
ಮೈಸೂರು: ನಗರದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ‘ಜುಲೈ ಆವೃತ್ತಿಯ ಪ್ರವೇಶಾತಿ’ ಆರಂಭಿಸಲಾಗಿದೆ ಎಂದು ಕುಲಪತಿ ಪ್ರೊ.ಎ.ಪಿ. ಜ್ಞಾನಪ್ರಕಾಶ್ ತಿಳಿಸಿದರು.
ಗುರುವಾರ ಕೆಎಸ್‌ಒಯುನ ಬಿಒಎಂ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಯುಜಿಸಿ ಅನುಮೋದಿತ ಸ್ನಾತಕ/ ಸ್ನಾತಕೋತ್ತರ ಪದವಿ ಕೋರ್ಸ್ಗಳಾದ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್‌ಡಬ್ಲು÷್ಯ, ಬಿಎಲ್‌ಐಎಸ್ಸಿ, ಬಿಎಸ್ಸಿ-ಜನರಲ್, ಬಿಎಸ್ಸಿ-ಐಟಿ, ಎಂಎ, ಎಂಸಿಜೆ, ಎಂಕಾA, ಎಂಎಲ್‌ಐಎಸ್ಸಿ, ಎಂಸಿಎ, ಎಂಎಸ್‌ಡಬ್ಲು÷್ಯ, ಎಂಎಸ್ಸಿ, ಎಂಬಿಎ, ಪಿಜಿ ಸರ್ಟಿಫಿಕೆಟ್ ಪ್ರೋಗ್ರಾಮ್‌ಗಳು, ಯುಜಿ ಡಿಪ್ಲೊಮಾ ಹಾಗೂ ಸರ್ಟಿಫಿಕೆಟ್ ಕೋರ್ಸ್ಗಳಿಗೆ ಪ್ರವೇಶ ಪಡೆಯಬಹುದು. ಒಟ್ಟು 75 ವಿವಿಧ ಕೋರ್ಸ್/ ಕಾರ್ಯಕ್ರಮಗಳಿಗೆ (10 ಆನ್‌ಲೈನ್ ಕೋರ್ಸ್) ಪ್ರವೇಶ ಪಡೆಯಬಹುದು. ಕಾರಣಾಂತರಗಳಿAದ ಪದವಿ ಶಿಕ್ಷಣ ಮೊಟಕುಗೊಳಿಸಿದ್ದವರು, 2ನೇ ಅಥವಾ 3ನೇ ವರ್ಷಕ್ಕೆ ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶ ಪಡೆದು ವಿದ್ಯಾಭ್ಯಾಸ ಮುಂದುವರಿಸಬಹುದಾಗಿದೆ. 26 ವಿಭಾಗಗಳಲ್ಲಿ ಪಿಎಚ್‌ಡಿ ಮಾಡಬಹುದಾಗಿದೆ. ಕೌಶಲ ಅಭಿವೃದ್ಧಿ ಕೋರ್ಸ್ಗಳೂ ಇವೆ. ಸೆ.15ರವರೆಗೆ ಪ್ರವೇಶಾತಿ ಪಡೆಯಲು ಅವಕಾಶವಿದೆ.
ದೂರಶಿಕ್ಷಣ ನೀಡುವ ರಾಜ್ಯದ ಏಕೈಕ ವಿವಿಯಾಗಿದೆ. ನ್ಯಾಕ್‌ನಿಂದ ‘ಎ +’ ಗ್ರೇಡ್ ದೊರೆತಿದೆ. ಎಐ ಕೋರ್ಸ್ ಕೂಡ ಲಭ್ಯವಿದೆ. ಬಿ.ಇಡಿ.ಗೆ ಸಿಇಟಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, 500 ಸೀಟುಗಳಿಗೆ ಮಂಜೂರಾತಿ ದೊರೆತಿದೆ ಎಂದು ಹೇಳಿದರು.
ಸಾಂಪ್ರದಾಯಿಕ ವಿವಿಗಳ ಪದವಿಗೂ ಕೆಎಸ್‌ಒಯು ಪದವಿಗೂ ವ್ಯತ್ಯಾಸವೇನಿಲ್ಲ. ಕೆಎಸ್‌ಒಯುನಲ್ಲಿ ಪದವಿ ಪಡೆದವರು ಯಾವುದೇ ಸರ್ಕಾರಿ, ಖಾಸಗಿ ಕಂಪನಿಗಳ ಹುದ್ದೆಗೆ ಅರ್ಜಿ ಸಲ್ಲಿಸಲು, ಪರೀಕ್ಷೆ ತೆಗೆದುಕೊಳ್ಳಲು ಅರ್ಹರಿರುತ್ತಾರೆ ಎಂದು ತಿಳಿಸಿದರು.
ಒಟ್ಟು 39 ಪ್ರಾದೇಶಿಕ ಕೇಂದ್ರ ಹಾಗೂ 118 ಕಲಿಕಾರ್ಥಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಿ. ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.
ಪ್ರವೇಶ ಶುಲ್ಕ ಏರಿಕೆ ಇಲ್ಲ: ಯುಜಿಸಿ ನಿಯಯದ ಪ್ರಕಾರ, ಪೂರ್ಣಾವಧಿಯಲ್ಲಿ ಒಂದು ಕೋರ್ಸ್ ಹಾಗೂ ದೂರಶಿಕ್ಷಣದಲ್ಲಿ ಮತ್ತೊಂದು ಕೋರ್ಸ್ ಏಕಕಾಲದಲ್ಲಿ ಕಲಿಯಲು ಅವಕಾಶವಿದೆ. ಕೋರ್ಸ್ಗಳ ಪ್ರವೇಶ ಶುಲ್ಕದಲ್ಲಿ ಯಾವುದೇ ಏರಿಕೆ ಮಾಡಿಲ್ಲ. ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣವನ್ನು ಕಲ್ಪಿಸಲಾಗುತ್ತಿದೆ. ಜುಲೈ ಆವೃತ್ತಿಯಲ್ಲಿ ಮೊದಲ ಸೆಮಿಸ್ಟರ್ 50 ಸಾವಿರ ದಾಖಲಾತಿ ನಿರೀಕ್ಷೆ ಹಾಗೂ ಆನ್‌ಲೈನ್‌ನಲ್ಲಿ 30ಸಾವಿರ ಪ್ರವೇಶಾತಿಯ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶುಲ್ಕ ಮರುಪಾವತಿ ಷರತ್ತಿನ ಮೇಲೆ ಪ್ರವೇಶ ಪಡೆಯಬಹುದು.
ಯಾರಾರಿಗೆ ಪೂರ್ಣ ಶುಲ್ಕ ವಿನಾಯಿತಿ; ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ, ಶೇ 50ರಷ್ಟು ದೃಷ್ಟಿಹೀನ ವಿದ್ಯಾರ್ಥಿಗಳಿಗೆ (ಬಿ.ಇಡಿ, ಎಂಬಿಎ ಹೊರತುಪಡಿಸಿ), ಕೋವಿಡ್-19 ಕಾರಣದಿಂದ ಮೃತರಾದವರ ಮಕ್ಕಳಿಗೆ ಶುಲ್ಕದಲ್ಲಿ ಶೇ 10ರಷ್ಟು ರಿಯಾಯಿತಿ, ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ, ಸೈನ್ಯ ದಲ್ಲಿರುವವರು ಹಾಗೂ ಮಾಜಿ ಸೈನಿP್ಪರಿಗೆ, ಆಟೊ/ಕ್ಯಾಬ್ ಚಾಲಕರು, ಅವರ ಪತಿ/ಪತ್ನಿ, ಇಬ್ಬರು ಮಕ್ಕಳಿಗೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲು÷್ಯಕೆಆರ್‌ಟಿಸಿ, ಕೆಆರ್‌ಟಿಸಿ ನೌಕರರಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೆಎಸ್‌ಒಯು ಅಕಾಡೆಮಿಕ ಪ್ಲಾಟ್‌ಫಾರ್ಮ್ ಆಪ್ ಮೂಲಕ ವಿದ್ಯಾರ್ಥಿಗಳು ಕಲಿಕಾ ಸಾಮಗ್ರಿ, ಸಮಗ್ರ ವಿವರ ಪಡೆಯಬಹುದಾಗಿದೆ. ಯೂಟ್ಯೂಬ್ ಚಾನೆಲ್ ಮೂಲಕ ಪಾಠ ಕೇಳಬಹುದಾಗಿದೆ. ಗ್ರಂಥಾಲು ಮತ್ತು ಇ ಗ್ರಂಥಾಲಯ ಸೌಲಭ್ಯವಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕರಾಮುಕ್ತ ವಿವಿಯ ಕುಲಸಚಿವ ನವೀನ್‌ಕುಮಾರ್ ಎಸ್.ಕೆ., ಡೀನ್ (ಶೈಕ್ಷಣಿಕ) ಪ್ರೊ.ಎಂ. ರಾಮನಾಥಂನಾಯ, ಹಣಕಾಸು ಅಧಿಕಾರಿ ನಿರಂಜನರಾಜ್ ಅರಸ್, ಪ್ರೊ.ಬಸನಗೌಡ ಬಿರಾದಾರ ಉಪಸ್ಥಿತರಿದ್ದರು.