
ಮೈಸೂರು: ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್ಎಸ್ ಅರ್ಬನ್ ಹಾತ್ನಲ್ಲಿ ಶುಕ್ರವಾರ ಸಂಜೆ ನಡೆದ ಸಮಾರಂಭದಲ್ಲಿ ಗುಜರಾತ್ ಕರಕುಶಲ ಉತ್ಸವ-2026ಕ್ಕೆ ಚಾಲನೆ ನೀಡಲಾಯಿತು.
ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ಸರ್ಕಾರದ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕ ಎ. ಬಿ. ಬಸವರಾಜು ಉತ್ಸವವನ್ನು ಉದ್ಘಾಟಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಎಚ್. ಆರ್. ರಾಜಪ್ಪ, ಇಂಡೆಕ್ಸ್÷್ಟ-ಸಿ, ಗುಜರಾತ್ನ ಪ್ರಧಾನ ವ್ಯವಸ್ಥಾಪಕ (ಹಾತ್) ಹಾಗೂ ಜಂಟಿ ಆಯುಕ್ತ ಕೆ. ಎಸ್. ಟೈಲರ್, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಮೋತಿಲಾಲ್ ಕೃಷ್ಣ ಲಮಾಣಿ, ಸಾಮಾನ್ಯ ಅಭಿವೃದ್ಧಿ ವಿಭಾಗಜ ಪ್ರಭಾರ ನಿರ್ದೇಶಕ ರೇವಣ್ಣ ಸ್ವಾಮಿ, ಜೆಎಸ್ಎಸ್ ಮಹಾವಿದ್ಯಾಪೀಠದ ಜೆಎಸ್ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಉಪ ನಿರ್ದೇಶಕ ಬಿ. ಇಳಂಗೋವನ್, ಹಾಗೂ ಇಂಡೆಕ್ಸ್÷್ಟ-ಸಿ, ಗುಜರಾತ್ ವ್ಯವಸ್ಥಾಪಕ (ಮಾರುಕಟ್ಟೆ), ಡಾ. ಸ್ನೇಹಲ್ ಮಕ್ವಾನ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉತ್ಸವವು ಜುಲೈ 3ರಿಂದ ಜುಲೈ 12ರವರೆಗೆ ಒಟ್ಟು 10 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 10 ಗಂಟೆಯಿAದ ರಾತ್ರಿ 9 ಗಂಟೆಯವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಈ ಉತ್ಸವದಲ್ಲಿ ಗುಜರಾತ್ ರಾಜ್ಯದ 100 ಮಳಿಗೆಗಳಲ್ಲಿ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ. ಗುಜರಾತಿನ ಸಾಂಪ್ರದಾಯಿಕ ಕಲೆ, ಕೈಮಗ್ಗ ಹಾಗೂ ಕರಕುಶಲ ವೈಭವವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಅಪರೂಪದ ಅವಕಾಶ ಇದಾಗಿದೆ.
ಉತ್ಸವದ ವಿಶೇಷ ಆಕರ್ಷಣೆಯಾಗಿ ಜುಲೈ 3, 4 ಹಾಗೂ 5ರಂದು ಸಂಜೆ 6.00 ಗಂಟೆಯಿAದ ರಾತ್ರಿ 8.00 ಗಂಟೆಯವರೆಗೆ ಗುಜರಾತಿನ ಪ್ರಸಿದ್ಧ ರಾಸ್-ಗರ್ಬಾ ಹಾಗೂ ಟಿಪ್ಪಣಿ ಸಾಂಸ್ಕöÈತಿಕ ನೃತ್ಯ ಪ್ರದರ್ಶನಗಳು ನಡೆಯಲಿವೆ.
ಉತ್ಸವಕ್ಕೆ ಸಾರ್ವಜನಿಕರು, ಕರಕುಶಲಾಭಿಮಾನಿಗಳು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಗುಜರಾತಿನ ಶ್ರೀಮಂತ ಕರಕುಶಲ, ಕೈಮಗ್ಗ ಮತ್ತು ಸಾಂಸ್ಕöÈತಿಕ ಪರಂಪರೆಯನ್ನು ವೀಕ್ಷಿಸಿ ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.