ಷಿಸಿದ ಡಾ. ಫ.ಗು. ಹಳಕಟ್ಟಿ ಕನ್ನಡದ ಮಹಾನ್ ಸಾಂಸ್ಕöÈತಿಕ ಸೇತುವೆ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ ಹೇಳಿದರು.
ಗುರುವಾರ ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಡಾ.ಫ.ಗು.ಹಳಕಟ್ಟಿ ಅವರ ಜಯಂತೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,
”ವಿದ್ಯಾಧನಂ ಸರ್ವಧನ ಪ್ರಧಾನಂ” ಎಂಬ ಸುಭಾಷಿತವು ಜ್ಞಾನದ ಮಹತ್ವವನ್ನು ಸಾರಿದರೆ, “ಕಾಯಕವೇ ಕೈಲಾಸ” ಎಂಬ ಬಸವಾದಿ ಶರಣರ ಸಂದೇಶವು ಬದುಕಿನ ದಾರಿಯನ್ನು ತೋರಿಸುತ್ತದೆ. ಈ ಎರಡೂ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಕನ್ನಡದ ಜ್ಞಾನಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಿಕೊಟ್ಟ ಮಹನೀಯರು ಡಾ. ಫ.ಗು. ಹಳಕಟ್ಟಿ. ಇಂದು ನಾವು ಅವರ ಜನ್ಮದಿನವನ್ನು ಆಚರಿಸುತ್ತಿರುವುದು ಕೇವಲ ಒಬ್ಬ ವ್ಯಕ್ತಿಯನ್ನು ಸ್ಮರಿಸುವುದಕ್ಕಾಗಿ ಅಲ್ಲ ಒಂದು ಚಳವಳಿಯನ್ನು, ಒಂದು ಸಂಸ್ಕöÈತಿಯನ್ನು, ಒಂದು ಜ್ಞಾನ ಯಜ್ಞವನ್ನು ಗೌರವಿಸುವುದಕ್ಕಾಗಿ ಎಂದು ಹೇಳಿದರು.
ಸಾವಿರಾರು ವಚನಗಳನ್ನು ಗ್ರಾಮದಿಂದ ಗ್ರಾಮಕ್ಕೆ ಸಂಚರಿಸಿ ಸಂಗ್ರಹಿಸಿ, ಅವುಗಳನ್ನು ಕನ್ನಡದ ಅಮೂಲ್ಯ ಪರಂಪರೆಯಾಗಿ ಉಳಿಸಿದ ಡಾ. ಫ. ಗು. ಹಳಕಟ್ಟಿಯವರ ಸಾಧನೆ ಕನ್ನಡ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ಅವರು ಕೇವಲ ಸಂಶೋಧಕರಾಗಿರಲಿಲ್ಲ ಕನ್ನಡದ ಆತ್ಮವನ್ನು ಮುಂದಿನ ತಲೆಮಾರಿಗೆ ತಲುಪಿಸಿದ ಮಹಾನ್ ಸಾಂಸ್ಕöÈತಿಕ ಸೇತುವೆಯಾಗಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಗಾವಡಗೆರೆ ಶ್ರೀ ಗುರುಲಿಂಗಜAಗಮ ದೇವರ ಮಠದ ಶ್ರೀ ನಟರಾಜಸ್ವಾಮಿ ಮಾತನಾಡಿ, ಹರಿದ ಬಟ್ಟೆಯಲ್ಲೇ ತಮ್ಮ ಬಡತನವನ್ನು ಮುಚ್ಚಿಕೊಳ್ಳುತ್ತಿದ್ದ ಹಳಕಟ್ಟಿಯವರು, ಇಂದು ಹರಿದು ಹಂಚಿಹೋಗಿರುವ ಮನಸ್ಸುಗಳನ್ನು ಒಂದುಗೂಡಿಸುವ ಶ್ರೇಷ್ಠ ಸಿದ್ಧಾಂತವನ್ನು ನಮಗೆ ಕೊಟ್ಟು ಹೋಗಿದ್ದಾರೆ. ಅವರ ಬದುಕು ಮತ್ತು ಬರಹ ಎರಡೂ ಅವರ ದಿವ್ಯ ಜೀವನದ ಉದಾತ್ತತೆಗೆ ಸಾಕ್ಷಿಯಾಗಿವೆ ಎಂದು ಹೇಳಿದರು.
ಇಂತಹ ಮಹಾತ್ಮರು ಅಂದು ಶ್ರಮಿಸದೇ ಇದ್ದರೆ, ಶರಣರ ಅಮೂಲ್ಯ ವಚನ ಸಾಹಿತ್ಯವು ಕಾಲಗರ್ಭದಲ್ಲಿ ನಶಿಸಿ ಹೋಗುತ್ತಿತ್ತು. ವಚನಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ, ಅವು ಇಡೀ ಮಾನವಕುಲವನ್ನು ಒಂದುಗೂಡಿಸುವ ಶಕ್ತಿ ಹೊಂದಿವೆ ಎಂಬುದನ್ನು ಜಗತ್ತಿಗೆ ಸಾರಿದವರು ಹಳಕಟ್ಟಿಯವರು. ನೀವು ಹೇಳಿದ ಹರಿದ ಮನಸ್ಸುಗಳನ್ನು ಕೂಡಿಸುವ ಸಿದ್ಧಾಂತ ಇದಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.
ಕವಿಗಳಾದ ಕೆ.ಸಿ ಶಿವಪ್ಪನವರು ಡಾ. ಮಹೇಂದ್ರ ಮೂರ್ತಿ ದೇವನೂರು ರಚಿಸಿರುವ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಪುಸ್ತಕವನ್ನು ಬಿಡುಗಡೆ ಮಾಡಿದರು.
ಶರಣ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನ ಸಲ್ಲಿಸಿದ ಮ.ಗು.ಸದಾನಂದಯ್ಯ, ಡಾ.ಹೆಳವರಹುಂಡಿ ಸಿದ್ದಪ್ಪ, ಪ್ರೊ.ಚಂದ್ರಶೇಖರಯ್ಯ, ಡಾ.ಲತಾ ರಾಜಶೇಖರ್, ಪ್ರೊ.ಎಸ್.ಶಿವರಾಜಪ್ಪ, ಶಕುಂತಲ ಜಯದೇವು, ಎಲ್.ಶಿವಲಿಂಗಪ್ಪ,
ಶಾರದಾ ಶಿವಲಿಂಗಸ್ವಾಮಿ, ಶರಣೆ ಎಂ.ಎ.ನೀಲಾAಬಿಕೆ, ಡಿ.ಎನ್.ಲೋಕಪ್ಪ, ವಚನ ಕುಮಾರಸ್ವಾಮಿ,ಚೌಹಳ್ಳಿ ಅಂಗರಾಜಪ್ಪ ಕಲ್ಮಳ್ಳಿ ನಟರಾಜು ಹಾಗೂ ಕುಮಾರಿ ವಚನ ಚೂಡಾಮಣಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಕಚೇರಿಯ ಹೆಚ್ಚುವರಿ ಆಯುಕ್ತ ಡಾ. ಪಿ. ಶಿವರಾಜ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಸ್.ವಿ ಬಸವರಾಜು, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಜಂಟಿ ನಿರ್ದೇಶಕಿ ನಿರ್ಮಲ ಮಠಪತಿ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ.ಡಿ ಸುದರ್ಶನ್, ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ಡಾ. ಕೆ.ಬಿ ಲಿಂಗರಾಜು, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎ.ಪಿ ವಿರೂಪಾಕ್ಷ, ಕೋಶಾಧ್ಯಕ್ಷ ಭೀಮಾರಹಳ್ಳಿ ಜಯಶಂಕರ್, ಪ್ರಧಾನ ಸಂಚಾಲಕ ದೇವರಾಜು ಪಿ. ಚಿಕ್ಕ ಹಳ್ಳಿ, ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಎಸ್. ಪುಟ್ಟರಾಜಪ್ಪ ಹಾಗೂ ಮೆರವಣಿಗೆ ಸಮಿತಿ ಅಧ್ಯಕ್ಷ ಕೆ.ವಿ ಮಲ್ಲೇಶ್ ಉಪಸ್ಥಿತರಿದ್ದರು.