
*ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ, ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳು ವಿತರಣೆ
ಮೈಸೂರು: ಇಲ್ಲಿನ ಕುವೆಂಪು ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಶ್ರೀ ರಮಣ ಜ್ಞಾನ ಕೇಂದ್ರ ಟ್ರಸ್ಟ್ ಆವರಣದಲ್ಲಿ ಭಗವಾನ್ ರಮಣ ಮಹರ್ಷಿಗಳ 146 ನೇ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 1 ಲಕ್ಷ ರೂ ವರೆಗೂ ಧನಸಹಾಯ ಮಾಡಿದರು ಹಾಗೂ 100ಕ್ಕೂ ಹೆಚ್ಚು ಮಕ್ಕಳಿಗೆ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾನಸ ಗಂಗೋತ್ರಿಯ ತತ್ವ ಶಾಸ್ತç ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಚ್ ಎಲ್ ಚಂದ್ರಶೇಖರ್ ಮಾತನಾಡಿ, ಭಗವಾನ್ ರಮಣ ಮಹರ್ಷಿಗಳ ಬಗೆ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞ ಕೆ.ಜಿ.ಸುಧೀಂದ್ರ, ಮಾನಸ ಗಂಗೋತ್ರಿಯ ತತ್ವ ಶಾಸ್ತç ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಚ್ ಎಲ್ ಚಂದ್ರಶೇಖರ್, ನಗರ ಪಾಲಿಕೆಯ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಶ್ರೀ ರಮಣ ಜ್ಞಾನ ಕೇಂದ್ರ ಗೌರವಾಧ್ಯಕ್ಷ ಎ.ಜಿ ಸುವ್ರತೀಂದ್ರ, ಗೌರವ ಕಾರ್ಯದರ್ಶಿ ಗೀತಾ ಚರಣ್, ಗೌರವ ಅಧ್ಯಕ್ಷೆ ಪ್ರಾರ್ಥನಾ ಕುಮಾರಿ, ವ್ಯವಸ್ಥಾಪಕ ಶಶಿಕುಮಾರ್, ರಾಘವೇಂದ್ರ ಅಭಿಷೇಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.