Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಾಡಿನ ಪ್ರತಿಯೊಬ್ಬ ಅರ್ಹ ಮತದಾರರೂ ನಿಮ್ಮ ಮತದಾನದ ಹಕ್ಕನ್ನು ಭದ್ರಪಡಿಸಿಕೊಳ್ಳಿ; ಶಾಸಕ ಟಿ.ಎಸ್.ಶ್ರೀವತ್ಸ


ಮೈಸೂರು; ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಶಾಸಕ ಟಿ.ಎಸ್.ಶ್ರೀವತ್ಸ ಅವರು ಚಾಲನೆ ನೀಡಿದರು.
ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮತದಾರರ ಎಣಿಕೆ ನಮೂನೆ ಹಾಗೂ ಅವರ ಕುಟುಂಬದವರ ಎಣಿಕೆ ನಮೂನೆ ಯನ್ನು ವಲಯ ಕಚೇರಿ 01 ರಿಂದ ಮನೆ ಮನೆ ಭೇಟಿಯ ಮೂಲಕ ವಿತರಿಸಲಾಯಿತು. ಶಾಸಕ ಟಿ.ಎಸ್.ಶ್ರೀವತ್ಸ ಅವರು ಎಣಿಕೆ ನಮೂನೆಗೆ ಈಗಾಗಲೇ 2002 ರಲ್ಲಿನ ಮಾಹಿತಿಯನ್ನು ಕರ್ನಾಟಕ ಚುನಾವಣಾ ಆಯೋಗದ ವೆಬ್ ಸೈಟ್‌ನಿಂದ ಪಡೆದುಕೊಂಡು ಎಣಿಕೆ ನಮೂನೆಯಲ್ಲಿ ಸದರಿ ಮಾಹಿತಿಯನ್ನು ಸ್ವತಃ ತುಂಬಿ ಸಹಿ ಮಾಡುವ ಮೂಲಕ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಿದರು.
ತಮ್ಮ ಮನೆಯಲ್ಲಿಯೇ ಶಾಸಕರು ನೀಡಿದ ಮಾಹಿತಿಯನ್ನು, ಮತಗಟ್ಟೆ ಅಧಿಕಾರಿಗಳು ನೀಡಿರುವ ಮಾಹಿತಿಯು ಸರಿ ಇದೆಯೇ ಎಂದು ಪರಿಶೀಲಿಸಿ, ಡಿಜಿಟೈಜೇಷನ್ ಮಾಡುವ ಮೂಲಕ ಕರಡು ಮತದಾರರ ಪಟ್ಟಿಗೆ ಶಾಸಕರ ಹೆಸರು ಸೇರ್ಪಡೆಗೆ ಕ್ರಮ ಕೈಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಟಿ.ಎಸ್.ಶ್ರೀವತ್ಸ ಅವರು, ಮತದಾನ ಎಷ್ಟು ಮುಖ್ಯವೋ, ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ.ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ, ನೋಂದಣಿ ಮಾಡುವ ಮೂಲಕ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ನಾಡಿನ ಪ್ರತಿಯೊಬ್ಬ ಅರ್ಹ ಮತದಾರರೂ ಬಿಎಲ್‌ಓಗಳಿಗೆ ಸಹಕರಿಸಿ, ನಿಮ್ಮ ಮತದಾನದ ಹಕ್ಕನ್ನು ಭದ್ರಪಡಿಸಿಕೊಳ್ಳಬೇಕಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳಾದ ಶ್ರೀ ಸೋಮಶೇಖರ್,ವಲಯ ಕಚೇರಿ 02 ಮತ್ತು 03ರ ವಲಯ ಆಯುಕ್ತರುಗಳಾದ ಶ್ರೀ ಗಿರೀಶ್ ಮತ್ತು ಶ್ರೀ ಸಂದೀಪ್, ವಲಯ ಕಚೇರಿ 01 ರ ಕಂದಾಯ ಅಧಿಕಾರಿಗಳಾದ ಶ್ರೀ ಅನಿಲ್ ಕುಮಾರ್ ಬಿ ಎಸ್, ಕಂದಾಯ ಪರಿವೀಕ್ಷಕರಾದ ಶ್ರೀ ರಕ್ಷಿತ್, ಹಾಗೂ ಬಿಜೆಪಿ ಮುಖಂಡರಾದ ಪ್ರದೀಪ್ ಕುಮಾರ್. ಕಿಶೋರ್ ಜೊತೆಗೆ ಮತಗಟ್ಟೆ ಅಧಿಕಾರಿಗಳು ಹಾಜರಿದ್ದರು.