
ಪಿರಿಯಾಪಟ್ಟಣ : ಸೇವಾವಧಿಯಲ್ಲಿ ಮಾಡಿದ ಸಾರ್ಥಕ ಸೇವೆಯು ಎಂದಿಗೂ ಶಾಶ್ವತವಾಗಿರುತ್ತದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ್.ಬಿ.ಕೆ. ಅಭಿಪ್ರಾಯ ವ್ಯಕ್ತಪಡಿಸಿದರು.
ಪಿರಿಯಾಪಟ್ಟಣ ತಾಲ್ಲೂಕು ಆರೋಗ್ಯ ಇಲಾಖೆಯ ತಾಲ್ಲೂಕು ಆರೋಗ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಬೆಂಗಳೂರಿಗೆ ವರ್ಗಾವಣೆಗೊಂಡ ಇವರನ್ನು ಇಲಾಖೆ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಶ್ರೀನಿವಾಸ್ ರವರು ನಾನು ತಾಲ್ಲೂಕು ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಲು ಸ್ಥಳೀಯ ಶಾಸಕರಾದ ಕೆ.ವೆಂಕಟೇಶ್ ರವರು ಸಹಕಾರ ನೀಡಿದರು ಹಾಗೂ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಇಲಾಖೆ ಸಿಬ್ಬಂದಿಗಳು ಕೂಡ ನನ್ನೊಂದಿಗೆ ಸಾರ್ವಜನಿಕರ ಸೇವೆ ಮಾಡಲು ಕೈಜೋಡಿಸಿದರು ಇದರಿಂದಾಗಿ ಯಾವುದೇ ಸಮಸ್ಯೆ ಬಂದರೂ ಸುಲಭವಾಗಿ ಬಗೆಹರಿಸಲು ಸಾಧ್ಯವಾಯಿತು.
ಎಲ್ಲರಿಗೂ ಸಾರ್ವಜನಿಕ ಸೇವೆ ಮಾಡುವ ಅವಕಾಶ ದೊರೆಯುವುದಿಲ್ಲ.ಕೆಲವು ಜನರಿಗೆ ಮಾತ್ರ ಇಂತಹ ಭಾಗ್ಯ ದೊರೆಯುತ್ತದೆ.ದೊರೆತ ಅವಕಾಶವನ್ನು ಪ್ರಾಮಾಣಿಕವಾಗಿ ಬಳಸಿಕೊಂಡು ಕೆಲಸ ಮಾಡಬೇಕು ಆಗ ಮಾತ್ರ ಸೇವೆಯಿಂದ ವರ್ಗಾವಣೆಯಾದರೂ,ನಿವೃತ್ತಿಯಾದರೂ ಅಧಿಕಾರಿಗಳನ್ನು ಜನ ಸಾಮಾನ್ಯರು ನೆನಪಿಸಿಕೊಳ್ಳುತ್ತಾರೆ. ಆದ್ದರಿಂದ್ದ ನಿಮ್ಮ ಅಭಿಮಾನಕ್ಕೆ ನಾನು ಎಂದಿಗೂ ಅಭಾರಿಯಾಗಿರುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ತಾಲ್ಲೂಕು ನೋಡಲ್ ಅಧಿಕಾರಿ ಡಾ.ಗೋಪಿನಾಥ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಪೂಜಾ, ತಾಲ್ಲೂಕು ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಲತಾ, ವೈದ್ಯರಾದ ಡಾ.ಪ್ರಕಾಶ್, ಡಾ.ಭರತ್, ಡಾ.ಸಂದೀಪ್, ಡಾ.ಮಾನಸ, ಡಾ.ಮಧುರ ಸಿಬ್ಬಂದಿಗಳಾದ ಕಿರಣ್, ಅನಿಲ್, ಭವ್ಯ, ಜ್ಯೋತಿ, ಮಧು, ಉಷಾ, ಅರುಣ್ ಸೇರಿದಂತೆ ಇತರರು ಇದ್ದರು.