
ಮೈಸೂರು; ಗುಜರಾತ್ ಸರ್ಕಾರದ ಕೈಗಾರಿಕೆ ಮತ್ತು ಗಣಿ ಇಲಾಖೆಯ ಅಧೀನದಲ್ಲಿರುವ ಕಾಟೇಜ್ ಹಾಗೂ ಗ್ರಾಮೀಣ ಕೈಗಾರಿಕೆಗಳ ಆಯುಕ್ತರ ಕಚೇರಿಯ ಇಂಡಸ್ಟಿçಯಲ್ ಎಕ್ಸೆ÷್ಟನ್ಷನ್ ಕಾಟೇಜ್ ವತಿಯಿಂದ “ಗುಜರಾತ್ ಹ್ಯಾಂಡಿಕ್ರಾಫ್ಟ್÷್ಸ ಉತ್ಸವ-2026” ಅನ್ನು ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ಜುಲೈ 3ರಿಂದ 12ರವರೆಗೆ ಆಯೋಜಿಸಲಾಗಿದೆ ಎಂದು ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಬಿ. ಇಳಂಗೋವನ್ ತಿಳಿಸಿದರು.
ಗುರುವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಈ ಮೇಳದಲ್ಲಿ ಗುಜರಾತ್‌ನ ವಿವಿಧ ಭಾಗಗಳಿಂದ ಆಗಮಿಸಿರುವ 100ಕ್ಕೂ ಹೆಚ್ಚು ನಿಪುಣ ಕರಕುಶಲಗಾರರು ಮತ್ತು ಕೈಮಗ್ಗ ನೇಕಾರರು ಭಾಗವಹಿಸಲಿದ್ದಾರೆ. ಸಂದರ್ಶಕರು ಗುಜರಾತ್‌ನ ವಿಶಿಷ್ಟ ಕೈಮಗ್ಗ ಹಾಗೂ ಕರಕುಶಲ ವಸ್ತುಗಳ ವೈವಿಧ್ಯಮಯ ಸಂಗ್ರಹವನ್ನು ಒಂದೇ ಸೂರಿನಡಿ ವೀಕ್ಷಿಸಿ ಖರೀದಿಸಬಹುದಾಗಿದೆ ಎಂದು ಹೇಳಿದರು.
ಈ ಮೇಳದ ವಿಶೇಷ ಆಕರ್ಷಣೆಯಾಗಿ ರಾಷ್ಟç ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕöÈತ ಕರಕುಶಲಗಾರರು ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕಲೆಗಳ ನೇರ ಪ್ರಾತ್ಯಕ್ಷಿಕೆ ನೀಡಲಿದ್ದು, ಸಂದರ್ಶಕರು ಕರಕುಶಲ ಸೃಜನಶೀಲತೆಯನ್ನು ಕಣ್ತುಂಬಿಕೊಳ್ಳುವ ಅಪೂರ್ವ ಅವಕಾಶ ದೊರೆಯಲಿದೆ.
ಇದಲ್ಲದೆ, ಕಚ್ ಕ್ರಾಫ್ಟ್ ಗ್ಯಾಲರಿಯಲ್ಲಿ ಕಚ್ ಪ್ರದೇಶದ ಪ್ರಸಿದ್ಧ ಕುಚ್ಚಿ ಕಸೂತಿ, ಅಜ್ರಖ್ ಬ್ಲಾಕ್ ಪ್ರಿಂಟಿAಗ್, ಬಂಧೇಜ್, ಶಾಲುಗಳು ಹಾಗೂ ಇತರ ಪರಂಪರೆಯ ಕರಕುಶಲ ವಸ್ತುಗಳನ್ನು ವಿಶೇಷವಾಗಿ ಪ್ರದರ್ಶಿಸಲಾಗುತ್ತದೆ.
ಈ ಮೇಳಕ್ಕೆ ಇನ್ನಷ್ಟು ಸಾಂಸ್ಕöÈತಿಕ ಮೆರುಗು ನೀಡುವ ಉದ್ದೇಶದಿಂದ ಜುಲೈ 3ರಿಂದ 5ರವರೆಗೆ ಗುಜರಾತ್ ಸರ್ಕಾರದ ಕ್ರೀಡೆ, ಯುವಜನ ಮತ್ತು ಸಾಂಸ್ಕöÈತಿಕ ಚಟುವಟಿಕೆಗಳ ಇಲಾಖೆಯ ಸಹಯೋಗದಲ್ಲಿ ಮೂರು ದಿನಗಳ ಸಾಂಪ್ರದಾಯಿಕ ಗುಜರಾತಿ ಸಾಂಸ್ಕöÈತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಗುಜರಾತಿ ರಾಸ್‌ಗರ್ಬಾ, ಕಚ್‌ನ ಜಂಕಾರ್ ಡ್ಯಾನ್ಸ್ ಅಕಾಡೆಮಿಯಿಂದ ಕುಚ್ಚಿ ರಾಸ್‌ಗರ್ಬಾ ಮತ್ತು ಜುನಾಗಢದ ಶ್ರೀ ಭವಾನಿ ಟಿಪ್ಪಾಣಿ ಲೋಕ ನೃತ್ಯ ಮಂಡಳಿಯಿAದ ಟಿಪ್ಪಾಣಿ ಜಾನಪದ ನೃತ್ಯ, ಗುಜರಾತ್‌ನ ಸಮೃದ್ಧ ಜಾನಪದ ಮತ್ತು ಸಾಂಸ್ಕöÈತಿಕ ವೈಭವವನ್ನು ಬಿಂಬಿಸುವ ವಿವಿಧ ಸಾಂಸ್ಕöÈತಿಕ ಪ್ರದರ್ಶನಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಈ ಮೇಳವನ್ನು ಜುಲೈ 3ರಂದು ಮೈಸೂರಿನ ಜೆ ಎಸ್ ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಉದ್ಘಾಟಿಸಲಾಗುವುದು.
ಪ್ರವೇಶ ಮತ್ತು ವಾಹನ ನಿಲುಗಡೆ ಸಂಪೂರ್ಣ ಉಚಿತವಾಗಿದೆ. ಈ ಗುಜರಾತ್ ಕರಕುಶಲ ಉತ್ಸವವು ದಿನಾಂಕ 03 ಜುಲೈ ರಿಂದ 12 ಜುಲೈ ರವರೆಗೆ ಪ್ರತಿದಿನ ಬೆಳಿಗ್ಗೆ ಗಂಟೆ 10 ರಿಂದ ರಾತ್ರಿ ಗಂಟೆ 9.00 ರತನಕ ಉಚಿತ ಪ್ರವೇಶದೊಂದಿಗೆ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಎಸ್‌ಎಸ್ ಅರ್ಬನ್ ಹಾತ್‌ನ ಸಂಯೋಜಕ ರಾಕೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.