
ಮೈಸೂರು; ಚಿತ್ರ ನಟ ಹಾಗೂ ಬಿಜೆಪಿ ಮುಖಂಡ ಎಸ್ ಜಯಪ್ರಕಾಶ್ (ಜೆಪಿ) ಹಾಗೂ ಭಗೀರಥ ಚಿತ್ರದ ನಿರ್ಮಾಪಕರಾದ ಚೇತನ್ ರಮೇಶ್ ರವರು ಇಂದು ಮೈಸೂರಿನಲ್ಲಿ ಗಾನಕೋಗಿಲೆ ಎಸ್ ಜಾನಕಿ ರವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆದರು.
ಮಹಾರಾಜ ಕಾಲ್ಭೆಜ್ ಮೈದಾನಕ್ಕೆ ಆಗಮಿಸಿದ ಅವರು, ಜಾನಕಮ್ಮನವರ ದರ್ಶನ ಪಡೆದು, ಭಾವುಕರಾಗಿ ನಮನ ಸಲ್ಲಿಸಿದರು. ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಜಾನಕಿ ನಿಧನಕ್ಕೆ ಸಂತಾಪ ಸೂಚಿಸಿದರು. ಬಳಿಕ ಈ ಬಾರಿ ನಡೆಯುವ ನಾಡ ಹಬ್ಬ ಮೈಸೂರು ದಸರಾ ಉತ್ಸವದಲ್ಲಿ ಎಸ್ ಜಾನಕಿ ರವರ ಹಾಡುಗಳ ರಸ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ಸರ್ಕಾರಕ್ಕೆ ಎಸ್ ಜಯಪ್ರಕಾಶ್ (ಜೆಪಿ) ಮನವಿ ಮಾಡಿದರು.