Skip to main content

3Kaala News

ಸುಭಾಷಿತ 

ಬದುಕೆಂಬುದು ಚೈನಿನ ಸರಪಳಿ ಇದ್ದ ಹಾಗೆ. ಪ್ರತಿಕೊಂಡಿಯೂ ಗಟ್ಟಿಯಾಗಿರಬೇಕು. ಕೊಂಡಿಗಳ ನಡುವೆ ಬಿರುಕು ಬಿಟ್ಟಾಗ ಗಟ್ಟಿಯಾದ ಬೆಸುಗೆಗಳನ್ನು ನಿರಂತರವಾಗಿ ಹಾಕುತ್ತಿರಬೇಕು. ನಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಂತು; ಆದಮ್ಯ ಆತ್ಮವಿಶ್ವಾಸದಿಂದ ನಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜುಲೈ 5ರಂದು ‘ಪಾರ್ಟಿ’ ನಾಟಕ ಪ್ರದರ್ಶನ


ಮೈಸೂರು; ಸಿ.ಜಿ.ಕೆ. ನೆನಪಿನ ಗ್ರೀಷ್ಮ ರಂಗೋತ್ಸವ 2026 ಅಂಗವಾಗಿ ನಿರಂತರ ರಂಗ ತಂಡ ಹಾಗೂ ರಂಗಾಯಣವತಿಯಿAದ
ಜುಲೈ 5ರಂದು ‘ಪಾರ್ಟಿ’ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಖ್ಯಾತ ಮರಾಠಿ ನಾಟಕಕಾರ ಮಹೇಶ್ ಎಲ್ಕುಂಚವಾರ್ ಅವರ ಬಹುಚರ್ಚಿತ ನಾಟಕ ‘ಪಾರ್ಟಿ’ ಇದೇ ಜುಲೈ 5ರ ಭಾನುವಾರ ಸಂಜೆ 6.30 ಗಂಟೆಗೆ ಮೈಸೂರಿನ ರಂಗಾಯಣದ ಭೂಮಿಗೀತ ರಂಗಮAದಿರದಲ್ಲಿ ಪ್ರದರ್ಶನಗೊಳ್ಳಲಿದೆ.
ಭಾರತೀಯ ರಂಗಭೂಮಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ‘ಪಾರ್ಟಿ’ ನಾಟಕವು ಕಲೆ, ಸಾಹಿತ್ಯ, ಬೌದ್ಧಿಕ ವಲಯ, ಸಾಮಾಜಿಕ ಮೌಲ್ಯಗಳು ಹಾಗೂ ಮಾನವ ಸಂಬAಧಗಳ ಸಂಕೀರ್ಣತೆಯನ್ನು ಸೂಕ್ಷ÷್ಮವಾಗಿ ವಿಶ್ಲೇಷಿಸುವ ಕೃತಿಯಾಗಿದೆ. ಸಮಕಾಲೀನ ಸಮಾಜದ ವಾಸ್ತವತೆಗಳನ್ನು ಪ್ರೇಕ್ಷಕರ ಮುಂದೆ ಚಿಂತನಾತ್ಮಕವಾಗಿ ಅನಾವರಣಗೊಳಿಸುವ ಈ ನಾಟಕ, ಇಂದಿನ ಕಾಲಘಟ್ಟದಲ್ಲಿಯೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಈ ರಂಗಪ್ರಯೋಗವನ್ನು ಹಿರಿಯ ರಂಗ ನಿರ್ದೇಶಕರಾದ ಚಿದಂಬರರಾವ್ ಜಂಬೆ ಅವರು ನಿರ್ದೇಶಿಸಿದ್ದು, ಮೂಲ ಮರಾಠಿ ಕೃತಿಯನ್ನು ಪ್ರಸಾದ್ ಕುಂದೂರು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾಟಕಕ್ಕೆ ಕಿರಣ್ ಬಿ.ಕೆ. ಅವರ ಸಂಗೀತ, ಮಧು (ಓSಆ) ಅವರ ರಂಗಸಜ್ಜಿಕೆ ಹಾಗೂ ಜೀವನ್ ಕುಮಾರ್ ಬಿ. ಹೆಗ್ಗೋಡು ಅವರ ಬೆಳಕಿನ ವಿನ್ಯಾಸವು ವಿಶೇಷ ಮೆರುಗು ನೀಡಿವೆ. ರಂಗಭೂಮಿಯ ಗುಣಮಟ್ಟದ ಪ್ರದರ್ಶನಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾಗಿರುವ
ಈ ರಂಗೋತ್ಸವದಲ್ಲಿ ನಗರದ ರಂಗಾಸಕ್ತರು, ವಿದ್ಯಾರ್ಥಿಗಳು, ಸಾಹಿತ್ಯಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕವನ್ನು ಯಶಸ್ವಿಗೊಳಿಸಬೇಕೆಂದು ರಂಗಾಯಣ, ಮೈಸೂರು ಹಾಗೂ ನಿರಂತರ ರಂಗ ತಂಡ, ಮೈಸೂರು ಮನವಿ ಮಾಡಿಕೊಂಡಿವೆ.