Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಡಿ.ಬನುಮಯ್ಯ ಯುವ ಬ್ರಿಗೇಡ್ ವತಿಯಿಂದ ಬನುಮಯ್ಯ ಜಯಂತಿ ಆಚರಣೆ


ಮೈಸೂರು; ಧರ್ಮ ಪ್ರಕಾಶ್ ರಾವ್ ಬಹದ್ದೂರ್ ಡಿ ಬನುಮಯ್ಯನವರ 166 ನೇ ಜಯಂತಿಯನ್ನು ಇಂದು ಬನುಮಯ್ಯ ಕಾಲೇಜಿನ ಆವರಣದಲ್ಲಿ ಆಚರಿಸಲಾಯಿತು. ಬನುಮಯ್ಯ ಅವರ ಪುತ್ಥಳಿಗೆ ಶಾಸಕ ಟಿ.ಎಸ್ ಶ್ರೀವತ್ಸ ಅವರು ಮಾಲಾರ್ಪಣೆ ಮಾಡುವ ಮೂಲಕ ಜಯಂತಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು ಮತ್ತು ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು ವಿಶೇಷವಾಗಿ ಈ ಬಾರಿಯ ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಮೇಘನಾ ಬಿ, ತೇಜಸ್ ಎಂ. ಧೃತಿ ಆರ್. ಲತಾ ಎಲ್. ರಕ್ಷಿತಾ ಬಿ. ಬಿ.ಮೇಘನಾ ಎಂಬ ವಿದ್ಯಾರ್ಥಿಗಳನ್ನು ಶಾಸಕರು ಸನ್ಮಾನಿಸಿದರು. ನಂತರ ಉಚಿತ ಆರೋಗ್ಯ ತಪಾಸಣೆ ಯಲ್ಲಿ ಶಾಸಕರು ತಮ್ಮ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ಬನುಮಯ್ಯ ಸಂಸ್ಥೆಯ ಅಧ್ಯಕ್ಷ ಜಯದೇವ್. ಬಿಜೆಪಿ ಮುಖಂಡರಾದ ಶುಶ್ರುತ್ ಗೌಡ, ಎನ್.ಪ್ರದೀಪ್ ಕುಮಾರ್, ವಿ.ರವಿ, ದೀಪಕ್, ದಿನೇಶ್, ಚಿದಾನಂದ ಹಾಗೂ ಮುಖಂಡರುಗಳಾದ ಗೋಕುಲ್ ಗೋವರ್ಧನ್, ರವಿಶಂಕರ್, ಮಂಜು ಎಂ. ಎಸ್ ಎನ್ ರಾಜೇಶ್, ಶಿವಣ್ಣ, ಶಶಿಧರ್, ದಾಮೋದರ್, ರಾಕೇಶ್ ಭಟ್, ಪ್ರತೀಕ್, ವಿನೋದ್ ರಾಜೇ ಅರಸ್, ಬಾಬು ರಂಗನಾಥ್, ನಿಶಾಂತ್ ಪಾಲ್, ಕೋಮಲಾ, ದೀಪಾ, ಶೃತಿ, ಲಕ್ಷಿ÷್ಮ ಮುಂತಾದವರು ಇದ್ದರು.