Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜುಲೈ 10 ರಂದು ಮಹಾತ್ಮನ ಮಗಳು’ ಪುಸ್ತಕದ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ
ಮೈಸೂರು; ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯವರಿAದ ಮೀರಾ ಬೆಹನ್ ಯಾನೆ ಮೀರಕ್ಕ ಎಂದು ಕರೆಯಲ್ಪಡುವ ಮೆಡಿಲಿನ್ ಸ್ಲೇಡ್ ಅವರ ಆತ್ಮ ಕಥೆಯ ಕನ್ನಡ ಅನುವಾದ ‘ಮಹಾತ್ಮನ ಮಗಳು’ ಪುಸ್ತಕದ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮವನ್ನು ಜುಲೈ 10 ರಂದು ಹಮ್ಮಿಕೊಳ್ಳಲಾಗಿದೆ. ಕನ್ನಡಕ್ಕೆ ಈ ಪುಸ್ತವನ್ನು ಮುಂಜುನಾಥ್ ಚಾಂದ್ ಅವರು ಅನುವಾದಿಸಿದ್ದಾರೆ.
ಗಾಂಧೀಜಿಯವರು ತಮ್ಮ ಮಗಳೆಂದೇ ಸ್ವೀಕರಿಸಿದ ಈ ವಿದೇಶಿ ಮಹಿಳೆಯ ಅನುಭವದ ಮೂಸೆಯಲ್ಲಿ ಗಾಂಧೀಜಿಯವರು, ಆಪ್ತವಾಗಿ, ಆರ್ದ್ರವಾಗಿ, ಅನುಭವವಾಗಿ ಮೂಡಿಬರುತ್ತಾರೆ.
ಕೃತಿಯ ಕುರಿತು ಡಾ. ಓ. ಎಲ್. ನಾಗಭೂಷಣಸ್ವಾಮಿ, ಲೇಖಕರು, ವಿಮರ್ಶಕರು, ನಿವೃತ್ತ ಪ್ರಾಧ್ಯಾಪಕರು, ಸ್ನೇಹ ಸಮತಾ, ಉಪನ್ಯಾಸಕರು, ಹೆಚ್. ಎಂ. ಕಲಾಶ್ರೀ. ನಿವೃತ್ತ ಪ್ರಾಧ್ಯಾಪಕರು, ಲೇಖಕರು ಮಾತನಾಡಲಿದ್ದು, ಹಿರಿಯ ರಂಗಕರ್ಮಿಗಳಾದ ಪ್ರಸನ್ನ ಹಾಗೂ ಅನುವಾದಕರಾದ ಮಂಜುನಾಥ್ ಚಾಂದ್ ಉಪಸ್ಥಿತರಿರಲಿದ್ದಾರೆ.
ಜೆ.ಎಲ್.ಬಿ. ರಸ್ತೆಯಲ್ಲಿರುವ ಹಾರ್ಡ್ವಿಕ್ ಶಾಲಾ ಆವರಣದಲ್ಲಿ ಅಂದು ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ಮೊ.ನಂ 96868 92255ನ್ನು ಸಂಪರ್ಕಿಸುವAತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.