Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಎಸ್.ಜಾನಕಿಯವರ ಅಂತಿಮ ದರ್ಶನಕ್ಕಾಗಿ ಬಂದ ಕನ್ನಡ ಚಿತ್ರರಂಗ


ಮೈಸೂರು; ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶನಿವಾರ ರಾತ್ರಿ ನಿಧನರಾದ ಖ್ಯಾತ ಬಹುಭಾಷ ಗಾಯಕ ಎಸ್.ಜಾನಕಿಯವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಕನ್ನಡ ಚಿತ್ರರಂಗದ U್ಪಣ್ಯರ ದಂಡೇ ಮೈಸೂರಿಗೆ ಭಾನುವಾರ ಆಗಮಿಸಿತ್ತು. ನಗರದ ಮಹಾರಾಜ ಕಾಲ್ಭೆಜ್ ಮೈದಾನದಲ್ಲಿ ಎಸ್.ಜಾನಕಿಯವರ ಅಂತಿಮ ದರ್ಶನ ಪಡೆಯುವುದಕ್ಕಾಗಿ ಜಿಲ್ಲಾಡಳಿತ ಸಕಲ ವ್ಯವಸ್ಥೆಯನ್ನು ಮಾಡಿತ್ತು. ಕನ್ನಡ ಚಿತ್ರ ರಂಗದ ಸಾಹಿತಿಗಳು, ಗಾಯಕರು, ಸಂಗೀತ ನಿರ್ದೇಶಕರು, ಚಿತ್ರ ನಟಿಯರು, ನಿರ್ಮಾಪಕರು, ಕಲಾವಿದರು ಆಗಮಿಸಿ, ಎಸ್.ಜಾನಕಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಭಾವಪೂರ್ಣ ನಮನವನ್ನು ಸಲ್ಲಿಸಿದರು. ಈ ವೇಳೆ ಎಸ್,ಜಾನಕಿಯವರ ಬಗ್ಗೆ ತಮ್ಮ ನುಡಿಗಳನ್ನಾಡಿದರು.

ಮೈಸೂರು ವಿವಿಯಲ್ಲಿ ಅಧ್ಯಯನ ಪೀಠ ಸ್ಥಾಪನೆಯಾಗಲಿ

1975 ರಿಂದಲೂ ನನಗೆ ಜಾನಕಮ್ಮ ಪರಿಚಯ. ಡಾ.ರಾಜ್‌ಕುಮಾರ್ ಅವರೊಂದಿಗಿನ ಮೊದಲ ಚಿತ್ರ ಪ್ರೇಮದ ಕಾಣಿಕೆ ಬಂದಾಗ ಅವರ ಭೇಟಿಯಾಗಿತ್ತು. ಲೈವ್ ಆರ್ಕೇಸ್ಟಾçಗಳಲ್ಲಿ ನಮ್ಮ ಧ್ವನಿಯನ್ನು ಅವರು ಹುರಿದುಂಬಿಸುತ್ತಿದ್ದರು. ಈ ರೀತಿ ಸಾಧನೆ ಮಾಡುವುದು ಸುಲಭವಲ್ಲ. ಅವರು ಮೈಸೂರಿನ ಸೊಸೆಯಾಗಿ ಇಲ್ಲಿಯೇ ಉಸಿರು ಬಿಟ್ಟಿರುವುದರಿಂದ, ಮೈಸೂರು ವಿಶ್ವವಿದ್ಯಾಲಯದಲ್ಲಿ ಅವರ ಹೆಸರಿನಲ್ಲಿ ಒಂದು ಅಧ್ಯಯನ ಪೀಠ ಆರಂಭವಾಗಬೇಕು.
-ಜಯಮಾಲಾ, ಹಿರಿಯ ನಟಿ

ಸಕಲ ಸರ್ಕಾರಿ ಗೌರವ ಸಿಗಬೇಕು

ಗಾನಕೋಗಿಲೆ ಎಂದು ಖ್ಯಾತರಾಗಿದ್ದ ಬಹುಭಾಷದಲ್ಲಿ ಸುಲಲಿತವಾಗಿ ಹಾಡುತ್ತಿದ್ದ ಜಾನಕಮ್ಮ ಅವರು ಮೈಸೂರಿನಲ್ಲಿ ಎಲ್ಲರನ್ನೂ ಅಗಲಿದ್ದಾರೆ. ಕನ್ನಡಿಗರಾಗಿ ನಮಗೆ ದುಃಖ ಆಗುತ್ತಿದೆ. ಅವರನ್ನು ನಮ್ಮ ನಾಡಿನಲ್ಲಿನಲ್ಲಿ, ಅದರಲ್ಲೂ ಮೈಸೂರಿನಲ್ಲಿಯೇ ವಾಸಿಸಿ, ಇಹಲೋಕ ತ್ಯಜಿಸಿದ್ದಾರೆ. 17ಕ್ಕೂ ಹೆಚ್ಚು ದೇಶ ಹಾಗೂ ವಿದೇಶದ ಭಾಷೆಗಳಲ್ಲಿ ಹಾಡಿ ಅವರು ವಿಶೇಷ ದಾಖಲೆ ಬರೆದಿದ್ದಾರೆ. ತುಂಬು ಜೀವನ ಪೂರ್ಣಗೊಳಿಸಿದ ಅವರಿಗೆ ಸರ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ವಿದಾಯ ಹೇಳಬೇಕು.

-ತಾರಾ ಅನುರಾಧಾ, ಹಿರಿಯ ನಟಿ

ಸೂರ್ಯ ಚಂದ್ರರಿರುವವರೆಗೆ ಶಾಶ್ವತ

ಇತ್ತೀಚಿನ ದಿನಗಳಲ್ಲಿ ನಮ್ಮ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲು ಪ್ರಯತ್ನಿಸುತ್ತಿದ್ದೆವು. ಆದರೆ ಈ ಸುದ್ದಿ ತೀವ್ರ ಬೇಸರ ಮೂಡಿಸಿದೆ. ಅವರ ಹಾಡುಗಳಿಂದ ನಮಗೆ ಮನರಂಜನೆ ಮಾತ್ರವಲ್ಲ, ಕಲಿಕೆಯೂ ಹೆಚ್ಚುತ್ತಿತ್ತು. ಹೊಸಬರನ್ನು ಪ್ರೀತಿಯಿಂದ ಪ್ರೋತ್ಸಾಹಿಸುತ್ತಿದ್ದ ಅವರಿಗೆ ದೊಡ್ಡ ಗಾಯಕಿ ಎಂಬ ಅಹಂಕಾರವಿರಲಿಲ್ಲ. ಅವರು ಸೂರ್ಯ-ಚಂದ್ರರಿರುವವರೆಗೂ ಶಾಶ್ವತವಾಗಿ ಇರುತ್ತಾರೆ.

-ವಿಜಯಪ್ರಕಾಶ್, ಗಾಯಕ

ಎಸ್.ಜಾನಕಮ್ಮ ನಿಧನದಿಂದ ಸಂಗೀತ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. ಸರ್ಕಾರ ತಕ್ಷಣವೇ ಜಾನಕಮ್ಮ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯದಲ್ಲಿ ಪೀಠ ಸ್ಥಾಪಿಸಬೇಕು. ಬೆಂಗಳೂರು ಅಥವಾ ಮೈಸೂರಿನ ಪ್ರಮುಖ ರಸ್ತೆಯೊಂದಕ್ಕೆ ಅವರ ಹೆಸರನ್ನು ಇಡಬೇಕು.

-ಕೆ.ಮಂಜು, ಚಿತ್ರ ನಿರ್ಮಾಪಕ

ಅಹಂಕಾರವಿಲ್ಲದ ಮಹಾನ್ ತಾಯಿ:

ಜಾನಕಮ್ಮ ಅವರು ಮಹಾನ್ ಗಾಯಕಿ ಮಾತ್ರವಲ್ಲ, ಅದ್ಭುತ ವ್ಯಕ್ತಿತ್ವದ ಗಾಯಕಿ, ನಾಯಕಿ. ನನ್ನ ತಾಯಿ ಲೀಲಾವತಿ ಮತ್ತು ಜಾನಕಮ್ಮ ಇಬ್ಬರೂ ಸಮಕಾಲೀನರು, ಅತ್ಯಂತ ಆತ್ಮೀಯರಾಗಿದ್ದರು. ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದರೂ ಜಾನಕಮ್ಮ ಅವರಲ್ಲಿ ಲವಲೇಶದಷ್ಟು ಅಹಂಕಾರವಿರಲಿಲ್ಲ. ಅವರ ಮಧುರ ಮಾತುಗಳು ಮತ್ತು ಲಿಪಿಗಳ ಮೇಲಿದ್ದ ಹಿಡಿತ ಅನನ್ಯ. ನನ್ನ ತಾಯಿ ಲೀಲಾವತಿ ಅವರು ಇದ್ದಾಗಲೂ ಅವರೊಂದಿಗೆ ಮಾತನಾಡುತ್ತಿದ್ದರು. ಅವರ ಕೊನೆಯ ಮಾತುಗಳನ್ನು ಮರೆಯಲು ಸಾಧ್ಯವಿಲ್ಲ. ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ.

-ವಿನೋದ್ ರಾಜ್, ನಟ

ಎಸ್.ಜಾನಕಿಯವರ ಸಂಗೀತ ಮತ್ತು ವಿನಯತೆ ಎಂದಿಗೂ ಶಾಶ್ವತವಾಗಿರುತ್ತದೆ.
ಭಾರತದ ಅತ್ಯುತ್ತಮ ಗಾಯಕಿಯನ್ನು ಇಂದು ನಾವು ಕಳೆದುಕೊಂಡಿದ್ದೇವೆ. ನಾನು ಹಾಡಿದ ಯುಗಳ ಗೀತೆಗಳಲ್ಲಿ ಎಸ್.ಜಾನಕಿ ಅಮ್ಮನವರೊಂದಿಗೆ ಒಡನಾಡುವ ಹಾಗೂ ಹಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಅವರ ಸಂಗೀತ ಮತ್ತು ವಿನಯತೆ ಎಂದಿಗೂ ಶಾಶ್ವತವಾಗಿರುತ್ತದೆ. ಯಾವುದೇ ಶ್ರಮವಿಲ್ಲದೇ ಎಲ್ಲಾ ಪ್ರಕಾರದ ಗೀತೆಗಳನ್ನು ಅತ್ಯಂತ ಲೀಲಾಜಾಲವಾಗಿ ಹಾಡುತ್ತಿದ್ದರು. ದೇಶದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಧ್ವನಿಯಾಗಿರುವ ಅವರು, ತಮ್ಮ ಕೊನೆಯ ದಿನಗಳಲ್ಲಿ ನಮ್ಮ ಮೈಸೂರಿನಲ್ಲಿ ನೆಲೆಸಿದ್ದು ನಮ್ಮ ಹೆಮ್ಮೆ ಹಾಗೂ ರಾಜ್ಯದ ಭಾಗ್ಯವಾಗಿದೆ. ಅವರ 500 ವರ್ಷಗಳ ಸಾಧನೆಗೆ ಸಮನಾದ ಗಾಯನ ಈ ನಾಡಿನಲ್ಲಿ ಸದಾ ಜೀವಂತವಾಗಿರುತ್ತದೆ.
-ರಾಜೇಶ್ ಕೃಷ್ಣನ್, ಗಾಯಕ

ಜಾನಕಿಯಮ್ಮ ಕೇವಲ ಗಾಯಕಿಯಲ್ಲ, ಅವರು ನಮ್ಮ ತಾಯಿ ಸಮಾನ. ನಮ್ಮದು ಆರ್ಕೇಸ್ಟಾç ಕುಟುಂಬವಾಗಿದ್ದರಿAದ ಅವರ ಹಾಡುಗಳೇ ನಮಗೆಲ್ಲರಿಗೂ ದೊಡ್ಡ ಸ್ಪೂರ್ತಿ. ಇಂದಿನ ದಿನಗಳಲ್ಲಿ ಕೆಲವು ಗಾಯಕರು ನಿರ್ದಿಷ್ಟ ಪ್ರಕಾರದ ಹಾಡುಗಳಿಗೆ ಮಾತ್ರ ಸೀಮಿತವಾಗುತ್ತಾರೆ. ಆದರೆ ಜಾನಕಿಯಮ್ಮ ಎಲ್ಲಾ ಪ್ರಕಾರದ ಗೀತೆಗಳನ್ನು ಅದ್ಭುತವಾಗಿ ಹಾಡಿ ಸೈ ಎನಿಸಿಕೊಂಡವರು. ಅವರು ಹಾಡುವುದನ್ನು ನಿಲ್ಲಿಸಿದಾಗಲೇ ತಮ್ಮ ಜೀವನದ ಕರ್ತವ್ಯವನ್ನು ಪೂರ್ಣಗೊಳಿಸಿದ್ದರು. ಇಂತಹ ಅಪ್ರತಿಮ ಗಾಯಕಿ ಇಡೀ ಭಾರತಕ್ಕೆ ಸೇರಿದವರು. ಕಲೆ ಮತ್ತು ಸಂಸ್ಕöÈತಿಯ ತವರೂರಾದ ಮೈಸೂರಿನಲ್ಲಿ ಜಾನಕಿಯಮ್ಮ ಅವರ ಭವ್ಯ ಸ್ಮಾರಕವನ್ನು ನಿರ್ಮಿಸಬೇಕು. ಇದಕ್ಕೆ ಸರ್ಕಾರ ಸಂಪೂರ್ಣವಾಗಿ ಸಹಕಾರ ನೀಡಬೇಕು.
-ಸಾಧುಕೋಕಿಲಾ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

ಸಿನಿಮಾ ರಂಗದಲ್ಲಿ ಎಲ್ಲಾ ಪ್ರಕಾರದ ಗೀತೆಗಳಿಗೂ ಅವರೇ ಎಸ್.ಜಾನಕಿಯವರೇ ಸಾಟಿ. ಜಾನಕಮ್ಮ ಹಾಗೂ ನನ್ನದು ತಾಯಿ ಮಗನ ಸಂಬAಧ. ಅವರನ್ನು ನೆನೆದಾಗ ಪ್ರತಿಕ್ಷಣವೂ ಭಾವುಕನಾಗುತ್ತೇನೆ.
ನಾನು ಇಂದು ಚಿತ್ರರಂಗದಲ್ಲಿ ಪ್ರಣಯರಾಜ ಎಂದು ಗುರುತಿಸಿಕೊಳ್ಳಲು ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಜಾನಕಮ್ಮ ಕಾರಣ.
ಅವರನ್ನು ಕೊನೆಯದಾಗಿ ಒಮ್ಮೆ ನೋಡಬೇಕು ಎಂದುಕೊAಡಿದ್ದೆ. ಆದರೆ ಕೊನೆಗೂ ಅದು ಸಾಧ್ಯವಾಗಲಿಲ್ಲ. ಅಮ್ಮ ನಮ್ಮೊಂದಿಲ್ಲ ಇಲ್ಲದಿದ್ದರೂ ನಮ್ಮ ನೆನಪಿನಲ್ಲಿ ಎಂದೆAದಿಗೂ ಚಿರಸ್ಥಾಯಿಯಾಗಿರುತ್ತಾರೆ.
-ಶ್ರೀನಾಥ್, ಹಿರಿಯ ನಟ